ಕಿಮ್ಸ್ ಆಸ್ಪತ್ರೆಯಲ್ಲಿ ಮಗು ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ | ತಾಯಿಯೇ ಈ ಸ್ಟೋರಿಯ ಕಿಂಗ್ ಪಿನ್ | ರೋಚಕ ಕಹಾನಿ ಇಲ್ಲಿದೆ!!!

ಇತ್ತೀಚೆಗಷ್ಟೇ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಮಗು ಕಳ್ಳತನ‌ ಪ್ರಕರಣ ನಡೆದಿತ್ತು. ಈಗ ಈ ಪ್ರಕರಣಕ್ಕೆ ಟ್ವಿಸ್ಟ್ ದೊರಕಿದ್ದು. ಹೌದು, ಕಳ್ಳತನದ ಕಥೆ ಹಿಂದಿನ ಅಸಲಿಯತ್ತು ಬಹಿರಂಗಗೊಂಡಿದೆ. ಹೆತ್ತಮ್ಮಳಿಂದಲೇ ನಡೆದ ನೀಚ ಕೃತ್ಯ ಜಗಜ್ಜಾಹೀರಾಗಿದೆ.

ಕಳ್ಳತನ ನಾಟಕವನ್ನು ಉಂಟು ಮಾಡಿದ ತಾಯಿ ಸಲ್ಮಾಳೇ ಇಲ್ಲಿ ವಿಲನ್. ಅನಾರೋಗ್ಯದ ಹಿನ್ನೆಲೆಯಲ್ಲಿ 40 ದಿನದ ಹೆಣ್ಣು ಮಗುವನ್ನು ಕಿಮ್ಸ್ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿತ್ತು. ಕುಂದಗೋಳ ಪಟ್ಟಣದ ಸಲ್ಮಾ ಮತ್ತು ಹುಸೇನ್ ಶೇಖ್ ಎಂಬುವರಿಗೆ ಸೇರಿದ್ದ 40 ದಿನಗಳ ಹೆಣ್ಣು ಮಗುವಿಗೆ ಬಾಯಿಯಲ್ಲಿ ರಕ್ತ ಬರುತ್ತಿದೆ ಅನ್ನೋ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಡಿಸ್ಟಾರ್ಜ್ ಮಾಡುವ ದಿನವೇ ಮಗು ಮಾಯವಾಗಿತ್ತು. ಮಗುವನ್ನು ಯಾರೋ ಅಪರಿಚಿತ ವ್ಯಕ್ತಿ, ಕಪ್ಪು ವರ್ಣದ ವ್ಯಕ್ತಿ ಕಳ್ಳತನ ಮಾಡಿದ್ದಾನೆಂದು ತಾಯಿ ಸಲ್ಮಾ ದೂರು ನೀಡಿದ್ದಳು.


Ad Widget

Ad Widget

Ad Widget

Ad Widget

Ad Widget

Ad Widget

ಜೂನ್ 13 ರ ಮದ್ಯಾಹ್ನದಂದು ಮಗು ನಾಪತ್ತೆಯಾಗಿತ್ತು. ಆದರೆ ಅಸಲಿಗೆ ಆಗಿರೋದೇ ಬೇರೆ. ಮಗುವನ್ನು ಶೌಚಾಲಯದ ಕಿಟಕಿಯಿಂದ ತಾಯಿ ಸಲ್ಮಾ ಎಸೆದಿದ್ದಾಳೆ. ಮಗುವನ್ನು 104 ನೇ ವಾರ್ಡ್ ನಲ್ಲಿ ಅಡ್ಮಿಟ್ ಮಾಡಲಾಗಿತ್ತು. ಅದೃಷ್ಟವಶಾತ್ ಹುಲ್ಲಿನ ಮೇಲೆ ಬಿದ್ದಿದ್ದರಿಂದ ಪ್ರಾಣಾಪಾಯದಿಂದ ಮಗು ಬಚಾವಾಗಿತ್ತು.

ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದರೂ ಯಾರೊಬ್ಬರೂ ಮಗುವನ್ನು ಕೊಂಡೊಯ್ಯುತ್ತಿರೋ ದೃಶ್ಯಗಳು ಸೆರೆಯಾಗದೇ ಇದ್ದದ್ದು ಅಚ್ಚರಿಗೆ ಕಾರಣವಾಗಿತ್ತು. ಎಲ್ಲ ಕಡೆ ತಡಕಾಡಿದ್ದರೂ ಮಗು ಮಾತ್ರ ಸಿಕ್ಕಿರಲೇ ಇಲ್ಲ. ಆದರೆ ಮರುದಿನ ಮಗು ಆಸ್ಪತ್ರೆ ಸಿಬ್ಬಂದಿ ಕಣ್ಣಿಗೆ ಬಿದ್ದಿತ್ತು. ಶೌಚಾಲಯದ ಮೂಲಕ ಕೆಳಗೆ ಎಸೆದ ಸ್ಥಳದಲ್ಲಿಯೇ ಆ ಮಗು ಪತ್ತೆಯಾಗಿತ್ತು.

ತಕ್ಷಣ ತೀವ್ರ ನಿಗಾ ಘಟಕಕ್ಕೆ ರವಾನಿಸಿದ್ದ ಸಿಬ್ಬಂದಿ, ಮಗುವಿಗೆ ಚಿಕಿತ್ಸೆ ಮುಂದುವರೆಸಿತ್ತು. ಮಗು ಹಿಮೊರಾಜಿಕಲ್ ಡಿಸೀಜ್ ನಿಂದ ಬಳಲುತ್ತಿತ್ತು. ಮಗುವಿನ ತಲೆ ಅತಿಯಾಗಿ ದೊಡ್ಡದಿತ್ತು, ತಲೆಯಲ್ಲಿ ನೀರು ಸಂಗ್ರಹವಾಗಿತ್ತು ಎನ್ನಲಾಗಿದೆ. ತಾಯಿ ಸಲ್ಮಾಗೆ ಈ ಹುಟ್ಟಿದ ಎರಡು ಮಕ್ಕಳೂ ಈ ಹಿಂದೆ ಅನಾರೋಗ್ಯದಿಂದಲೇ ಮೃತಪಟ್ಟಿದ್ದವು. ಈ ಮಗುವೂ ಅನಾರೋಗ್ಯಪೀಡಿತವಾಗಿರೋದು ಪೋಷಕರ ಆತಂಕಕ್ಕೆ ಕಾರಣವಾಗಿತ್ತು. ಹೀಗಾಗಿ ಮಗುವನ್ನು ದೂರ ಮಾಡಿಕೊಳ್ಳಲು ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ.

ಹೆತ್ತಮ್ಮಳಿಂದಲೇ ಮಗುವಿನ ಕೊಲೆ ಯತ್ನ ನಡೆದಿರೋದು ವಿಚಾರಣೆ ವೇಳೆ ಬಹಿರಂಗಗೊಂಡಿದೆ. ನಿನ್ನೆ ಇಡೀ ದಿನ ಸಲ್ಮಾಳ ವಿಚಾರ ಮಾಡಲಾಗಿತ್ತು. ಮಗುವಿನ ಅನಾರೋಗ್ಯದ ಹಿನ್ನೆಲೆಯಲ್ಲಿ ಈ ಕೆಲಸ ಮಾಡಿರೋದಾಗಿ ಸಲ್ಮಾ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದರ ಹಿಂದೆ ಆಕೆಯ ಕುಟುಂಬದ ಸದಸ್ಯರೂ ಇರೋ ಶಂಕೆ ವ್ಯಕ್ತವಾಗಿದೆ. ಅನಾರೋಗ್ಯಪೀಡಿತ ಮಗುವಿಗೆ ಚಿಕಿತ್ಸೆ ಕೊಡಿಸುವುಕ್ಕಿಂತ ಅದಕ್ಕೊಂದು ಮುಕ್ತಿ ಕಾಣಿಸಬೇಕೆಂಬ ಲೆಕ್ಕಾಚಾರದಲ್ಲಿ ಈ ಕೃತ್ಯ ಎಸಗಿರೋ ಅಂಶ ಬೆಳಕಿಗೆ ಬಂದಿದೆ. ಈ ಎಲ್ಲ ವಿಷಯ ತಿಳಿದ ನಂತರ ಅನಾರೋಗ್ಯಪೀಡಿತ ಮಗುವಿನ ಆರೈಕೆಯ ಜವಾಬ್ದಾರಿಯನ್ನು ಕಿಮ್ಸ್ ವೈದ್ಯರು ಹೊತ್ತುಕೊಂಡಿದ್ದಾರೆ. ಸದ್ಯ ಮಗುವಿನ ತಾಯಿ ಸಲ್ಮಾ ವಿದ್ಯಾನಗರ ಪೊಲೀಸರ ವಶದಲ್ಲಿದ್ದಾಳೆ.

error: Content is protected !!
Scroll to Top
%d bloggers like this: