ವಾಹನ ಸವಾರರೇ, ಹೊಸ ವಾಹನ ಖರೀದಿಸಿದ ನಂತರ ಲೈಸೆನ್ಸ್‌ ಪಡೆಯುವಾಗ ಇರಲಿ ಎಚ್ಚರ!!

ಸಿಲಿಕಾನ್‌ ಸಿಟಿಯಲ್ಲಿ ದಿನದಿಂದ ದಿನಕ್ಕೆ ದುಷ್ಕರ್ಮಿಗಳ ಸಂಖ್ಯೆ ಏರುತ್ತಲೇ ಇದ್ದು, ಇದೀಗ ಯಾವ ಮಟ್ಟಕ್ಕೆ ತಲುಪಿದೆ ಎಂದರೆ ವಾಹನ ಸವಾರರಿಗೂ ತಲೆ ಬಿಸಿ ತರಿಸಿದೆ.

ಹೌದು. ವಾಹನ ಖರೀದಿ ನಂತರ ಲೈಸೆನ್ಸ್‌ ಪಡೆಯುವಾಗ ಎಚ್ಚರಿಕೆ ವಹಿಸೋದು ತುಂಬ ಅತ್ಯಗತ್ಯವಾಗಿದೆ. ಯಾಕೆಂದರೆ ಇದೀಗ ಬೆಂಗಳೂರಿನಲ್ಲಿ ನಕಲಿ ನಂಬರ್‌ ಪ್ಲೇಟ್‌ಗಳ ಹಾವಳಿ ಹೆಚ್ಚಳವಾದ ಮಾಹಿತಿ ಬಹಿರಂಗಗೊಂಡಿದೆ.

ಹೋಂಡಾ ಡಿಯೋ, ಅಕ್ವೀವ್‌ , ಸುಜುಕಿ ಜುಕ್ಸರ್‌ ಬೈಕ್‌ ಸೇರಿದಂತೆ ಪತ್ತೆಯಾಗಿದೆ. ಈ ಬಗ್ಗೆ ಆರ್‌ಟಿಓ , ಟ್ರಾಫಿಕ್‌ ಪೊಲೀಸರು ಎಚ್ಚರಿಕೆ ವಹಿಸಬೇಕಾಗಿದೆ. ಇದರಿಂದ ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಫೈನ್‌ ಕಟ್ಟಬೇಕಾದ ಪರಿಸ್ಥಿತಿ ಎದುರಾಗುತ್ತಿದೆ. ಇದಲ್ಲದೇ ಅಪರಾಧ ಪ್ರಕರಣಗಳಿಗೆ ಸಿಲುಕಿಕೊಳ್ಳುವ ಎಲ್ಲಾ ಸಾಧ್ಯತೆಗಳೂ ಹೆಚ್ಚಾಗುತ್ತದೆ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave A Reply