ಗುಣಪಡಿಸಲಾಗದ ಖಾಯಿಲೆಯಿದ್ದರೂ ಕೇವಲ ಒಂದು ಗಂಟೆಯಲ್ಲಿ ಈತ ಮಾಡಿದ ಪುಷ್-ಅಪ್ ಎಷ್ಟು ಗೊತ್ತಾ ?? | ಗಿನ್ನಿಸ್ ವಿಶ್ವ ದಾಖಲೆಯ ಪುಟ ಸೇರಿತು ಈತನ ಅದ್ವಿತೀಯ ಸಾಧನೆ

ಸಾಧನೆ ಮಾಡಲು ನಮ್ಮಲ್ಲಿ ಛಲವೊಂದಿದ್ದರೆ ಸಾಕು ಎಂಬುದನ್ನು ಇಲ್ಲೊಬ್ಬ ವ್ಯಕ್ತಿ ಸಾಬೀತು ಮಾಡಿದ್ದಾರೆ. ಗುಣಪಡಿಸಲಾಗದ ನೋವಿದ್ದರೂ ಈತನ ಸಾಧನೆಗೆ ಅದು ಅಡ್ಡ ಬಂದಿಲ್ಲ. ಹೌದು. ಆಸ್ಟ್ರೇಲಿಯಾದ ‌ಅಥ್ಲೀಟ್ ಒಬ್ಬರು ಕೇವಲ ಒಂದು ಗಂಟೆಯಲ್ಲಿ ಬರೋಬ್ಬರಿ 3,182 ಪುಷ್‌-ಅಪ್‌ಗಳನ್ನು ಮಾಡಿ ಗಿನ್ನೆಸ್ ವಿಶ್ವ ದಾಖಲೆ ಬರೆದಿದ್ದು, ತಮ್ಮ ವಿಶಿಷ್ಟ ಸಾಧನೆ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಕಳೆದ ಏಪ್ರಿಲ್‌ನಲ್ಲಿ ಅಥ್ಲೀಟ್‌ ಸ್ಕಾಲಿ ಕೇವಲ ಒಂದು ಗಂಟೆಯಲ್ಲಿ 3,182 ಪುಷ್-ಅಪ್‌ಗಳನ್ನು ಮಾಡಿ ದಾಖಲೆ ಬರೆದಿದ್ದಾರೆ. 2021 ರಲ್ಲಿ ಆಸ್ಟ್ರೇಲಿಯನ್ ಜರಾಡ್ ಯಂಗ್ ಅವರು ಗಂಟೆಗೆ 3,054 ಪುಷ್‌-ಅಪ್‌ಗಳನ್ನು ಮಾಡಿ ದಾಖಲೆ ಬರೆದಿದ್ದರು. ಈಗ ಸ್ಕಾಲಿ ಆ ದಾಖಲೆಯನ್ನು ಮುರಿದಿದ್ದಾರೆ ಎಂದು ಜಿಡಬ್ಲ್ಯೂಆರ್‌ ತಿಳಿಸಿದೆ.

GWR ಶುಕ್ರವಾರ ತನ್ನ ಅಧಿಕೃತ ಯೂಟ್ಯೂಬ್‌ ಹ್ಯಾಂಡಲ್‌ನಲ್ಲಿ ವೀಡಿಯೋವನ್ನು ಹಂಚಿಕೊಂಡಿದೆ. ಇದರಲ್ಲಿ ಸ್ಕಾಲಿ ಅವರು ತಮ್ಮ ಜೀವನ ಮತ್ತು ಸಾಧನೆ ಕುರಿತು ಹೇಳಿಕೊಂಡಿದ್ದಾರೆ. ಸ್ಕಾಲಿ ತನ್ನ 12 ನೇ ವಯಸ್ಸಿನಲ್ಲಿ ಬಿದ್ದು ಕೈ ಮುರಿದುಕೊಂಡಿದ್ದರು. ಆಗಿನಿಂದ ಸಿಆರ್‌ಪಿಎಸ್‌ (ಕಾಂಪ್ಲೆಕ್ಸ್ ರೀಜನಲ್ ಪೇಯ್ನ್‌ ಸಿಂಡ್ರೋಮ್) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಗುಣಪಡಿಸಲಾಗದ ನೋವಿನಿಂದಾಗಿ ಅವರು ಆಗಾಗ್ಗೆ ಮನೆಯಿಂದ ಹೊರಬರಲು ಸಾಧ್ಯವಾಗುತ್ತಿರಲಿಲ್ಲ. ಅದಕ್ಕೆ ಚಿಕಿತ್ಸೆ ಕೂಡ ಪಡೆದುಕೊಳ್ಳುತ್ತಿದ್ದಾರೆ ಎಂದು GWR ತಿಳಿಸಿದೆ.

ಆದರೆ ಈ ನೋವನ್ನು ಹಿಂದೆ ಸರಿಸಿ ಗಿನ್ನೆಸ್ ರೆಕಾರ್ಡ್ ದಾಖಲಿಸಿದ ಈತನ ಸಾಧನೆ ಮೆಚ್ಚುವಂಥದ್ದೇ!!

Leave A Reply