ಇರುವೆಗಳಿಂದ ‘ಚಿನ್ನ’ಕಳ್ಳಸಾಗಾಣಿಕೆ| ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿದ ವೀಡಿಯೋ..!

ಇರುವೆಗಳ ಒಗ್ಗಟ್ಟು ಅಂದರೆ ಒಗ್ಗಟ್ಟು. ಅವುಗಳ ಈ ಒಗ್ಗಟ್ಟಿನ ಶಕ್ತಿಗೆ ಯಾರೂ ಸರಿಸಮಾನರಲ್ಲ. ಅವು ಅನುಸರಿಸುವ ಸಾಲಿನ ಶಿಸ್ತು, ಆಹಾರ ಸಂಗ್ರಹಣೆಯಲ್ಲಿ ಇವುಗಳು ವಹಿಸುವ ಶ್ರಮ ನಿಜಕ್ಕೂ ಅಚ್ಚರಿ ಮೂಡಿಸುವುದರಲ್ಲಿ ಎರಡು ಮಾತಿಲ್ಲ. ಇವುಗಳು ಕೆಲಸ ನಿರ್ವಹಿಸುವ ಪರಿ, ಅವುಗಳ ಒಗ್ಗಟ್ಟು ನಮ್ಮನ್ನು ಸೆಳೆಯದೇ ಇರದು.

ಎಲ್ಲಿ ಸಿಹಿ ಇರುತ್ತದೋ ಅಲ್ಲಿ ಇರುವೆಗಳು ಇರುತ್ತದೆ ಎಂಬುದು ಸತ್ಯ. ಆದರೆ, ಇರುವೆಗಳು ಚೈನ್ ಹೊತ್ತು ಸಾಗುವ ದೃಶ್ಯವನ್ನು ಎಂದಾದರೂ ನೋಡಿದ್ದೀರಾ…? ಒಂದೊಮ್ಮೆ ನೋಡದೇ ಇದ್ದರೆ ಸದ್ಯ ಅಂತಹದ್ದೊಂದು ದೃಶ್ಯ ವೈರಲ್ ಆಗುತ್ತಿದೆ. ಈ ದೃಶ್ಯ ಎಲ್ಲರಲ್ಲೂ ನಗುವುದಕ್ಕೂ ಕಾರಣವಾಗಿದೆ.

ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಇಂತಹ ತಮಾಷೆಯ ದೃಶ್ಯವನ್ನು ಹಂಚಿಕೊಂಡಿದ್ದಾರೆ. ಬರೀ 7 ಸೆಕೆಂಡುಗಳ ಕ್ಲಿಪ್ ಇದು. ನೆಲದ ಮೇಲೆ ಬಿದ್ದಿದ್ದ ಚೈನನ್ನು ಇರುವೆಗಳಲ್ಲಾ ಬಹಳ ಜಾಗರೂಕತೆಯಿಂದ ಕೊಂಡೊಯ್ಯುವ ದೃಶ್ಯವನ್ನು ಇಲ್ಲಿ ನೋಡಬಹುದು. ಈ ದೃಶ್ಯವನ್ನು ನೋಡುವಾಗಲೇ ಅಚ್ಚರಿಯಾಗುತ್ತದೆ. ಈ ವಿಡಿಯೋವನ್ನು ಹಂಚಿಕೊಂಡಿರುವ ಸುಸಂತ ನಂದ ಅವರು ಬಲು ತಮಾಷೆಯ ಕ್ಯಾಪ್ಶನ್ ಕೂಡಾ ನೀಡಿದ್ದಾರೆ. ‘ಪುಟ್ಟ ಚಿನ್ನದ ಕಳ್ಳಸಾಗಣೆದಾರರು. ಪ್ರಶ್ನೆಯೆಂದರೆ, ಐಪಿಸಿಯ ಯಾವ ಸೆಕ್ಷನ್ ಅಡಿಯಲ್ಲಿ ಅವರ ವಿರುದ್ಧ ಕೇಸು ದಾಖಲಿಸುವುದು’ ಎಂಬ ಕ್ಯಾಪ್ಶನ್‌ನೊಂದಿಗೆ ಸುಸಂತ ನಂದ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಸಹಜವಾಗಿಯೇ ಈ ವಿಡಿಯೋ ಈಗ ಎಲ್ಲರ ಗಮನ ಸೆಳೆದಿದೆ. ಎಲ್ಲರೂ ಬಲು ಕುತೂಹಲದಿಂದಲೇ ಈ ದೃಶ್ಯವನ್ನು ನೋಡುತ್ತಿದ್ದಾರೆ. ಈ ದೃಶ್ಯ ಕಂಡ ಹಲವರು ಅಚ್ಚರಿ ವ್ಯಕ್ತಪಡಿಸಿದರೆ, ಸಾಕಷ್ಟು ಮಂದಿ ಒಗ್ಗಟ್ಟಿನ ಶಕ್ತಿಯ ಬಗ್ಗೆ ಗಮನ ಸೆಳೆದಿದ್ದಾರೆ. ಜತೆಗೆ, ಬಹುತೇಕರು ತಮಾಷೆಯ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.

Leave A Reply

Your email address will not be published.