ಮಂಗಳೂರು ನಗರದಲ್ಲಿ ಭಯೋತ್ಪಾದನಾ ನಿಗ್ರಹ ದಳ ಎನ್ನುವ ಹೊಸ ಘಟಕವನ್ನು ಅಸ್ಥಿತ್ವಕ್ಕೆ ಬಂದಿದೆ.
ಆಂತರಿಕ ಭದ್ರತಾ ವಿಭಾಗದ ಅಡಿಯಲ್ಲಿ ಕಾರ್ಯ ನಿರ್ವಹಿಸಲಿದೆ.ನಗರ ಸಶಸ್ತ್ರ ಮೀಸಲು ಪಡೆಯಿಂದ ಆಯ್ದ 35 ಪೊಲೀಸ್ ಸಿಬ್ಬಂದಿಯನ್ನು ತರಬೇತಿಗೊಳಿಸಿ ಭಯೋತ್ಪಾದನಾ ನಿಗ್ರಹ ದಳಕ್ಕೆ ನಿಯೋಜಿಸಲಾಗಿದೆ.
ಸಶಸ್ತ್ರ ಪಡೆಯ ಸಿಬ್ಬಂದಿಗಳನ್ನು ವಿಶೇಷ ತರಬೇತುಗೊಳಿಸಿ ಭಯೋತ್ಪಾದಕ ವಿರೋಧಿ ದಳವನ್ನು ಹೊಸದಾಗಿ ರಚಿಸಿ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು,ತಂಡದಲ್ಲಿ 35 ಪೊಲೀಸ್ ಸಿಬ್ಬಂದಿ ಹೊಂದಿದ್ದಾರೆ.
ಬೆಂಗಳೂರಿನ ಕೂಡ್ಲುವಿನಲ್ಲಿರುವ ಭಯೋತ್ಪಾದನೆ ನಿಗ್ರಹ ಕೇಂದ್ರದಲ್ಲಿ (ಸಿಸಿಟಿ) ತಂಡ ಎರಡು ತಿಂಗಳ ತರಬೇತಿ ಪಡೆದಿರುವ ತಂಡಕ್ಕೆ ಇನ್ನೂ ಭಯೋತ್ಪಾದಕ ನಿಗ್ರಹ ಕುರಿತಂತೆ ಹೆಚ್ಚಿನ ತರಬೇತಿ ನೀಡಲಾಗುತ್ತದೆ ಎಂದು ಡಿಸಿಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
You must log in to post a comment.