ಸ್ಯಾಂಡಲ್ ವುಡ್ ನಟ ದೂದ್ ಪೇಡ ಖ್ಯಾತಿಯ ದಿಗಂತ್ ಕುತ್ತಿಗೆಗೆ ಬಲವಾದ ಪೆಟ್ಟು, ಗಂಭೀರ ಸ್ಥಿತಿ | ಬೆಂಗಳೂರಿಗೆ ಏರ್ ಲಿಫ್ಟ್

ಸ್ಯಾಂಡಲ್‌ವುಡ್‌ ನ ‘ದೂದ್ ಪೇಡ’ ಎಂದೇ ಖ್ಯಾತಿಯ ನಟ ದಿಗಂತ್ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹಾಲು ಗಲ್ಲದ ನಟ ದಿಗಂತ್ ಕುರಿತಾಗಿ ಇದೀಗ ಶಾಕಿಂಗ್ ನ್ಯೂಸ್ ಕೇಳಿಬಂದಿದೆ.

ನಟ ದಿಗಂತ್ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದೆ. ಗೋವಾದ ಸಮುದ್ರ ತಟದಲ್ಲಿ ಸಮ್ಮರ್ ಶಾಟ್ ಹೊಡೆಯುವ ವೇಳೆ ದಿಗಂತ್ ಕುತ್ತಿಗೆಗೆ ಪೆಟ್ಟು ಬಿದ್ದಿದೆ. ಕುಟುಂಬದ ಜೊತೆ ನಟ ದಿಗಂತ್ ಗೋವಾ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ದಿಗಂತ್ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದೆ.

ಸದ್ಯ ಗೋವಾದಲ್ಲೆ ದಿಗಂತ್ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವೇ ಗಂಟೆಗಳಲ್ಲಿ ಏರ್ ಲಿಫ್ಟ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಿಗಂತ್ ಅವರನ್ನು ಕುಟುಂಬಸ್ಥರು ಕರೆತರಲಿದ್ದಾರೆ ಎಂದು ಹೇಳಲಾಗಿದೆ.

ಗೋವಾದ ಬೀಚ್‌ನಲ್ಲಿ ಬ್ಯಾಕ್ ಪ್ಲಿಪ್ ಮಾಡುವ ವೇಳೆ ಆಯತಪ್ಪಿ ತಲೆ ಕೆಳಗಾಗಿ ಬಿದ್ದ ಪರಿಣಾಮ ದಿಗಂತ್ ಕುತ್ತಿಗೆಗೆ ತೀವ್ರ ಪೆಟ್ಟಾಗಿದೆ ಎನ್ನಲಾಗುತ್ತಿದೆ. ಘಟನೆ ನಡೆದ ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಅವರ ಕತ್ತಿನ ಮೂಳೆಗೆ ತೀವ್ರ ಪೆಟ್ಟಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಿಗಂತ್ ಅವರನ್ನು ಏರ್ ಆಂಬುಲೆನ್ಸ್‌ನಲ್ಲಿ ಬೆಂಗಳೂರಿಗೆ ತರಲಾಗುತ್ತಿದೆ. ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಗುತ್ತದೆ ಎನ್ನಲಾಗುತ್ತಿದೆ.

ದೂದ್‌ಪೇಡಾ ದಿಗಂತ್ ಎಂದೇ ಹೆಸರುವಾಸಿಯಾಗಿರುವ ನಟ ದಿಗಂತ್ ತಮ್ಮ ನಟನೆಯಿಂದಲೇ ಹೆಸರುವಾಸಿಯಾದವರು. ಹಲವಾರು ಸಿನಿಮಾಗಳಲ್ಲಿ ನಟಿಸಿದ್ದ ದಿಗಂತ್ ಕನ್ನಡ ಚಿತ್ರರಂಗದಲ್ಲಿ ಭಾರೀ ಹೆಸರನ್ನು ಮಾಡಿದ ನಟ.

ಕನ್ನಡ ನಟ ದಿಗಂತ್ ಬಾಲಿವುಡ್‌ಗೂ ಕಾಲಿಟ್ಟಿದ್ದು ನಿಮಗೆಲ್ಲಾ ಗೊತ್ತೇ ಇದೆ. ಹಿಂದಿಯ ‘ವೆಡ್ಡಿಂಗ್ ಪುಲಾವ್’ ಮತ್ತು ‘ಟಿಕೆಟ್ ಟು ಬಾಲಿವುಡ್’ ಚಿತ್ರಗಳಲ್ಲಿ ದಿಗಂತ್ ಅಭಿನಯಿಸಿದ್ದಾರೆ. ‘ಟಿಕೆಟ್ ಟು ಬಾಲಿವುಡ್’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ನಾಯಕಿ ಹೈ ಹೀಲ್ಡ್ ಚಪ್ಪಲಿಯನ್ನು ದಿಗಂತ್ ಕಡೆಗೆ ಎಸೆದಿದ್ದರು. ಅದರಿಂದ ದಿಗಂತ್ ಕಣ್ಣಿಗೆ ಪೆಟ್ಟಾಯಿತು. ಬಲಗಣ್ಣಿನ ಕಾರ್ನಿಯಾಗೆ ಪೆಟ್ಟಾದ ಪರಿಣಾಮ, ನಟ ದಿಗಂತ್ ತಿಂಗಳುಗಳ ಕಾಲ ಚಿಕಿತ್ಸೆ ಪಡೆದಿದ್ದರು.

ಇತ್ತೀಚಿಗೆ ಅವರ ನಟನೆಯ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾ ಬಿಡುಗಡೆಗೊಂಡಿತ್ತು. ಈ ಚಿತ್ರದಲ್ಲಿ ಅವರ ಪತ್ನಿ ಐಂದ್ರಿತಾ ರೇ ಸಹ ಅಭಿನಯಿಸಿದ್ದರು.

ಈಗ ಬಂದಿರೋ ಮಾಹಿತಿ ಸಮಯ ಸಂಜೆ 6.30 :
ನಟ ದಿಗಂತ್ ಅವರ ಆರೋಗ್ಯ ಸ್ಥಿರವಾಗಿದೆ. ಬೆನ್ನು ಮೂಳೆಗೆ ಪೆಟ್ಟು ಬಿದ್ದಿರುವ ಕಾರಣ, ವೈದ್ಯರು ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎಂಬುದಾಗಿ ತಿಳಿಸಿದ್ದಾರೆ. ಅದಕ್ಕಾಗಿ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿರೋದಾಗಿ ನಟ ದಿಗಂತ್ ಮಾವ, ನಟಿ ಐಂದ್ರಿತಾ ರೈ ತಂದೆ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಇಂದು ಮಣಿಪಾಲ್ ಆಸ್ಪತ್ರೆಯ ಬಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ನಟ ದಿಗಂತ್ ಮಾವ, ದಿಗಂತ್ ಗೆ ಬೆನ್ನು ಮೂಳೆಗೆ ಪೆಟ್ಟು ಬಿದ್ದಿದೆ. ಹೆಚ್ಚಿನ ಚಿಕಿತ್ಸೆಗಾಗಿ ಗೋವಾದಿಂದ ಮಣಿಪಾಲ್ ಆಸ್ಪತ್ರೆಗೆ ಕರೆ ತರಲಾಗಿದೆ. ಅವರನ್ನು ವೈದ್ಯರು ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಿದ್ದಾರೆ. ನಟ ದಿಗಂತ್ ಚೇತರಿಸಿಕೊಳ್ಳಲಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ ಎಂಬುದಾಗಿ ತಿಳಿಸಿದ್ದಾರೆ.

Leave A Reply

Your email address will not be published.