ಗಂಭೀರ ಸ್ಥಿತಿಯಲ್ಲಿದ್ದ ಹಾಲುಗೆನ್ನೆಯ ನಟ ದಿಗಂತ್ ಹೆಲ್ತ್ ಬುಲೆಟಿನ್, ಲೇಟೆಸ್ಟ್ ಅಪ್ಡೇಟ್!

ಸ್ಯಾಂಡಲ್‌ವುಡ್ ನಟ ದೂದ್‌ಪೇಡ ದಿಗಂತ್ ಗೋವಾ ಬೀಚ್‌ನಲ್ಲಿ ಸಮ್ಮರ್ ಸಾಲ್ಟ್ ಹೊಡೆಯೋ ಸಂದರ್ಭದಲ್ಲಿ ಹೋಗಿ ಪೆಟ್ಟು ಮಾಡಿಕೊಂಡಿದ್ದರು. ಗೋವಾ ಬೀಚ್‌ನಲ್ಲಿ ಫ್ಯಾಮಿಲಿ ಜೊತೆ ಸಮಯ ಕಳೆಯುವ ಸಂದರ್ಭದಲ್ಲಿ, ಈ ಘಟನೆ ನಡೆದಿದೆ. ಬೀಚ್ ನಲ್ಲಿ ಪಲ್ಟಿ ಹೊಡೆಯುವಾಗ ದಿಗಂತ್ ಬೆನ್ನು ಮೂಳೆಗೆ ಬಲವಾದ ಪೆಟ್ಟು ಬಿದ್ದಿತ್ತು. ಸದ್ಯ ನಟ ದಿಗಂತ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ನಿನ್ನೆ ರಾತ್ರಿ ಮೂರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ದಿಗಂತ್‌ರನ್ನು ಆಸ್ಪತ್ರೆಯ ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ವೀಕೆಂಡ್ ನಲ್ಲಿ ದಿಗಂತ್ ದಂಪತಿಗಳು ಟ್ರಿಪ್ ಅಂತಾ ಹೋಗ್ತಾ ಇದ್ರು. ಈ ಬಾರಿ ವೀಕೆಂಡ್ ಟ್ರಿಪ್‌ಗೆ ಗೋವಾಗೆ ತೆರಳಿದ್ರು. ಆದ್ರೆ, ಈ ವೇಳೆ ದಿಗಂತ್ ಅಪಾಯಕ್ಕೆ ಸಿಲುಕಿದ್ದಾರೆ. ಗೋವಾದ ಬೀಚ್‌ನಲ್ಲಿ ಸಮ್ಮರ್ ಸಾಲ್ಟ್ ಮಾಡುವಾಗ ನಟ ದಿಗಂತ್ ಬೆನ್ನು ಮೂಳೆಗೆ ಬಲವಾಗಿ ಪೆಟ್ಟು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೀಗ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಟ ದಿಗಂತ್‌ಗೆ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ನಟ ದಿಗಂತ್ ಬೆನ್ನು ಮೂಳೆ ಮತ್ತು ಸ್ಪೈನಲ್ ಕಾರ್ಡ್‌ಗೆ ಗಂಭೀರ ಪೆಟ್ಟು ಬಿದ್ದಿದೆ. ಹೀಗಾಗಿ ದಿಗಂತ್‌ಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ದಿಂಗತ್ ಆರೋಗ್ಯದ ಬಗ್ಗೆ ಮಣಿಪಾಲ್ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಸ್ಪೋರ್ಟ್ಸ್ ಇಂಜುರಿಯಿಂದ ಬಳಲುತ್ತಿರುವ ನಟನಿಗೆ ಚಿಕಿತ್ಸೆ ಮುಂದುವರೆದಿದೆ. ಸದ್ಯ ದಿಂಗತ್ ಔಟ್ ಆಪ್ ಡೇಂಜರ್ ಅಂತಾ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.

Leave A Reply

Your email address will not be published.