1 ಕೆ.ಜಿ ತೂಕ ಇಳಿಸಿಕೊಂಡರೆ 1000 ಕೋಟಿ ಪಡೆಯೋ ಚಾಲೆಂಜ್ !!

ಇತ್ತೀಚಿನ ದಿನಗಳಲ್ಲಿ ಬೊಜ್ಜು ಹೊಂದಿರುವವರೇ ಹೆಚ್ಚು. ಎಲ್ಲಾದಕ್ಕೂ ಕಾರಣ‌ ಈಗಿನ ಆಹಾರ ಪದ್ಧತಿ ಎಂದರೆ ತಪ್ಪಾಗಲಾರದು. ಧಡೂತಿ ದೇಹ, ಬೊಜ್ಜು.. ಇದರ ಕಷ್ಟ ಏನೆಂದು ಅನುಭವಿಸಿದವರಿಗೇ ಗೊತ್ತು. ಆದರೆ ಇಲ್ಲಿ ಒಂದು ಕೆಜಿ ಇಳಿಸಿಕೊಂಡರೆ 1000 ಕೋಟಿ ಪಡೆಯುವ ಸವಾಲೆಸೆದಿದ್ದಾರೆ ಕೇಂದ್ರ ಸಚಿವರು. ಹೌದು. ಆರೋಗ್ಯದ ಮಹತ್ವ ಅರಿತಿರುವ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ, ತಮ್ಮ ಇಲಾಖೆಯಿಂದ ನೀಡಬೇಕಾದ ಅನುದಾನವನ್ನು ಸಂಸದರೊಬ್ಬರ ಆರೋಗ್ಯಕ್ಕೂ ಲಿಂಕ್‌ ಮಾಡುವ ಮೂಲಕ ಹೊಸ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ !!

ಇದೇ ವರ್ಷ, ಫೆಬ್ರವರಿಯಲ್ಲಿ ಉಜ್ಜೈನಿಯ ಮಾಲ್ವಾ ಭಾಗದಲ್ಲಿ 5,772 ಕೋಟಿ ರೂ. ಮೊತ್ತದ 11 ರಸ್ತೆ ಯೋಜನೆಗಳಿಗೆ ಗಡ್ಕರಿ ಚಾಲನೆ ನೀಡಿದ್ದರು. ಆಗ ಮಾತನಾಡಿದ್ದ ಅವರು, ನಾನು ಹಿಂದೆ 135 ಕೆಜಿ ತೂಕ ಇದ್ದೆ, ಈಗ 93 ಕೆಜಿಗೆ ಇಳಿದಿದ್ದೇನೆ. ಸಂಸದ ಅನಿಲ್‌ ಫಿರೋಜಿಯ ಕ್ಷೇತ್ರದ ಅಭಿವೃದ್ಧಿಗೆ ಹಣ ನೀಡಿ ಎಂದು ಕೇಳುತ್ತಲೇ ಇರುತ್ತಾರೆ. ಈಗ ಹೇಳುತ್ತೇನೆ ಕೇಳಿ, ಅವರು ಇಳಿಸಿಕೊಳ್ಳುವ ಪ್ರತಿ ಕೆಜಿ ತೂಕಕ್ಕೆ 1000 ಕೋಟಿ ರೂ. ಅನುದಾನ ನೀಡುತ್ತೇನೆ ಎಂದು ಆಫರ್ ಘೋಷಿಸಿದ್ದರು.

ಸುಮಾರು 125 ಕೆಜಿ ತೂಕ ಹೊಂದಿದ್ದ ಉಜ್ಜೈನಿ ಸಂಸದ ಈಗ ತೂಕ ಇಳಿಸಿಕೊಳ್ಳಲು ಮಗ್ನರಾಗಿದ್ದಾರೆ. ತನ್ನ ಕೆಜಿ ಕಡಿಮೆಯಾದಷ್ಟು, ಹೆಚ್ಚು ಅನುದಾನ ಪಡೆಯುವತ್ತ ಗಮನಹರಿಸಿದ್ದಾರೆ. ಮುಂಗಾರು ಅಧಿವೇಶನದಲ್ಲಿ ಗಡ್ಕರಿಯನ್ನು ಭೇಟಿ ಮಾಡಿ ನಾನಿಷ್ಟು ತೂಕ ಇಳಿಸಿಕೊಂಡಿದ್ದೇನೆ, ನೀವು ಕೊಟ್ಟ ಮಾತಿನಂತೆ ಅನುದಾನ ನೀಡಿ ಎಂದು ಕೇಳಲು ಸಿದ್ಧವಾಗಿದ್ದಾರೆ. ಎಷ್ಟು ತೂಕ ಇಳಿಸಿಕೊಂಡಿದ್ದಾರೆನ್ನುವುದನ್ನು ಮಾತ್ರ ಬಹಿರಂಗಗೊಡಿಲ್ಲ. ಏನೇ ಆಗಲಿ, ಸಚಿವರ ಈ ಚಾಲೆಂಜ್ ಮಾತ್ರ ಬಲು ಮಜವಾಗಿದೆ ಅಲ್ಲವೇ!!

Leave A Reply

Your email address will not be published.