ಸಿಹಿ ಸುದ್ದಿ : ಇನ್ನು ಮುಂದೆ ಈ ಮಾತ್ರೆಗಳ ಖರೀದಿಗೆ ಬೇಕಾಗಿಲ್ಲ ವೈದ್ಯರ ಚೀಟಿ !!!

ಔಷಧಿ ಅಂಗಡಿಗೆ ನಾವು ಹೋದಾಗ ಯಾವುದಾದರೂ ಒಂದು ಮಾತ್ರೆ ಹೆಸರು ಹೇಳಿದರೆ ಕೆಲವೊಂದು ಔಷಧಿಗಳನ್ನು ಅಂಗಡಿಯವರು ಮಾತ್ರೆ ನೀಡುವುದಿಲ್ಲ. ಡಾಕ್ಟರ್ ಪ್ರಿಸ್ಕ್ರಿಪ್ಶನ್ ಕೊಡಿ ಎಂದು ಕೇಳುವವರೇ ಹೆಚ್ಚು. ಅದು ರೂಲ್ಸ್ ಕೂಡಾ ಹೌದು.

ಹಾಗೆನೇ ಕೆಲವೊಂದು ಮಾತ್ರೆಗಳನ್ನು ನೀವು ವೈದ್ಯರ ಪ್ರಿಸ್ಕ್ರಿಪ್ಶನ್ ಇಲ್ಲದೆ ಖರೀದಿ ಮಾಡುವಂತೆ ಇಲ್ಲ. ಹಾಗೆಯೇ ಮತ್ತೆ ಕೆಲವೇ ಕೆಲವನ್ನು ಔಷಧಿ ಅಂಗಡಿಯವರು ವೈದ್ಯರ ಪ್ರಿಸ್ಕ್ರಿಪ್ಶನ್ ಇಲ್ಲದೇನೇ ಕೊಡುತ್ತಾರೆ. ಕೊರೊನಾ ತಾಂಡವವಾಡುತ್ತಿದ್ದ ಸಂದರ್ಭದಲ್ಲಿ ಮಾತ್ರೆಗಳನ್ನು ನೀಡುವ ವಿಚಾರದಲ್ಲಿ ಸರಕಾರ ಕಠಿಣ ಕ್ರಮಗಳನ್ನು ಕೈಗೊಂಡಿತ್ತು.
ಜ್ವರದ ಮಾತ್ರೆ ಕೇಳಲು ಬಂದ ರೋಗಿಗಳ ಮಾಹಿತಿಯನ್ನು ಸಂಗ್ರಹಿಸಿ, ಟೆಸ್ಟ್ ಮಾಡಿಸಿ ಬನ್ನಿ ಆಮೇಲೆ ಕೊಡ್ತೀವಿ ಎಂದೇ ಹೇಳುತ್ತಿದ್ದರು. ಇದೇ ಕಾರಣಕ್ಕೆ ಅನೇಕರು ನೆಗಡಿ, ಜ್ವರದ ಮಾತ್ರೆಯನ್ನು ಔಷಧಿ ಅಂಗಡಿಯಲ್ಲಿ ಕೇಳಲು ಹೆದರುತ್ತಿದ್ದರು.

ಆದರೆ ಇನ್ಮುಂದೆ ಕೆಲ ಮಾತ್ರೆಗಳನ್ನು ನೀವು ವೈದ್ಯರ ಪ್ರಿಸ್ಕ್ರಿಪ್ಶನ್ ಇಲ್ಲದೇನೇ ಖರೀದಿ ಮಾಡಹುದು. ಪ್ಯಾರಾಸಿಟಮಾಲ್ ಮತ್ತು ಇತರ 15 ಸಾಮಾನ್ಯವಾಗಿ ಬಳಸುವ ಔಷಧಿಗಳನ್ನು ಖರೀದಿಸಲು ಇನ್ನು ಮುಂದೆ ವೈದ್ಯರ ಪ್ರಿಸ್ಕ್ರಿಪ್ಶನ್ ಅಗತ್ಯವಿಲ್ಲ. ಈ ಔಷಧಿಗಳನ್ನು ಓವರ್ ದ ಕೌಂಟರ್ (OTC) ಪಟ್ಟಿಗೆ ಸೇರಿಸಲು ಸರ್ಕಾರ ಸಿದ್ಧತೆ ನಡೆಸಿದೆ.

ಪ್ಯಾರಾಸಿಟಮಾಲ್ (Paracetamol), ಡಿಕ್ಲೋಫೆನಾಕ್ (Diclofenac) ಮೂಗು ಕಟ್ಟುವ ಸಮಸ್ಯೆಗೆ ಪರಿಹಾರ ನೀಡುವ ಔಷಧಿ (Nasal Decongestants) ಮತ್ತು ಅಲರ್ಜಿ (Anti Allergics) ವಿರೋಧಿ ಔಷಧಿಗಳು ಇದರಲ್ಲಿ ಸೇರಿವೆ. ಇದಲ್ಲದೆ ಈ ಔಷಧಿಗಳಲ್ಲಿ ನಂಜುನಿರೋಧಕ (Antiseptic) ಮತ್ತು ಸೋಂಕು ನಿವಾರಕ ಏಜೆಂಟ್, ಜಿಂಗೈವಿಟಿಸ್ ಚಿಕಿತ್ಸೆಗೆ ಬಳಸುವ ಮೌತ್ವಾಶ್ ಕ್ಲೋರೊಹೆಕ್ಸಿಡೈನ್ (Chlorohexidine), ಕೆಮ್ಮು ಚಿಕಿತ್ಸೆಗೆ ಬಳಸುವ ಡೆಕ್ಟೋಮೆಥೋರ್ಫಾನ್ ಹೈಡೋಬೋಮೈಡ್ neo (Dextromethorphan Hydrobromide Lozenges), ಆಂಟಿ-ಬ್ಯಾಕ್ಟಿರಿಯಲ್ ಮೊಡವೆ ಫಾರ್ಮುಲೇಶನ್, ಆಂಟಿಫಂಗಲ್ ಕ್ರೀಮ್, ಮೂಗು ಕಟ್ಟುವ ಸಮಸ್ಯೆಗೆ ಪರಿಹಾರ ನೀಡುವ ಔಷಧಿ, ನೋವು ನಿವಾರಕ ಕ್ರೀಮ್, ಆಂಟಿ ಅಲರ್ಜಿ ಕ್ಯಾಪ್ಸುಲ್ ಗಳನ್ನು ಇದು ಒಳಗೊಂಡಿದೆ. ಈ ಮಾತ್ರೆ, ಔಷಧಿಗಳಿಗೆ ಯಾವುದೇ ಪ್ರಿಸ್ಕಿಪ್ಶನ್ ಬೇಕಾಗಿಲ್ಲ. ನೀವು ಆರಾಮವಾಗಿ ಔಷಧಿ ಅಂಗಡಿಯಲ್ಲಿ ಇದನ್ನು ಖರೀದಿ ಮಾಡಹುದು.

ಪ್ರಸ್ತುತ ಔಷಧಿ ಅಂಗಡಿಗಳಲ್ಲಿ ವೈದ್ಯರ ಚೀಟಿ ಇಲ್ಲದೆಯೇ ದೊರೆಯುವ ಹಲವು ಔಷಧಗಳು ಇವೆ. ಆದರೆ ಇದೀಗ OTC ಔಷಧಿಗಳಿಗೆ ಯಾವುದೇ ಕಾನೂನು ಜಾರಿಯಾಗುವುದಿಲ್ಲ. ಈ ಔಷಧಗಳನ್ನು ನಿರಂತರವಾಗಿ 5 ದಿನಕ್ಕಿಂತ ಹೆಚ್ಚು ಮುಂದುವರಿಸಬಾರದು, ರೋಗಲಕ್ಷಣಗಳು ಕಡಿಮೆಯಾಗದಿದ್ದರೆ ರೋಗಿಯು ವೈದ್ಯರನ್ನು ಸಂಪರ್ಕಿಸಬೇಕು ಎಂಬ ಷರತ್ತನ್ನೂ ವಿಧಿಸಲಾಗಿದೆ.

Leave A Reply

Your email address will not be published.