ಸುಳ್ಯ ಯುವಕನ ಮೇಲೆ ಗುಂಡು ಹಾರಿಸಿ ಕೊಲೆ ಯತ್ನ ,ಕೂಡಲೇ ಆರೋಪಿಗಳನ್ನು ಬಂಧಿಸಲು ಎಸ್‌ಡಿಪಿಐ ಆಗ್ರಹ

ಸುಳ್ಯ, ಜೂ 06:-ಕಳೆದ ರಾತ್ರಿ ಸುಳ್ಯದ ವೆಂಕಟರಮನ ಸೊಸೈಟಿ ಬಳಿ ಯುವಕನೊಬ್ಬನನ್ನು ಗುಂಡು ಹಾರಿಸಿ ಕೊಲೆ ನಡೆಸಲು ಯತ್ನಿಸಿದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರದ ಸಮಿತಿ ಅಧ್ಯಕ್ಷರಾದ ಇಕ್ಬಾಲ್ ಬೆಳ್ಳಾರೆ ಆಗ್ರಹಿಸಿದ್ದಾರೆ.

 

ವರ್ಷಗಳ ಹಿಂದೆ ಪೈಚಾರ್ ಸಮೀಪದ ಶಾಂತಿನಗರ ಎಂಬಲ್ಲಿ ಕೂಡ ವ್ಯಕ್ತಿಯೊಬ್ಬರನ್ನು ಗುಂಡು ಹಾರಿಸಿ ಹತ್ಯೆಗೈದ ಘಟನೆ ನಡೆದಿತ್ತು.ಇದೀಗ ಅಂತಹ ಘಟನೆ ಪುನರಾವರ್ತನೆಯಾಗಿದೆ. ಈ ರೀತಿಯಲ್ಲಿ ಬಿಜೆಪಿ ಸಚಿವರ ಕ್ಷೇತ್ರದಲ್ಲೆ ಸಾರ್ವಜನಿಕವಾಗಿ ಗುಂಡು ಹಾರಿಸುವಷ್ಟು ಶಾಂತಿ-ಸುವ್ಯವಸ್ಥೆ ಹದಗೆಟ್ಟಿದೆ.
ಕಿಡಿಗೇಡಿಗಳಿಗೆ ಪೋಲೀಸರ ಭಯ ಇಲ್ಲದೇ ಇರುವುದರಿಂದ ಈ ರೀತಿಯ ಘಟನೆ ಪುನರಾವರ್ತನೆ ಯಾಗುತ್ತಲೇ ಇದೆ.
ಈ ಪ್ರಕರಣವನ್ನು ಪೋಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಇದರ ಮೂಲವನ್ನು ಪತ್ತೆ ಹಚ್ಚಬೇಕು.ಯಾಕೆಂದರೆ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಆರೋಪಿಗಳು ಯೋಜನೆ ರೂಪಿಸಿದ್ದು ,ಬಂದೂಕು ತರಬೇತಿ ಪಡೆದಿದ್ದು ಸುಳ್ಯ ತಾಲ್ಲೂಕಿನಲ್ಲಿ ಎಂದು ತನಿಖೆಯಿಂದ ಸಾಬೀತಾಗಿದೆ.ಅದಲ್ಲದೇ ವರ್ಷಗಳ ಹಿಂದೆ ಸುಬ್ರಹ್ಮಣ್ಯ ಸಮೀಪ ಬಾಂಬ್ ತಯಾರಿಕ ಘಟಕವನ್ನು ಪೋಲೀಸರು ಪತ್ತೆ ಹಚ್ಚಿ ಆರೋಪಿಗಳನ್ನು ಬಂದಿಸಿದ್ದರು.ಇದೀಗ ಪುನಃ ನಗರದಲ್ಲಿ ಬಂದೂಕಿನ ಶಬ್ದ ಕೇಳಿ ಬಂದಿದೆ.ಹಾಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇದರ ಮೂಲವನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Leave A Reply

Your email address will not be published.