ಗಾಸಿಪ್ ಗೆ ಕೋಪಗೊಂಡು ಗರಂ ಆದ ಆಲಿಯಾ! ಹೇಳಿದ್ದೇನು ಕಾರಣವೇನು ?

ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇರುವ ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಈ ನಡುವೆ ಆಲಿಯಾಗೆ ವಿಪರೀತ ಕೋಪ ಬಂದಿದೆ. ಅದಕ್ಕೆ ಕಾರಣ ಆಗಿರುವುದು ಪತಿ ರಣಬೀರ್​ ಕಪೂರ್ ಬಗ್ಗೆ ಕೇಳಿಬಂದ ಗಾಸಿಪ್​. 

ತಮ್ಮ ಬಗ್ಗೆ ಹರಡಿರುವ ಗಾಸಿಪ್​ನ ವರದಿಯನ್ನು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಆಲಿಯಾ ಶೇರ್​ ಮಾಡಿಕೊಂಡಿದ್ದಾರೆ. ಅದರ ಜೊತೆಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಆಲಿಯಾ ಭಟ್​ ಗರ್ಭಿಣಿ  ಆಗಿರುವುದರಿಂದ ಅವರ ಸಿನಿಮಾ ಕೆಲಸಗಳು ತಡ ಆಗುತ್ತಿವೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಅದೂ ಅಲ್ಲದೇ, ಸದ್ಯ ವಿದೇಶದಲ್ಲಿ ಶೂಟಿಂಗ್​ ಮಾಡುತ್ತಿರುವ ಆಲಿಯಾರನ್ನು ವಾಪಸ್​ ಭಾರತಕ್ಕೆ ಕರೆತರಲು ರಣಬೀರ್​ ಕಪೂರ್​ ಹೋಗುತ್ತಿದ್ದಾರೆ ಎಂದು ಬರೆಯಲಾಗಿದೆ. ಇದನ್ನು ಕಂಡು ಆಲಿಯಾ ಭಟ್​ ಗರಂ ಆಗಿದ್ದಾರೆ.

‘ನನ್ನಿಂದ ಯಾವುದೇ ಸಿನಿಮಾದ ಕೆಲಸ ವಿಳಂಬವಾಗಿಲ್ಲ. ನಾನು ಮಹಿಳೆಯೇ ಹೊರತು ಪಾರ್ಸೆಲ್​ ಅಲ್ಲ. ಹಾಗಾಗಿ ನನ್ನನ್ನು ಯಾರೂ ಪಿಕ್​ ಮಾಡುವ ಅನಿವಾರ್ಯತೆ ಇಲ್ಲ. ನನಗೆ ವಿಶ್ರಾಂತಿಯ ಅವಶ್ಯಕತೆ ಇಲ್ಲ. ಆದರೆ ನಿಮಗೆ ಖಂಡಿತವಾಗಿ ವೈದ್ಯರ ಸರ್ಟಿಫಿಕೇಟ್​ ಬೇಕು’ ಎಂದು ಆಲಿಯಾ ಭಟ್​ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

‘ನಾವಿನ್ನೂ ಪುರುಷಪ್ರಧಾನ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಇದು 2022. ನಾವು ಹಳೇ ಕಾಲದ ಆಲೋಚನೆಯಿಂದ ಹೊರಬರಬಹುದೇ?’ ಎಂದು ಆಲಿಯಾ ಭಟ್​ ಅವರು ಗುಡುಗಿದ್ದಾರೆ. ಇದರ ಜೊತೆಗೆ, ತಮಗೆ ಅಭಿನಂದನೆ ತಿಳಿಸಿದ ಎಲ್ಲರಿಗೂ ಅವರು ಧನ್ಯವಾದ ಅರ್ಪಿಸಿದ್ದಾರೆ.

error: Content is protected !!
Scroll to Top
%d bloggers like this: