ಧ್ವನಿವರ್ಧಕ ಪರವಾನಗಿಗೆ ಶುಲ್ಕ ನಿಗದಿಪಡಿಸಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

ಬೆಂಗಳೂರು : ರಾಜ್ಯ ಸರ್ಕಾರ ಧ್ವನಿವರ್ಧಕ ಪರವಾನಗಿಗೆ ಶುಲ್ಕ ನಿಗದಿಪಡಿಸಿ ಆದೇಶ ಹೊರಡಿಸಿದ್ದು, ಒಂದು ತಿಂಗಳ ಕಾಲಾವಧಿಯವರೆಗೆ ಮಾತ್ರ ವಸೂಲಿ ಮಾಡಬೇಕಾದ ಶುಲ್ಕದ ಕುರಿತು ತಿಳಿಸಿದೆ.

ಒಂದು ದಿನದ ಅವಧಿಗೆ 75 ರೂ. 1 ರಿಂದ 31 ದಿನಗಳ ಅವಧಿಗೆ (15) ಹಾಗೂ 01 ತಿಂಗಳ ಅವಧಿಗೆ 450 ರೂ. ದರ ನಿಗದಿಪಡಿಸಲಾಗಿದೆ. ರಾಜ್ಯ ಸರ್ಕಾರವು ಧ್ವನಿವರ್ಧಕ ಪರವಾನಗಿಗೆ ಒಂದು ತಿಂಗಳಿಗಿಂತ ಮೇಲ್ಪಟ್ಟು ಕೊಡುವಂತಹ ಪರವಾನಗಿಗಳಿಗೆ ಶುಲ್ಕವನ್ನು ನಿಗದಿಪಡಿಸಿಲ್ಲ.

ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ, Noise P0llution Rules, 200 ರ ಅಡಿಯಲ್ಲಿ ಡಿಸೈನೇಟೆಡ್ ಆತೊರಿಟಿ ಪರವಾನಗಿಗಳನ್ನು ಎರಡು ವರ್ಷಗಳ ಅವಧಿಯವರೆಗೆ ನೀಡಬಹುದೆಂದು ಆದೇಶಿಸಲಾಗಿರುವುದರಿಂದ ಈ ಆದೇಶದನ್ವಯ ಒಂದು ತಿಂಗಳಿಗಿಂತ ಮೇಲ್ಪಟ್ಟ ಕಾಲಾವಧಿಗೆ ನೀಡಲಾಗಿರುವ ಎಲ್ಲಾ ಪರವಾನಗಿಗಳಿಗೆ ಒಟ್ಟಾರೆ ಶುಲ್ಕ 450 ರೂ. ಮಾತ್ರ ನಿಗದಿಪಡಿಸಲಾಗಿರುತ್ತದೆ ಎಂದು ಹೇಳಿದೆ.

Leave A Reply

Your email address will not be published.