ಆಶ್ಚರ್ಯ ಆದರೂ ಸತ್ಯ…ಪ್ರಧಾನಿ ಮೋದಿಯ ಮನೆಯಲ್ಲಿ ಮುಸ್ಲಿಂ ವ್ಯಕ್ತಿಯ ವಾಸ !!

ಪ್ರಧಾನಿ ನರೇಂದ್ರ ಮೋದಿ ಆರ್ ಎಸ್ಎಸ್ ಹಿನ್ನಲೆಯವರು. ಕಟ್ಟಾ ಹಿಂದೂವಾದಿಯಾಗಿರುವ ಮೋದಿ ಮನೆಯಲ್ಲಿ ಮುಸ್ಲಿಮರೊಬ್ಬರು ವಿದ್ಯಾಭ್ಯಾಸ ಪೂರೈಸಿರುವ ವಿಷಯವೀಗ ಹೊರಬಿದ್ದಿದೆ. ಸಂಘಪರಿವಾರದ ಮನೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ವಾಸಿಸಿರುವ ಸಂಗತಿ ಇದೀಗ ಆರ್ ಎಸ್ಎಸ್ ನ ಸೌಹಾರ್ದತೆಯನ್ನು ಜರಿವವರ ಹುಬ್ಬೇರಿಸುವಂತೆ ಮಾಡಿದೆ. ತನ್ನ ತಾಯಿಯ 100ನೇ ವರ್ಷದ ಹುಟ್ಟು ಹಬ್ಬದ ವೇಳೆ ಬರೆದುಕೊಂಡಿದ್ದ ಬ್ಲಾಗ್ ನಲ್ಲಿ ತಮ್ಮ ಬಾಲ್ಯ ಸ್ನೇಹಿತ ಅಬ್ಬಾಸ್ ಕುರಿತಾಗಿ ಹೇಳಿಕೊಂಡಿದ್ದಾರೆ.

ಬ್ಲಾಗ್‍ನಲ್ಲಿ ತಮ್ಮ ತಾಯಿ ಬಾಲ್ಯದಲ್ಲಿ ಹಾಗೂ ಮದುವೆಯಾದ ಬಳಿಕ ಅನುಭವಿಸಿದ ಕಷ್ಟಗಳು ಮತ್ತು ಸವಾಲುಗಳ ಬಗ್ಗೆ ವರ್ಣಿಸಿದ್ದರು. ಜೊತೆಗೆ ಅನೇಕ ಸ್ಥಳಗಳು, ವ್ಯಕ್ತಿಗಳನ್ನು ಸ್ಮರಿಸಿಕೊಂಡಿದ್ದರು. ಅವರಲ್ಲಿ ತಮ್ಮ ತಂದೆಯ ಗೆಳೆಯನ ಮಗ ಅಬ್ಬಾಸ್‍ರನ್ನು ನೆನಪಿಸಿಕೊಂಡಿದ್ದರು. ಆ ಬಳಿಕ ಅಬ್ಬಾಸ್ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿತ್ತು.

ಮೋದಿ ಬರೆದುಕೊಂಡಂತೆ, ನನ್ನ ತಂದೆಯ ಆಪ್ತ ಸ್ನೇಹಿತ ಪಕ್ಕದ ಗ್ರಾಮದಲ್ಲಿ ವಾಸಿಸುತ್ತಿದ್ದರು. ಅವರ ಅಕಾಲಿಕ ಮರಣದ ನಂತರ, ನನ್ನ ತಂದೆ ತಮ್ಮ ಗೆಳೆಯನ ಮಗ ಅಬ್ಬಾಸ್‍ನನ್ನು ನಮ್ಮ ಮನೆಗೆ ಕರೆದುಕೊಂಡು ಬಂದರು. ಆತ ನಮ್ಮ ಜೊತೆ ಇದ್ದು ಶಿಕ್ಷಣ ಪೂರೈಸಿದರು ಎಂದು ಬರೆದುಕೊಂಡಿದ್ದರು. ಈ ಬಗ್ಗೆ ಮೋದಿ ಅವರ ಅಣ್ಣ ಮಾಧ್ಯಮವೊಂದಕ್ಕೆ ಮಾಹಿತಿ ಹಂಚಿಕೊಂಡಿದ್ದು, ಅಬ್ಬಾಸ್ ಇದೀಗ ಆಸ್ಟ್ರೇಲಿಯಾದಲ್ಲಿದ್ದಾರೆ. ಈ ಹಿಂದೆ ಗುಜರಾತ್‍ನಲ್ಲಿ ಸರ್ಕಾರಿ ಉದ್ಯೋಗಿಯಾಗಿದ್ದರು. ಆ ಬಳಿಕ ನಿವೃತ್ತಿಹೊಂದಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಅಬ್ಬಾಸ್ ಅವರಿಗೆ ಇಬ್ಬರೂ ಮಕ್ಕಳು ಹಿರಿಯ ಮಗ ಗುಜರಾತ್‍ನಲ್ಲಿ ನೆಲೆಸಿದ್ದು, ಕಿರಿಯ ಮಗ ಆಸ್ಟ್ರೇಲಿಯಾದಲ್ಲಿ ನೆಲೆಸಿರುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಇದಲ್ಲದೆ ಮೋದಿ ಮನೆಯಲ್ಲಿ ವಾಸದ ಕುರಿತು ಅಬ್ಬಾಸ್ ಕೂಡ ಹಿಂದೊಮ್ಮೆ ಮಾತನಾಡಿರುವುದು ಗಮನಾರ್ಹ.

ಹಿಂದೂವಾದಿಯಾಗಿದ್ದರೂ ಮುಸ್ಲಿಂ ವ್ಯಕ್ತಿಯನ್ನು ತನ್ನ ಮನೆಯಲ್ಲಿ ಇರಿಸಿಕೊಂಡು ವಿದ್ಯಾಭ್ಯಾಸ ನೀಡಿರುವ ಮೋದಿ ಕುಟುಂಬದ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆರ್ ಎಸ್ಎಸ್ ನವರು ಸದಾ ಮುಸ್ಲಿಂ ವಿರೋಧಿಯಾಗಿರುತ್ತಾರೆ ಎಂಬ ಮಾತನ್ನು ಸುಳ್ಳು ಮಾಡಿದೆ ಮೋದಿ ಕುಟುಂಬ.

Leave A Reply

Your email address will not be published.