ತಪ್ಪಿತಸ್ಥನಲ್ಲದ ಯುವಕನಿಗೆ ‘ಡಿಕ್ಕಿ ಹೊಡೆದಿದ್ದು ನೀನೇ’ ಎಂದು ಜಗಳಕ್ಕಿಳಿದ ಮಹಿಳೆ | ಬಳಿಕ ಆತ ಬಚಾವ್ ಆಗಿದ್ದು ಹೇಗೆ ಗೊತ್ತಾ!?

ಅಪಘಾತ ಸಂಭವಿಸಿದಾಗ ತಪ್ಪುಗಳನ್ನು ಒಪ್ಪಿಕೊಳ್ಳುವವರ ಸಂಖ್ಯೆಯೇ ಕಡಿಮೆ ಎಂದೇ ಹೇಳಬಹುದು. ಯಾವುದೇ ಒಂದು ಸರಿಯಾದ ಸಾಕ್ಷಿ ಸಿಗದೇ ಹೋದರೆ ತಪ್ಪು ಮಾಡದವನು ತಪ್ಪಿತಸ್ಥನಾಗುವುದಲ್ಲಿ ಡೌಟ್ ಇಲ್ಲ ಬಿಡಿ. ಇಂತಹುದೇ ಒಂದು ಘಟನೆ ನಡೆದಿದ್ದು, ಈ ಯುವಕ ವಿಡಿಯೋ ಮಾಡದೇ ಹೋಗಿದ್ದರೆ, ತಲೆ ಮೇಲೆ ಕೈ ಇಟ್ಟು ಕೂರುವಂತೆ ಮಾಡುತ್ತಿದ್ದುದರಲ್ಲಿ ಸಂಶಯವೇ ಇಲ್ಲ.

ಒಮ್ಮೊಮ್ಮೆ ಅಪಘಾತದ ಸಂದರ್ಭದಲ್ಲಿ ಕೆಲವರು ತಮ್ಮ ತಪ್ಪಿದ್ದರೂ ಅದನ್ನು ಒಪ್ಪದೆ ಮತ್ತೊಬ್ಬರ ಮೇಲೆ ಆ ತಪ್ಪನ್ನು ಹೊರಿಸಿ ಗಲಾಟೆ ಮಾಡುವುದನ್ನು ನೀವು ಕೂಡಾ ನೋಡಿರಬಹುದು. ಇದು ಕೂಡಾ ಅಂತಹದ್ದೇ ಅಪಘಾತದ ದೃಶ್ಯವಾಗಿದ್ದು, ಇದರ ವಿಡಿಯೋ ಇದೀಗ ವೈರಲ್ ಆಗಿದೆ. ಸ್ಕೂಟರ್‌ನಲ್ಲಿ ಕುಳಿತು ಇಬ್ಬರು ಸಾಗುತ್ತಿರುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಹಿಂಬದಿಯಲ್ಲಿ ಒಬ್ಬರು ಬೈಕ್ ಸವಾರರು ಇರುತ್ತಾರೆ. ಅವರು ತಮ್ಮ ಪ್ರಯಾಣದ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿರುತ್ತಾರೆ. ಆದರೆ, ಒಂದು ಹಂತದಲ್ಲಿ ಸ್ಕೂಟರ್‌ನಲ್ಲಿ ಇದ್ದ ಮಹಿಳೆ ಮತ್ತು ಪುರುಷ ಕೆಳಗೆ ಬೀಳುತ್ತಾರೆ. ಆಗ ಅಲ್ಲೊಂದು ವಿಚಿತ್ರ ಸನ್ನಿವೇಶ ಸೃಷ್ಟಿಯಾಗುತ್ತದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಬಿದ್ದ ತಕ್ಷಣ ಎದ್ದ ಮಹಿಳೆಯೊಬ್ಬರು ಹಿಂಬದಿಯಲ್ಲಿ ಬರುತ್ತಿದ್ದ ಬೈಕ್ ಸವಾರನನ್ನು ಕಂಡು ಏನೂ ಕಾಣೋದಿಲ್ವಾ…?’ ಎಂದು ಬೈಯ್ತಾರೆ. ಆಗ ಆ ಯುವಕಅಕ್ಕ ನಾನು ನಿಮ್ಮ ಗಾಡಿಗೆ ಗುದ್ದಿಲ್ಲ’ ಎಂದು ಹೇಳುತ್ತಾರೆ. ಇದಕ್ಕೆ ಆ ಇಬ್ಬರು `ಡಿಕ್ಕಿಯಾಗದೆ ನಾವು ರಸ್ತೆಗೆ ಬಿದ್ದಿದ್ದೀವಾ’ ಎಂದು ಮರುಪ್ರಶ್ನೆ ಹಾಕುತ್ತಾರೆ. ಅದಕ್ಕೆ ಉತ್ತರವಾಗಿ ಆ ಯುವಕ ತಮ್ಮ ಕ್ಯಾಮೆರಾದಲ್ಲಿರುವ ವಿಡಿಯೋ ತೋರಿಸುತ್ತೇನೆ ಎನ್ನುತ್ತಾರೆ. ಅಸಲಿಗೆ ಈ ಬೈಕ್ ಸವಾರ ಸ್ಕೂಟರ್‌ಗೆ ತಾಗಿಯೇ ಇಲ್ಲ. ಸ್ಕೂಟರ್‌ನಿಂದ ಬೈಕ್ ತುಂಬಾ ಅಂತರದಲ್ಲಿ ಇರುವಾಗಲೇ ಇವರಿಬ್ಬರು ಬಿದ್ದಿದ್ದರು. ಇವರಿಬ್ಬರು ಬಿದ್ದದ್ದನ್ನು ನೋಡಿ ಸ್ವಲ್ಪ ದೂರದಲ್ಲಿ ಈ ಬೈಕ್ ಸವಾರ ತಮ್ಮ ವಾಹನ ನಿಲ್ಲಿಸಿದ್ದರು. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಆದರೆ, ಈ ಸಂಭಾಷಣೆಯ ಬಳಿಕ ಏನಾಯ್ತು ಎಂಬುದು ಗೊತ್ತಾಗಿಲ್ಲ. ಒಂದೊಮ್ಮೆ ಈ ವಿಡಿಯೋ ಬೈಕ್ ಸವಾರನ ಕ್ಯಾಮೆರಾದಲ್ಲಿ ಸೆರೆಯಾಗದೇ ಇದ್ದಿದ್ದರೆ ಅಲ್ಲಿ ದೊಡ್ಡ ಗಲಾಟೆ ನಡೆಯುತ್ತಿದ್ದದ್ದು ಸ್ಪಷ್ಟ. ಅಷ್ಟರಮಟ್ಟಿಗೆ ಕ್ಯಾಮೆರಾ ಈ ಯುವಕನನ್ನು ಪಾರು ಮಾಡಿತ್ತು. ಸದ್ಯ ಈ ವಿಡಿಯೋ ವಿವಿಧ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹರಿದಾಡುತ್ತಿದೆ. ಎಲ್ಲರೂ ಈ ದೃಶ್ಯವನ್ನು ಕುತೂಹಲದಿಂದ ನೋಡುತ್ತಿದ್ದಾರೆ. ಕೆಲವರು ತಮಾಷೆಯ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.

ಬಹುಶಃ ಕ್ಯಾಮೆರಾ ಇಲ್ಲದೇ ಇದ್ದರೆ ಆ ಯುವಕ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಸಾಕಷ್ಟು ಹೆಣಗಾಡಬೇಕಾಗಿತ್ತು…! ಯಾರಿಗೆ ಗೊತ್ತು, ಈ ಕೇಸ್ ಠಾಣೆಯ ಮೆಟ್ಟಿಲೇರುವ ಸಾಧ್ಯತೆಯೂ ಇತ್ತು. ಆದರೆ, ತನ್ನ ಕ್ಯಾಮೆರಾದಿಂದ ಈ ಯುವಕ ಪಾರಾಗಿದ್ದ…! ಈ ಕ್ಯಾಮೆರಾ ದೃಶ್ಯಗಳು ಒಮ್ಮೊಮ್ಮೆ ಬಹುದೊಡ್ಡ ರೀತಿಯಲ್ಲಿ ಸಹಾಯಕ್ಕೆ ಬರುತ್ತವೆ ಎಂಬುದಕ್ಕೆ ಸಾಕ್ಷಿಯೇ ಈ ದೃಶ್ಯ.

Leave a Reply

error: Content is protected !!
Scroll to Top
%d bloggers like this: