ಕೇವಲ 30 ಸೆಕೆಂಡುಗಳಲ್ಲಿ ಸಾಲ ನೀಡಲಿದೆ ವಾಟ್ಸಪ್!!

ವಾಟ್ಸಪ್ ತನ್ನ ಬಳಕೆದಾರರಿಗೆ ಹೊಸ-ಹೊಸ ಫೀಚರ್ ಗಳನ್ನು ಜಾರಿಗೊಳಿಸುತ್ತಲೇ ಬಂದಿದ್ದು, ಒಂದು ಹಂತ ಮುಂದೆ ಎಂಬತೆ ಹಣದ ಪೇಮೆಂಟ್ ಕೂಡ ಜಾರಿಗೊಳಿಸಿತು. ಇದೀಗ ಮತ್ತೆ ಹೊಸ ಸೌಲಭ್ಯವನ್ನು ಪ್ರಾರಂಭಿಸಿದ್ದು, ವಾಟ್ಸಪ್ ಇನ್ನು ಮುಂದೆ ಸಾಲವನ್ನೂ ನೀಡಲಿದೆ.

ಹೌದು. ಹಣಕಾಸು ಕಂಪನಿ ಸಿಎಎಸ್‌ಇ ವಾಟ್ಸಾಪ್ ವ್ಯವಹಾರದ ಬಳಕೆದಾರರಿಗೆ ವಿಶಿಷ್ಟ ಸಾಲ ಸೌಲಭ್ಯವನ್ನು ಪ್ರಾರಂಭಿಸಿದ್ದು, ವಾಟ್ಸಾಪ್ ವ್ಯವಹಾರ ಖಾತೆಯನ್ನು ಹೊಂದಿರುವವರು ಕೇವಲ 30 ಸೆಕೆಂಡುಗಳಲ್ಲಿ ಸಾಲ ಪಡೆಯಬಹುದು. ಅಷ್ಟೇ ಅಲ್ಲದೆ, ಈ ಸಾಲವನ್ನು ಪಡೆಯಲು ಯಾವುದೇ ದಾಖಲೆಗಳು ಅಗತ್ಯವಿರುವುದಿಲ್ಲ.


Ad Widget

Ad Widget

Ad Widget

Ad Widget

Ad Widget

Ad Widget

ಸಾಲದ ಅರ್ಜಿದಾರರು ಫಾರ್ಮ್ʼಗಳನ್ನು ಭರ್ತಿ ಮಾಡುವ ಅಗತ್ಯವಿರುವುದಿಲ್ಲ. ಅಲ್ಲದೇ, ಸಾಲದ ಕೊಡುಗೆಗಳನ್ನ ಪಡೆಯಲು ಯಾವುದೇ ವಿಶೇಷ ಅಪ್ಲಿಕೇಶನ್ ಡೌನ್ಲೋಡ್ ಮಾಡುವ ಅಗತ್ಯವೂ ಇಲ್ಲ. ಬಳಕೆದಾರರು ವಾಟ್ಸಾಪ್ ಚಾಟ್ ಬಾಕ್ಸ್‌ನಲ್ಲಿ HI ಅಂತಾ ಟೈಪ್ ಮಾಡಿ, 8097553191 ಸಂಖ್ಯೆಗೆ ಕಳುಹಿಸಬೇಕು. ಈ ಹಂತವನ್ನು ಅನುಸರಿಸಿದ ನಂತರ ಬಳಕೆದಾರರು ಪೂರ್ವ-ಅನುಮೋದಿತ ಮೊತ್ತವನ್ನು ಪಡೆಯುತ್ತಾರೆ.

ಇದು ಎಐ ಚಾಲಿತ ಕ್ರೆಡಿಟ್ ಲೈನ್ ಸೌಲಭ್ಯವಾಗಿದ್ದು, ಈ ಸೌಲಭ್ಯವನ್ನು 24*7 ಪಡೆಯಬಹುದಾಗಿದೆ. ಈ ಸೇವೆಯನ್ನು ಸಂಬಳ ಪಡೆಯುವ ಗ್ರಾಹಕರು ಮಾತ್ರ ಪಡೆಯಬಹುದಾಗಿದೆ. ಈ ಸೌಲಭ್ಯಕ್ಕೆ ಭೌತಿಕ KYM ತಪಾಸಣೆಯ ಅಗತ್ಯವಿಲ್ಲ. ಇಡೀ ಪರಿಶೀಲನಾ ಪ್ರಕ್ರಿಯೆಯನ್ನು ವಿದ್ಯುನ್ಮಾನವಾಗಿ ಪೂರ್ಣಗೊಳಿಸಲಾಗುವುದು. ಇದರ ನಂತರ, ಸಿಸ್ಟಮ್ ಕ್ರೆಡಿಟ್ ಲೈನ್ʼನ ಮೊತ್ತವನ್ನು ನಿರ್ಧರಿಸುತ್ತದೆ.

error: Content is protected !!
Scroll to Top
%d bloggers like this: