ನಾಯಿಗೂ ಸಿಕ್ತು ಸೀಮಂತ ಭಾಗ್ಯ !!

ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ಶ್ವಾನ ಸಾಕದವರಿಲ್ಲ. ಮನೆಯ ಸದಸ್ಯರಂತೆಯೇ ನಾಯಿಗಳನ್ನು ನೋಡಿಕೊಳ್ಳುವವರು ಅದೆಷ್ಟೋ ಮಂದಿ ಇದ್ದಾರೆ. ಅಂತೆಯೇ ಇಲ್ಲಿ ಮನೆಯ ಸಾಕು ನಾಯಿಯೊಂದಕ್ಕೆ ಗರ್ಭಾವಸ್ಥೆ ಸಂದರ್ಭ ಸೀಮಂತ ಕಾರ್ಯಕ್ರಮ ನಡೆಸಿ ಬಾಗಲಕೋಟೆಯ ಮನೆ ಮಂದಿ ಸಂಭ್ರಮಿಸಿದ್ದಾರೆ.

ಬಾಗಲಕೋಟೆ ಹುಳೇದಗುಡ್ಡದ ನಿವಾಸಿ, ರಂಗಭೂಮಿ ಕಲಾವಿದೆ ಜ್ಯೋತಿ ತಮ್ಮ ಮನೆಯ ಸಾಕು ನಾಯಿಗೆ ಸೀಮಂತ ಮಾಡಿಸಿದ್ದಾರೆ. ಜೂಲಿ ಜಾತಿಯ ಚಿಂಕವ್ವ(ಚಿಂಕಿ) ಹೆಸರಿನ ನಾಯಿಗೆ ಹಸಿರು ಬಳೆ, ಹಸಿರು ಸೀರೆ, ಕುಂಕುಮ, ಅರಿಶಿನ ಹಚ್ಚಿ, ಆರತಿ ಬೆಳಗಿ ಸೀಮಂತ ನಡೆಸಿದ್ದಾರೆ.

ಶ್ವಾನಕ್ಕೆ ಅಚ್ಚುಮೆಚ್ಚಿನ ಹಣ್ಣು ಹಂಪಲು, ಸಿಹಿ ತಿನಿಸು ಮಾಡಿ ಜ್ಯೋತಿ ಹಾಗೂ ಮನೆ ಮಂದಿ ಬಡಿಸಿದ್ದಾರೆ. ಸೀಮಂತ ಕಾರ್ಯದ ವೇಳೆ ನಾಯಿಯೂ ಶಾಂತವಾಗಿ ಕುಳಿತಿದ್ದು, ಇದರ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಸೀಮಂತ ಮಾಡಿಸಿಕೊಂಡ ನಾಯಿ ಇದೀಗ 1 ವಾರದ ಬಳಿಕ 6 ಮರಿಗಳಿಗೆ ಜನ್ಮ ನೀಡಿದೆ. 3 ಹೆಣ್ಣು ಹಾಗೂ 3 ಗಂಡು ಮರಿಗಳಿಗೆ ಚಿಂಕವ್ವ ಜನ್ಮ ನೀಡಿದೆ ಎಂದು ತಿಳಿದುಬಂದಿದೆ. ಮನೆಗೆ ಹೊಸ ಸದಸ್ಯರ ಆಗಮನದಿಂದ ಮನೆಯವರ ಖುಷಿ ಇದೀಗ ಇಮ್ಮಡಿಯಾಗಿದೆ.

Leave A Reply

Your email address will not be published.