ಭಾರತೀಯ ಸೇನೆ ಸೇರಲಿಚ್ಛಿಸುವವರಿಗೆ ಇಲ್ಲಿದೆ ಗುಡ್ ನ್ಯೂಸ್ !! | ಕೇಂದ್ರ ಸರ್ಕಾರದಿಂದ ಸೈನಿಕರಿಗಾಗಿಯೇ ಸಿದ್ಧವಾಗಿದೆ ವಿನೂತನ ‘ಅಗ್ನಿಪಥ್’ ಯೋಜನೆ

ಭಾರತೀಯ ಸೇನೆ ಸೇರುವವರಿಗೆ ಶುಭ ಸುದ್ದಿ ಇದೆ. ಸೇನೆಯಲ್ಲಿ 4 ವರ್ಷಗಳ ಕಾಲ ಸೇವೆ ಸಲ್ಲಿಸುವ ವಿನೂತನ ʼಅಗ್ನಿಪಥ್‌ʼ ಯೋಜನೆಗೆ ಶೀಘ್ರವೇ ಕೇಂದ್ರ ಕ್ಯಾಬಿನೆಟ್‌ ಒಪ್ಪಿಗೆ ನೀಡುವ ಸಾಧ್ಯತೆಯಿದೆ.


Ad Widget

Ad Widget

ಟೂರ್ ಆಫ್ ಡ್ಯೂಟಿ ಪ್ರವೇಶ ಯೋಜನೆಯಡಿ ಮೂರು ಸೇನೆಗೆ ಯುವ ಜನತೆ ಸೇರಬಹುದಾಗಿದೆ. ಈ ಯೋಜನೆಯಡಿ ಸೈನಿಕರನ್ನು ಅಲ್ಪಾವಧಿಯ ಒಪ್ಪಂದದ ಮೇಲೆ ನೇಮಿಸಿಕೊಳ್ಳಲಾಗುತ್ತದೆ. ತರಬೇತಿ ನೀಡಿದ ಬಳಿಕ ವಿವಿಧ ಕ್ಷೇತ್ರಗಳಲ್ಲಿ ನಿಯೋಜಿಸಲಾಗುತ್ತದೆ.


Ad Widget

ಹೇಗಿರಲಿದೆ ಈ ಯೋಜನೆ?

ಆಯ್ಕೆಗೊಂಡ ಅಭ್ಯರ್ಥಿಗಳಿಗೆ 6 ತಿಂಗಳು ತರಬೇತಿ ನೀಡಲಾಗುತ್ತದೆ. ಸೈನ್ಯಕ್ಕೆ ಸೇರ್ಪಡೆಯಾದವರ ಪೈಕಿ ಶೇ. 20-25ರಷ್ಟು ಅಭ್ಯರ್ಥಿಗಳನ್ನು ಮುಂದುವರಿಸಲಾಗುತ್ತದೆ. 4 ವರ್ಷ ಪೂರ್ಣಗೊಂಡ ಬಳಿಕ ಬಿಡುಗಡೆಯಾಗುತ್ತಿರುವ ಸೈನಿಕರಿಗೆ 10 -12 ಲಕ್ಷ ರೂ.ಪ್ಯಾಕೇಜ್‌ ನೀಡಲಾಗುತ್ತದೆ.

Ad Widget

Ad Widget

Ad Widget

ಈಗಾಗಲೇ ಸಿದ್ಧಪಡಿಸಿದ ಪ್ಲ್ಯಾನ್‌ ನಿಗದಿಯಂತೆ ನಡೆದರೆ ಮುಂದಿನ ಮೂರು ತಿಂಗಳಿನಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. ಕೋವಿಡ್‌ 19 ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಎರಡು ವರ್ಷಗಳಿಂದ ಭಾರತೀಯ ಸೈನ್ಯ ಸ್ಥಗಿತಗೊಳಿಸಿತ್ತು.

error: Content is protected !!
Scroll to Top
%d bloggers like this: