ಓದುಗರೇ ಗಮನವಿಟ್ಟು ನೋಡಿ : ಈ ದೃಷ್ಟಿಭ್ರಮೆ ಚಿತ್ರದಲ್ಲಿರುವ 10 ಮಹಾನ್ ವ್ಯಕ್ತಿಗಳನ್ನು ಪತ್ತೆ ಹಚ್ಚಲು ನಿಮಗೆ ಸಾಧ್ಯವಾ?

ಆಪ್ಟಿಕಲ್ ಇಲ್ಯೂಶನ್ ಚಿತ್ರ ಎಂದರೆ ಯಾರಿಗೆ ತಾನೇ ಈಗ ಗೊತ್ತಿಲ್ಲ ಹೇಳಿ. ಎಲ್ಲರೂ ಇಷ್ಟಪಡುತ್ತಾರೆ. ಮತ್ತು ಈ ರೀತಿಯ ಚಿತ್ರಗಳಲ್ಲಿ ಅಡಗಿರುವ ಚಿತ್ರವನ್ನು ಹುಡುಕಲು ಪ್ರಯತ್ನ ಪಡುತ್ತಾರೆ. ಈಗ ನಾವು ಇಲ್ಲಿ ಕೊಡೋ ಸವಾಲಿನ ಪ್ರಶ್ನೆ ಈ ಕೆಳಗೆ ಇದೆ. ಟ್ರೈ ಮಾಡಿ…

ಇಂತಹ ಅನೇಕ ಆಪ್ಟಿಕಲ್ ಇಲ್ಯೂಜನ್ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗ್ತಾ ಇರುತ್ತೆ. ಬುದ್ಧಿ ಹಾಗೂ ಕಣ್ಣಿಗೆ ಕೆಲಸ ಕೊಟ್ಟರೆ ಸಾಕು, ಇಂಥಹ ಭ್ರಮೆ ಹುಟ್ಟಿಸೋ ಚಿತ್ರಗಳನ್ನ ಸುಲಭವಾಗಿ ಪತ್ತೆಹಚ್ಚಬಹುದು

ನಿಮಗೆ ಇದೊಂದು ಸವಾಲು, ಇದು ಕಣ್ಣಿಗೆ ಮತ್ತು ಬುದ್ಧಿಗೆ ಕೆಲಸ ಕೊಡುವ ಕೆಲಸ. ನೀವು ಈ ಸವಾಲು ಒಪ್ಪುವುದಾದರೆ ಈ ಚಿತ್ರವನ್ನ ಗಮನವಿಟ್ಟು ನೋಡಿ. ಇದು ಆಪ್ಟಿಕಲ್ ಇಲ್ಯುಜನ್ ಚಿತ್ರ. ಇದನ್ನ ನೋಡಿದಾಕ್ಷಣ, ನಿಮಗೆ ಇದೊಂದು ಒಣಗಿದ, ಎಲೆ ಉದುರಿಹೋಗಿರೋ ಮರ ಕಂಡ ಹಾಗಾಗುತ್ತೆ.
ಅಲ್ಲೇ ನೋಡಿ ನೀವು ಮಾಡುವ ತಪ್ಪು.

ಇದೊಂದು ಭ್ರಮೆ ಹುಟ್ಟಿಸುವಂತಹ ಚಿತ್ರ. ಇದು ನೋಡುವುದಕ್ಕಷ್ಟೆ ಈ ರೀತಿ ಕಾಣಿಸುತ್ತೆ. ಅಸಲಿಗೆ ಈ ಚಿತ್ರದಲ್ಲಿ 10 ಭಾರತೀಯ ಮಹಾನ್ ವ್ಯಕ್ತಿಗಳ ಚಿತ್ರವನ್ನ ಕಾಣಬಹುದಾಗಿದೆ. ನೀವು ಸ್ವಲ್ಪ ಗಮನ ಇಟ್ಟು ನೋಡಿದರೆ, ಒಬ್ಬೊಬ್ಬರದ್ದೇ ಚಿತ್ರ ಸ್ಪಷ್ಟವಾಗುತ್ತ ಹೋಗುತ್ತೆ.

ಮರದ ರೆಂಬೆಗಳತ್ತ ಗಮನ ಹರಿಸಿದರೆ ಭಾರತದ ಮೊಟ್ಟ ಮೊದಲ ಮಹಿಳಾ ಪ್ರಧಾನಮಂತ್ರಿ ಇಂದಿರಾಗಾಂಧಿಯವರ ಚಿತ್ರ ಕಾಣಿಸುತ್ತೆ. ಹಾಗೆ ನೋಡ್ತಾ ಹೋದರೆ ಅದೇ ಚಿತ್ರದ ಪಕ್ಕದಲ್ಲಿ ಭಾರತದ ಮೊದಲ ಗೃಹಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಕಾಣಿಸುತ್ತಾರೆ. ಅಲ್ಲೇ ಇನ್ನೂ ಕೆಲ ಖ್ಯಾತ ನಾಮರ ಚಿತ್ರಗಳಿವೆ ಅವುಗಳನ್ನ ಕಂಡು ಹಿಡಿಯುವುದು ಕೊಂಚ ಕಷ್ಟ.

ಒಬ್ಬೊಬ್ಬರ ಮುಖವನ್ನ ನೆನಸಿಕೊಳ್ಳುತ್ತಾ ನೀವು ಈ ಚಿತ್ರ ನೋಡ್ತಾ ಹೋದರೆ ಚಾಚಾ ನೆಹರು ಅವರ ಮುಖ ಕಾಣಿಸುತ್ತೆ. ಅದರ ಜೊತೆ ಜೊತೆಯಲ್ಲಿಯೇ ಇರೋ ಇನ್ನೊಂದು ಚಿತ್ರ ಭಾರತದ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಗಳ ಮುಖ. ಇದೇ ಆಪ್ಟಿಕಲ್ ಇಲ್ಯೂಜನ್ ಚಿತ್ರದಲ್ಲಿ ದೇಶಕ್ಕಾಗಿ ಮಡಿದ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಚಿತ್ರವನ್ನ ಕೂಡಾ ಕಾಣಬಹುದಾಗಿದೆ, ಅವರು ಸುಭಾಶ್ಚಂದ್ರ ಬೋಸ್ ಹಾಗೂ ಭಗತ್ ಸಿಂಗ್. ಭಗತ್ ಸಿಂಗ್ ಚಿತ್ರದ ಕೆಳಗೆನೇ ಭಾರತದ ಎರಡನೇ ರಾಷ್ಟ್ರಪತಿಗಳಾಗಿದ್ದ ರಾಧಾಕೃಷ್ಣನ್ ಅವರ ಚಿತ್ರವಿದೆ.

ಇನ್ನೂ ಈ ಚಿತ್ರದ ಮೇಲಿನ ಭಾಗದತ್ತ ಗಮನ ಹರಿಸಿದರೆ,
ಬಾಲಗಂಗಾಧರ ತಿಲಕ್ ಅವರ ಚಿತ್ರ ಇರುವುದನ್ನ
ಗಮನಿಸಬಹುದು. ಅದೇ ಚಿತ್ರದ ಜೊತೆ ಮಹಾತ್ಮ
ಗಾಂಧಿಯವರ ಚಿತ್ರ ಸಹ ಇದೆ. ಇನ್ನು ನೋಬೆಲ್ ಪ್ರಶಸ್ತಿ
ವಿಜೇತ ಕವಿ ರವೀಂದ್ರನಾಥ್ ಠಾಗೋರ್ ಅವರ ಭಾವಚಿತ್ರ ಈ ಚಿತ್ರದಲ್ಲಿ ಇದೆ.

Leave A Reply

Your email address will not be published.