ಎದೆಹಾಲು ಗಂಟಲಲ್ಲಿ ಸಿಲುಕಿ ಮಗು ಸಾವು

Share the Article

ಕಾಸರಗೋಡು : ಕಾಸರಗೋಡಿನಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದೆ. ಅಲ್ಲಿ ಮಗುವೊಂದರ ಗಂಟಲಲ್ಲಿ ಎದೆಹಾಲು ಸಿಲುಕಿ ಸಾವಿಗೀಡಾಗಿದೆ.

ಕಾಸರಗೋಡು ಜಿಲ್ಲೆಯ ಮಧೂರಿನಲ್ಲಿ ಬಾಡಿಗೆ ಕಟ್ಟಡದಲ್ಲಿ ವಾಸವಾಗಿದ್ದ ಉತ್ತರ ಪ್ರದೇಶ ನಿವಾಸಿ ಅಪ್ತಾಬ್‌ ಅವರ ಪುತ್ರಿ ಒಂದೂವರೆ ವರ್ಷದ ಇನಿಯ ಕಾರ್ತೋನ್‌ ಎಂಬ ಮಗು ಸಾವಿಗೀಡಾದ ದುರ್ದೈವಿ. ಮಗುವಿನ ಎದೆಹಾಲು ಗಂಟಲಲ್ಲಿ ಸಿಲುಕಿ ಸಾವಿಗೀಡಾಗಿದೆ ಎಂಬ

ತಾಯಿ ಎದೆಹಾಲನ್ನು ಮಗುವಿಗೆ ಉಣಿಸುತ್ತಿರುವಾಗ ಹಾಲು ಗಂಟಲಲ್ಲಿ ಸಿಲುಕಿ ಮಗು ಒದ್ದಾಡಿದೆ. ತತ್‌ಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗಿಲ್ಲ. ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave A Reply