“ಲೆಸ್ಬಿಯನ್ ” ಪ್ರೇಮ ಪ್ರಸಂಗ | ಕುಟುಂಬದವರ ವಿರೋಧ, ಲಿಂಗ ಬದಲಾಯಿಸಿದ ಮಹಿಳೆ!

ಲೆಸ್ಬಿಯನ್ ಸ್ನೇಹಿತೆಯೋರ್ವಳು ತನ್ನ ಸ್ನೇಹಿತೆಯೊಂದಿಗೆ ಜೀವನಪೂರ್ತಿ ಜೊತೆಯಿರಲು ಕುಟುಂಬ ವಿರೋಧಿಸಿದ್ದಕ್ಕೆ, ತನ್ನ ಲಿಂಗವನ್ನೇ ಬದಲಾಯಿಸಿದ ಘಟನೆಯೊಂದು ನಡೆದಿದೆ. ಈ ಘಟನೆ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ.

ಲೆಸ್ಬಿಯನ್ನರಾದ ಇಬ್ಬರು ಮಹಿಳೆಯರು ಗಾಢ ಪ್ರೀತಿ ಮಾಡುತ್ತಿದ್ದರು. ಆದರೆ ಇವರ ಸಂಬಂಧವನ್ನು ಎರಡು ಕುಟುಂಬಗಳು ಒಪ್ಪಿಕೊಂಡಿರಲಿಲ್ಲ. ಇದರಿಂದ ಮನನೊಂದು ಅವರಲ್ಲಿ ಒಬ್ಬರು ತನ್ನ ಲಿಂಗವನ್ನು ಬದಲಾಯಿಸಲು ಶಸ್ತ್ರಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿದರು. ಮಹಿಳೆ, ತನ್ನ ಇನ್ನೊಬ್ಬ ಮಹಿಳೆಯನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದು, ಕುಟುಂಬದವರು ವಿರೋಧ ಮಾಡಿದರು ಎಂಬ ಕಾರಣಕ್ಕೆ, ಹಾಗೂ ಜನರ ಬಾಯಿ ಮುಚ್ಚಿಸಲು ಲಿಂಗ ಬದಲಾಯಿಸುವ ನಿರ್ಧಾರಕ್ಕೆ ಬಂದಿದ್ದಾಳೆ ಎನ್ನಲಾಗುತ್ತಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಈ ಮಹಿಳೆ ಕುಟುಂಬಗಳನ್ನು ಮನವೊಲಿಸಲು ಸಾಧ್ಯವಿರುವ ಎಲ್ಲಾ ಮಾರ್ಗಗಳನ್ನು ಪ್ರಯತ್ನಿಸಿದ್ದಾಳೆ. ಆದರೆ ಎಲ್ಲವೂ ವ್ಯರ್ಥವಾದಾಗ ಬೇರೆ ದಾರಿ ಕಾಣದೆ ತನ್ನ ಲಿಂಗವನ್ನು ಬದಲಾಯಿಸಲು ನಿರ್ಧರಿಸಿದ್ದಾಳೆ ಎನ್ನಲಾಗುತ್ತಿದೆ.

ಪ್ರಯಾಗ್‌ರಾಜ್‌ನಲ್ಲಿರುವ ಆಸ್ಪತ್ರೆಯ ವೈದ್ಯರ ತಂಡವು ಮಹಿಳೆಗೆ ಬೇಕಾದ ಶಸ್ತ್ರಚಿಕಿತ್ಸೆಯನ್ನು ನಡೆಸಿದೆ. ಈ ಶಸ್ತ್ರಚಿಕಿತ್ಸೆಯ ಸಫಲ ಕೊಡಲು ಹಾಗೂ ಮಹಿಳೆಯೂ ಪುರುಷನಾಗಿ ಬದಲಾಗಲೂ ಇನ್ನೂ 1.5 ವರ್ಷಗಳು ಬೇಕಾಗುತ್ತವೆ ಎಂದು ವೈದ್ಯರು ಹೇಳಿದ್ದಾರೆ.

ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಯ ನಂತರ ಮಹಿಳೆಯು ಗರ್ಭಧರಿಸುವ ಮತ್ತು ಗರ್ಭಿಣಿಯಾಗುವ ಸ್ಥಿತಿಯಲ್ಲಿರುವುದಿಲ್ಲ. ಇಂತಹ ಶಸ್ತ್ರಚಿಕಿತ್ಸೆ ನಡೆಸಿರುವುದು ಇದೇ ಮೊದಲು ಮತ್ತು ಸುಮಾರು 18 ತಿಂಗಳ ಅವಧಿಯಲ್ಲಿ ಇದನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ. ಈ ಮಹಿಳೆಯ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಮತ್ತು ಅವರು ಉತ್ತಮವಾಗಿ ಎಂದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಡಾಕ್ಟರ್ ಹೇಳಿದ್ದಾರೆ.

error: Content is protected !!
Scroll to Top
%d bloggers like this: