ಚರಂಡಿ’ಯಲ್ಲೇ ಬಿದ್ದು ಕಿತ್ತಾಟ ಮಾಡಿದ ನಾರಿಯರು| ಯಾಕಾಗಿ ಗೊತ್ತೇ? ವೀಡಿಯೋ ವೈರಲ್!!!

ಹಣ, ಆಸ್ತಿ‌ ಹೆಚ್ಚಾಗಿ ಸಂಬಂಧಗಳನ್ನು ಕೆಡಿಸುತ್ತದೆ ಎಂಬುದಕ್ಕೆ ಸಾಕಷ್ಟು ಸಾಕ್ಷಿಗಳಿವೆ. ಆಸ್ತಿಗಾಗಿ ಏನೇನೋ ಗಲಾಟೆಗಳಾಗುತ್ತವೆ‌. ಅಪ್ಪ ಅಮ್ಮ ಯಾರನ್ನೂ ನೋಡಲ್ಲ. ಜಾಗಕ್ಕಾಗಿ ಅಣ್ಣ ತಮ್ಮ ಹೊಡೆದಾಡಿಕೊಂಡು ಜೀವ ಬಿಟ್ಟ ಸಾಕಷ್ಟು ಉದಾಹರಣೆಗಳೂ ನಮಗೆ ಸಾಕಷ್ಟು ಸಿಗುತ್ತವೆ.

ಒಂದೊಂದು ಸಲ ಇಂತಹ ಆಸ್ತಿ ಕಲಹದ ಹೊಡೆದಾಟಗಳು ಕ್ಯಾಮೆರಾ ಕಣ್ಣಿಗೂ ಬೀಳುತ್ತವೆ. ಸದ್ಯ ಅಂತಹದ್ದೇ ಒಂದು ದೃಶ್ಯ ವೈರಲ್ ಆಗುತ್ತಿದೆ.

ಇದು ಮಹಿಳೆಯರಿಬ್ಬರ ಫೈಟಿಂಗ್ ದೃಶ್ಯ. ಇಬ್ಬರೂ ಸಂಬಂಧಿಕರೇ. ಒಂದು ಕುಟುಂಬದ ಇಬ್ಬರು ಸೊಸೆಯಂದಿರು ಇಲ್ಲಿ ಕಾದಾಟ ನಡೆಸಿದ್ದಾರೆ. ಆದರೆ, ಇವರ ಕಾದಾಟ ಅದೆಷ್ಟು ಮಟ್ಟಿಗೆ ಇತ್ತು ಎಂದರೆ ಇದು ಅಕ್ಷರಶಃ ಬೀದಿ ಜಗಳವಾಗಿ ಮಾರ್ಪಟ್ಟಿತ್ತು…! ರಸ್ತೆಯಲ್ಲಿಯೇ ಹೊಡೆದಾಡಿಕೊಂಡ ಈ ಸೋದರಿಯರು ಚರಂಡಿಗೆ ಬಿದ್ದರೂ ತಮ್ಮ ಫೈಟಿಂಗ್ ಮಾತ್ರ ನಿಲ್ಲಿಸಿರಲಿಲ್ಲ..! ಬರೀ ಇವರಿಬ್ಬರೇ ಅಲ್ಲ ಇವರ ಕುಟುಂಬದ ಸದಸ್ಯರು ಕೂಡಾ ‘ ಪರಸ್ಪರ ಕಾದಾಟದಲ್ಲಿ ತೊಡಗಿದ್ದರು. ಅಷ್ಟರಲ್ಲಿ ಈ ಜಗಳವನ್ನು ನೋಡಲು ಅಲ್ಲಿದ್ದವರೆಲ್ಲಾ ಜಮಾಯಿಸಿದ್ದರು…! ಸಂಬಂಧಿಕರು ಕೂಡಾ ಚರಂಡಿಗೆ ಇಳಿದು ಕಾದಾಟದಲ್ಲಿ ತೊಡಗಿದ್ದರು.

ಈ ಘಟನೆ ರಾಜಸ್ಥಾನದ ಅಜೀರ್‌ನಲ್ಲಿ ನಡೆದಿದೆ. ಇಲ್ಲಿನ ಪೆಟ್ರೋಲ್ ಪಂಪ್ ಮಾಲಿಕ ನರೇಂದ್ರ ಕುಮಾವತ್ ಮತ್ತು ಅವರ ಮೃತ ಸೋದರನ ಕುಟುಂಬದ ನಡುವೆ  ಆಸ್ತಿ ಕಲಹ ಇತ್ತು. ಅಂತೆಯೇ, ಮೊನ್ನೆ ಗುರುವಾರ ಸಂಜೆ ಈ ಮೃತ ಸೋದರನ ಪತ್ನಿ ತನ್ನ ಸಂಬಂಧಿಕರೊಂದಿಗೆ ಪೆಟ್ರೋಲ್ ಬಂಕ್‌ಗೆ ಬಂದಿದ್ದರು. ಈ ಸಂದರ್ಭದಲ್ಲಿ, ನರೇಂದ್ರ ಕುಮಾವತ್ ಕುಟುಂಬಸ್ಥರೊಂದಿಗೆ ಜಗಳವಾಗಿತ್ತು. ಪರಸ್ಪರ ಎಳೆದಾಡಿಕೊಂಡು ಮಹಿಳೆಯರು ಇಲ್ಲಿ ಜಗಳ ಶುರು ಮಾಡಿದ್ದರು. ಈ ಹೋರಾಟ ತೀವ್ರಗೊಳ್ಳುತ್ತಿದ್ದಂತೆಯೇ ಮಹಿಳೆಯರು ಚರಂಡಿಗೆ ಬಿದ್ದರು. ಆಗಲೂ ಜಗಳ ಮಾತ್ರ ನಿಂತಿರಲಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸಂಬಂಧಿಕರು ಕೂಡಾ ಈ ಕಾದಾಟದಲ್ಲಿ ತೊಡಗಿದ್ದರಿಂದ ಅಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತ್ತು. ಹೀಗಾಗಿ, ಅಲ್ಲಿದ್ದ ಇತರರಿಗೂ ಕೂಡಾ ಇಲ್ಲಿ ಮಧ್ಯಪ್ರವೇಶಕ್ಕೆ ಸಾಧ್ಯವಾಗಿರಲಿಲ್ಲ. ಕೊನೆಗೆ ಈ ಜಗಳ ನಿಲ್ಲಿಸಲು ಪೊಲೀಸರೇ ಬರಬೇಕಾಗಿತ್ತು.

ಸದ್ಯ ಈ ವಿಡಿಯೋ ಸೋಶೀಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜತೆಗೆ, ಈ ಘಟನೆ ಬಗ್ಗೆ ಎಲ್ಲರೂ ಆಘಾತ ವ್ಯಕ್ತಪಡಿಸಿದ್ದಾರೆ. ಇನ್ನೊಂದಷ್ಟು ಮಂದಿ ತಮಾಷೆಯ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.

Leave A Reply

Your email address will not be published.