“ಫೇಸ್ಬುಕ್ ಫ್ರೆಂಡ್ ರಿಕ್ವೆಸ್ಟ್ ಅಸೆಪ್ಟ್” ಮಾಡ್ಲಿಲ್ಲ ಎಂದು 16ವರ್ಷದ ಯುವತಿಯನ್ನು ಕೊಲೆ ಮಾಡಿದ ಯುವಕ!

ಫೇಸ್‌ಬುಕ್‌ನಲ್ಲಿ ಕಳುಹಿಸಿದ ಫ್ರೆಂಡ್ ರಿಕ್ವೆಸ್ಟ್ ಅನ್ನು ಸ್ವೀಕರಿಸಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಸಿಟ್ಟಿಗೆದ್ದ ಯುವಕನೋರ್ವ ಅಪ್ರಾಪ್ತ ಯುವತಿಯೋರ್ವಳನ್ನು ಕೊಲೆ ಮಾಡಿದ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ. ಮದುವೆ ಕಾಗದ ನೀಡುವ ನೆಪವೊಡ್ಡಿ ಬಾಲಕಿಯ ಮನೆಗೆ ಬಂದ ಯುವಕ ಅದನ್ನು ಆಕೆ ಸ್ವೀಕರಿಸಲು ಬಂದಾಗ ಅವಳ ಮೇಲೆ ದಾಳಿ ನಡೆಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

16 ವರ್ಷದ ಬಾಲಕಿಯನ್ನು ಫೇಸ್‌ಬುಕ್‌ನಲ್ಲಿ ತನ್ನ ಫ್ರೆಂಡ್ಸ್ ರಿಕ್ವೆಸ್ಟ್ ನ್ನು ಸ್ವೀಕರಿಸಿಲ್ಲ ಎಂಬ ಸಣ್ಣ ಕ್ಷುಲ್ಲಕ ಕಾರಣಕ್ಕೆ ಯುವಕ ಕೊಲೆ ಮಾಡಿದ್ದಾನೆ. ಅಲ್ಲದೇ ಆಕೆಯ ತಾಯಿಯ ಮೇಲೆ ಕೂಡ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಮಾಡಿದ ಯುವಕನನ್ನು ರವಿ ಎಂದು ಗುರುತಿಸಲಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಮದುವೆ ಕಾಗದ ತೆಗೆದುಕೊಂಡು ಬಂದ ರವಿ ಬಳಿ ಕಾಗದ ಸ್ವೀಕರಿಸಲು ಬಾಲಕಿ ಬಂದಾಗ ಆತ ಚಾಕುವಿನಿಂದ ಆಕೆಗೆ ಇರಿದಿದ್ದಾನೆ ಈ ವೇಳೆ ಆಕೆಯ ತಾಯಿ ಸುನೀತಾ ರಕ್ಷಣೆಗೆ ಬಂದಿದ್ದು, ಈ ವೇಳೆ ಬಾಲಕಿಯ ತಾಯಿಯ ಮೇಲೆಯೂ ಆತ ಹಲ್ಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಆತ ತನ್ನನ್ನು ತಾನೂ ಕೊಂದು ಕೊಳ್ಳಲು ಬಯಸಿದ್ದಾನೆ. ಇತ್ತ ಬಾಲಕಿಯ ತಂದೆ ತೇಜ್‌ವೀರ್ ಸಿಂಗ್ ಈ ಬಗ್ಗೆ ಪೊಲೀಸರಿಗೆ ನೀಡಿದ ಮಾಹಿತಿಯಲ್ಲಿ ತಮ್ಮ ಪುತ್ರಿಗೆ ಆರೋಪಿ ರವಿ ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ಇದನ್ನು ನಮ್ಮ ಪುತ್ರಿ ಸ್ವೀಕರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಆರೋಪಿ ಈ ಕೃತ್ಯವೆಸಗಿದ್ದಾನೆ ಎಂದು ಹೇಳಿದ್ದಾರೆ. ಬಾಲಕಿಯ ತಾಯಿ ಸುನೀತಾ ಹಾಗೂ ಆರೋಪಿ ರವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಧರ್ಮಂದ್ರ ಚೌಹಾನ್ ಹೇಳಿದ್ದಾರೆ.

ಒಟ್ಟಿನಲ್ಲಿ ಯುವಕನ ಅತಿರೇಕದ ವರ್ತನೆಗೆ ಬದುಕಿ ಬಾಳಬೇಕಿದ್ದ ಪುಟ್ಟ ಬಾಲಕಿಯೊಬ್ಬಳು ಸಾವಿನ ಮನೆ ಸೇರಿದ್ದಾಳೆ.

Leave a Reply

error: Content is protected !!
Scroll to Top
%d bloggers like this: