ಕೇವಲ 1 ಲೀಟರ್ ಪೆಟ್ರೋಲ್ ನಲ್ಲಿ ಬರೊಬ್ಬರಿ 42 ಕಿಲೋ ಮೀಟರ್ ಚಲಿಸುವ ಕಾರು !

ಇತ್ತೀಚಿನ ದಿನಗಳಲ್ಲಿ ಕಾಂಪ್ಯಾಕ್ಟ್ ಕಾರುಗಳು ಹೆಚ್ಚಿನ ಆಕರ್ಷಣೆಯನ್ನು ಪಡೆಯಲಾರಂಭಿಸಿವೆ. ವಿಶಿಷ್ಟವಾದ ಕಾರುಗಳನ್ನು ಓಡಿಸಲು ಇಷ್ಟಪಡುವ ಅನೇಕ ಜನರಿದ್ದಾರೆ. ಇಲ್ಲಿ ನಾವು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದ ವಿಶ್ವದ ಅತ್ಯಂತ ಚಿಕ್ಕ ಕಾರಿನ ಬಗ್ಗೆ ಮತ್ತು ಅತ್ಯಂತ ಹೆಚ್ಚು ಮೈಲೇಜ್ ನೀಡುವ ಕಾರಿನ ಬಗ್ಗೆ ಹೇಳಲು ಹೊರಟಿದ್ದೇವೆ.

‘ಎಷ್ಟು ಕೊಡುತ್ತೆ, ಕಿತ್ನ ದೇತ ಹೈ, ವಾಟ್ ಇಸ್ ದ ಮೈಲೇಜ್ ‘ ಮುಂತಾದ ಸ್ಟ್ಯಾಂಡರ್ಡ್ ಪ್ರಶ್ನೆಗಳೊಂದಿಗೆ ಕಾರು ಕೊಳ್ಳಲು ಸಾಗುವ ಭಾರತೀಯರಿಗಾಗಿ ತಯಾರಾಗಿದೆ ಒಂದು ಸೂಪರ್ ಕಾರು. ಈ ಪ್ರಪಂಚದ ಅತ್ಯಂತ ಚಿಕ್ಕ ಕಾರು ಪೀಲ್ ಪಿ 50 ಮತ್ತು ಅದರ ಹೆಮ್ಮೆಯ ಓನರ್ ಅಲೆಕ್ಸ್ ಓರ್ಚಿನ್ ಎಂಬ ವ್ಯಕ್ತಿಯನ್ನು ಈ ಮೂಲಕ ನಿಮಗೆ ಪರಿಚಯಿಸುತ್ತಿದ್ದೇವೆ. ಓರ್ಚಿನ್ ಅವರು ಈ ಕಾರು ಓಡಿಸುವಾಗ ಜನರು ಗೇಲಿ ಮಾಡುತ್ತಾರಂತೆ. ಅಷ್ಟರ ಮಟ್ಟಿಗೆ ಅದು ಮೈಕ್ರೋ ಕಾಂಪ್ಯಾಕ್ಟ್ ಕಾರು. ಆದರೆ ಮೈಲೇಜ್ ನೋಡಿದ್ರೆ ಪ್ರತಿಯೊಬ್ಬರಿಗೆ ಕೂಡಾ ಕೊಳ್ಳೋಣ ಅನ್ನಿಸದೇ ಇರದು.

ಈ ಕಾರಿನ ಗಾತ್ರ ಕೇವಲ 134 ಸೆಂ.ಮೀ ಉದ್ದ, 98 ಸೆಂ.ಮೀ ಅಗಲ ಮತ್ತು ಕೇವಲ 100 ಸೆಂ.ಮೀ ಎತ್ತರವನ್ನು ಹೊಂದಿದೆ. ಅಲೆಕ್ಸ್ ಹೇಳುವಂತೆ ಅವನು ಎಲ್ಲಿಗೆ ಹೋದರೂ, ಅವನ ಮುದ್ದಾದ ಕಾರಿನಿಂದಾಗಿ ಜನರು ಅವನನ್ನು ಹಿಂತಿರುಗಿ ನೋಡುತ್ತಾರೆ. ಇದು 2010 ರಲ್ಲಿ ವಿಶ್ವದ ಅತ್ಯಂತ ಚಿಕ್ಕ ಕಾರು ಎಂದು ಪಟ್ಟಿ ಮಾಡಲ್ಪಟ್ಟಿದೆ ಮತ್ತು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಕೂಡಾ ತನ್ನ ಹೆಸರನ್ನು ದಾಖಲಿಸಿದೆ.

ಕಾರಿನ ಎಂಜಿನ್ ಮತ್ತು ಪೆಟ್ರೋಲ್ ಸಾಮರ್ಥ್ಯದ ಬಗ್ಗೆ ಹೇಳಬೇಕೆಂದರೆ, ಕಾರಿನ ಎಂಜಿನ್ ಮತ್ತು ಪೆಟ್ರೋಲ್ ಸಾಮರ್ಥ್ಯದ 4.5 ಅಶ್ವಶಕ್ತಿಯ ಎಂಜಿನ್‌ನೊಂದಿಗೆ ತಯಾರಾಗಿ ಬಂದಿದ್ದು ಮತ್ತು ಕೇವಲ ಒಂದು ಲೀಟರ್ ಪೆಟ್ರೋಲ್‌ನಲ್ಲಿ ಅದು ಬರೊಬ್ಬರಿ 42 ಕಿಮೀ ವರೆಗೆ ನಿರಂತರವಾಗಿ ಓಡುತ್ತದೆ. ಈ ಕಾರು ನೀಡಬಹುದಾದ ಗರಿಷ್ಠ ವೇಗ ಗಂಟೆಗೆ 37 ಕಿಮೀ.

ಈ ಕಾರನ್ನು ಪಾರ್ಕ್ ಮಾಡಲು ಸಮಸ್ಯೆ ಇಲ್ಲ. ಕೇವಲ 57 ಕೆಜಿ ತೂಕದ ಈ ಕಾರನ್ನು ಒಂದು ಕಡೆಯಿಂದ ಒಂದೇ ಕೈಯಲ್ಲಿ ಎತ್ತಿ ಬೇಕಾದ ಹಾಗೆ ಜರುಗಿಸಬಹುದು. ಈ ಕಾರನ್ನು ಪೀಲ್ ಇಂಜಿನಿಯರಿಂಗ್ ತಯಾರಕರು ಎಂಬ ಕಂಪನಿಯು ತಯಾರಿಸಿದೆ. ಇದನ್ನು ಮೊದಲು 1962 ಮತ್ತು 1965 ರ ನಡುವೆ ಮಾಡಲಾಯಿತು. ಆದರೆ ಮಧ್ಯೆ ನಿಲ್ಲಿಸಿತ್ತು. ನಂತರ ಉತ್ಪಾದನೆಯನ್ನು 2010 ರಲ್ಲಿ ಪುನರಾರಂಭಿಸಲಾಯಿತು.

ಎಂತಹಾ ಅದ್ಭುತ ಮೈಲೇಜ್, ಗಾತ್ರದಲ್ಲಿ ಬೇರೆ ಚಿಕ್ಕದಾಗಿದೆ, ಬರ್ರಿ ಎತ್ತಾಕೊಂಡ್ ಬರೋಣ ಅನ್ನುವ ಮುನ್ನ ಒಂದ್ ಸಾರಿ ಬೆಲೆ ಗಮನಿಸಿ. ಈ ವಿಶ್ವದ ಅತ್ಯಂತ ಚಿಕ್ಕ ಕಾರು ಸಾಕಷ್ಟು ದುಬಾರಿಯಾಗಿದೆ. ಅಲೆಕ್ಸ್ ಹೇಳಿದಂತೆ, ಹೊಸ P50 ಬೆಲೆ 84 ಲಕ್ಷಕ್ಕಿಂತ ಹೆಚ್ಚು !!

Leave A Reply

Your email address will not be published.