ವೈದ್ಯರ ಎಡವಟ್ಟಿಗೆ ಜೀವನ ಪರ್ಯಂತ ಅಂಧನಾಗಿಯೇ ಬಾಳುವ ದುರ್ದೈವ!! ಸರಿ ಇದ್ದ ಕಣ್ಣನ್ನು ಕಿತ್ತು ಹಾಕಿದ ವೈದ್ಯರ ವಿರುದ್ಧ ಆಕ್ರೋಶ

ವೈದ್ಯರೊಬ್ಬರ ಎಡವಟ್ಟಿನಿಂದ ರೋಗಿಯೊಬ್ಬ ಜೀವನ ಪರ್ಯಂತ ಅಂಧನಾಗಿಯೇ ಬಾಳ್ವೆ ನಡೆಸುವ ಪರಿಸ್ಥಿತಿ ಒದಗಿಬಂದ ಘಟನೆಯೊಂದು ಯುರೋಪ್ ರಾಷ್ಟ್ರದ ಫ್ಲೋವಾಕಿಯದಲ್ಲಿ ನಡೆದಿದೆ.

 

ಹೌದು, ಇಲ್ಲಿನ ರೋಗಿಯೊಬ್ಬರ ಒಂದು ಕಣ್ಣಿಗೆ ತೊಂದರೆ ಇದ್ದುದರಿಂದ ವೈದ್ಯರ ಬಳಿಗೆ ತೆರಳಿದ್ದಾಗ ಪರೀಕ್ಷಿಸಿದ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಬೇಕಾದೀತು ಎಂದಿದ್ದರಂತೆ. ಅದರಂತೆ ರೋಗಿ ಶಸ್ತ್ರಚಿಕಿತ್ಸೆಗೆ ಬಂದಿದ್ದು ಈ ಸಂದರ್ಭ ವೈದ್ಯರು ಎಡವಟ್ಟು ನಡೆಸಿದ್ದಾರೆ.

ರೋಗಿಯ ಒಂದು ಕಣ್ಣಿಗೆ ಮಾತ್ರ ಸಮಸ್ಯೆ ಇದ್ದು, ಆ ಕಣ್ಣಿಗೆ ಶಸ್ತ್ರಚಿಕಿತ್ಸೆ ನಡೆಸುವ ಬದಲು ಸರಿ ಇದ್ದ ಕಣ್ಣನ್ನೇ ಕಿತ್ತು ಹಾಕಿದ್ದರು ಎನ್ನಲಾಗಿದೆ. ಇದರಿಂದ ರೋಗಿಯ ಎರಡೂ ಕಣ್ಣುಗಳು ಕಾಣದಂತಾಗಿದ್ದು, ವೈದ್ಯರ ನಿರ್ಲಕ್ಷ್ಯದಿಂದಾಗಿ ಜೀವನ ಪರ್ಯಂತ ಅಂಧನಾಗಿಯೇ ಬಾಳಬೇಕಾದ ಪರಿಸ್ಥಿತಿ ಬಂದೊದಾಗಿದೆ.ಸದ್ಯ ವೈದ್ಯರ ಮೇಲೆ ಆಕ್ರೋಶ ವ್ಯಕ್ತವಾಗಿದ್ದು, ರೋಗಿಯ ಕುಟುಂಬಸ್ಥರು ವೈದ್ಯ ಸಮೂಹಕ್ಕೆ ಹಿಡಿ ಶಾಪ ಹಾಕುತ್ತಿದ್ದಾರಂತೆ.

Leave A Reply

Your email address will not be published.