ಇತ್ತೀಚೆಗೆ ಪ್ರಾಣಿಗಳ ಅರೆಸ್ಟ್ ಆಗುವುದು ಕಾಮನ್ ಆಗಿಬಿಟ್ಟಿದೆ. ಇತ್ತೀಚೆಗಷ್ಟೇ ಕೋಳಿ ಅರೆಸ್ಟ್ ಆಗಿತ್ತು. ಈಗ ಹಸು ಅರೆಸ್ಟ್ ಆಗಿದೆ. ಹೌದು ಈ ಘಟನೆ ನಡೆದಿರುವುದು ಹಾಸನದಲ್ಲಿ. ಹಾಸನ ಬೇಲೂರು ಪೊಲೀಸ್ ಠಾಣೆ ಕಾಂಪೌಂಡ್ ಆವರಣದೊಳಗೆ ಬೇಲೂರು ನೆಹರು ನಿವಾಸಿಗಳಾದ ಸಿದ್ದಮ್ಮ, ಮತ್ತು ನಿಂಗಮ್ಮ ಅವ್ರ ಹಸುಗಳು ನುಗ್ಗಿ ಅಲ್ಲಿದ್ದ ಗಿಡಗಳನ್ನ ತಿಂದಿವೆ. ಇದರಿಂದ ಬೇಸತ್ತ ಠಾಣಾ ಸಿಬ್ಬಂದಿ ಸಿಪಿಐ ಯೋಗೀಶ್ ಆದೇಶದಂತೆ ಹಸುಗಳನ್ನ ಬಿಡದಂತೆ ಠಾಣೆ ಬಳಿಯಲ್ಲಿ ಕಟ್ಟಿ ಹಾಕಿದ್ದಾರೆ. ಇನ್ನ ಸಂಜೆಯಾದರೂ ವೃದ್ಧೆಯರಿಬ್ಬರು ಬೇಡಿಕೊಂಡರೂ ಹಸುಗಳ ಬಿಡಲಿಲ್ಲ ಮತ್ತು ಹಸುಗಳಿಂದ ಹಾಲು ಕರೆಯಲು ಅವಕಾಶವೇ ನೀಡಲಿಲ್ಲ ಎಂಬುದು ಮಾಲೀಕರ ಆರೋಪ. ಹಾಲು ಕರೆಯದೆ ಹೋದರೆ ಹಸುಗಳಿಗೆ ಕೆಚ್ಚಲಬಾಹು ಬರುತ್ತೆ. ನಾವು ಕೂಲಿಗೆ ಹೋಗಲು ಆಗಲ್ಲ . ಈ ಹಸುಗಳೇ ಜೀವನಾಧಾರ ಎಂದರೂ ಪೊಲೀಸ್ ಸಿಬ್ಬಂದಿ ಹಸು ಬಿಟ್ಟಿಲ್ಲ.
ನಂತರ ಘಟನೆ ಬಗ್ಗೆ ಸಾರ್ವಜನಿಕರು ಹಸು ಬಿಡುವಂತೆ ಒತ್ತಾಯಿಸಿದಾಗ ರಾತ್ರಿ 10.30 ಕ್ಕೆ ವೃದ್ಧೆಯರಿಬ್ಬರ ಹಸುಗಳನ್ನ ಬಿಡುಗಡೆ ಮಾಡಿದ್ದಾರಂತೆ. ಸದ್ಯ ಈ ಘಟನೆಗೆ ಸಾರ್ವಜನಿಕ ವಲಯದಲ್ಲಿ ಬೇಲೂರು ಪೊಲೀಸ್ ಹೀಗೆ ಮಾಡಬಾರದಿತ್ತು ಅಂತ ಟೀಕೆಗಳು ಕೇಳಿಬಂದಿವೆ.
You must log in to post a comment.