ಬೆಳ್ತಂಗಡಿ : ಒಂದೇ ಮನೆಯ 17 ಬೆಕ್ಕುಗಳು ಸಾವು; ಕಾರಣ ವೈರಲ್ ಫೀವರ್ !??

ಬೆಳ್ತಂಗಡಿ: ತಾಲೂಕಿನ ಕೆಲವು ಕಡೆಗಳಲ್ಲಿ ಸಾಕು ಬೆಕ್ಕುಗಳಿಗೆ ವೈರಲ್ ಫೀವರ್ ಸೋಂಕು ತಗುಲಿ ಬೆಕ್ಕುಗಳು ಸಾವನ್ನಪ್ಪುತ್ತಿರುವ ಪ್ರಕರಣಗಳು ವರದಿಯಾಗಿದೆ.

 

ಬೆಕ್ಕುಗಳಿಗೆ ಜ್ವರ ಕಾಣಿಸಿಕೊಂಡು ಹೊಟ್ಟೆಗೆ ತಿನ್ನುವುದನ್ನು ಬಿಟ್ಟು, ಕೇವಲ ಎರಡು ಮೂರು ದಿನಗಳ ಅಂತರದಲ್ಲಿ ಸಾವನ್ನಪ್ಪುತ್ತದೆಂದು ತಿಳಿದು ಬಂದಿದೆ. ಇಂತಹ ಪ್ರಕರಣ, ಕಣಿಯೂರು ಗ್ರಾಮದಲ್ಲಿ ನಡೆದಿದೆ.

ಕಣಿಯೂರು ಸುದರ್ಶನ ಹೆಗ್ಡೆಯವರ 17 ಬೆಕ್ಕುಗಳು ಸತ್ತು ಹೋಗಿದ್ದು, ಇದೇ ಕಾಯಿಲೆಯಿಂದ ಸತ್ತಿರಬಹುದೆಂದು ಶಂಕಿಸಲಾಗಿದೆ. ಈ ಕಾಯಿಲೆಗೆ ಚುಚ್ಚು ಮದ್ದು ಪಶುಸಂಗೋಪನಾ ಇಲಾಖೆಯಲ್ಲಿ ಲಭ್ಯವಿರುವುದಾಗಿ ತಿಳಿದುಬಂದಿದೆ.

ಸಂಬಧಪಟ್ಟ ಇಲಾಖೆ ಗ್ರಾಮಸ್ಥರಿಗೆ ಈ ಬಗ್ಗೆ ಸರಿಯಾದ ಮಾಹಿತಿ ನೀಡಿದಲ್ಲಿ ಬೆಕ್ಕುಗಳ ಸಾವನ್ನು ನಿಯಂತ್ರಣ ಮಾಡಬಹುದೆಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.