ಗೌರಿ ಲಂಕೇಶ್ ಹತ್ಯೆ ಪ್ರಕರಣ, ಸಾಕ್ಷಿದಾರರ ಪಟ್ಟಿ ಕೋರ್ಟ್ ಗೆ ಸಲ್ಲಿಕೆ

ಬೆಂಗಳೂರು: ಪತ್ರಕರ್ತೆ ಕಮ್ ಸೊ ಕಾಲ್ಡ್ ಸಾಮಾಜಿಕ ಹೋರಾಟಗಾರ್ತಿ,ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಸಾಕ್ಷಿದಾರರ ಪಟ್ಟಿಯನ್ನು ಬೆಂಗಳೂರು ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಲ್ಲಿಸಿದ್ದಾರೆ. ಎಸ್ ಪಿಪಿ ಶನಿವಾರ ಸಾಕ್ಷಿದಾರರ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆಯಾಗಿ ಆರೋಪಿ ಪರ ವಕೀಲರು, ಈ ಕೊಲೆ ತನಿಖೆಯ ಭಾಗವಾಗಿರುವ ಹಲವು ಎಲೆಕ್ಟ್ರಾನಿಕ್ ಸಾಕ್ಷ್ಯಗಳ ಪಟ್ಟಿಯನ್ನು ನೀಡುವಂತೆ ಮನವಿ ಮಾಡಿದ್ದಾರೆ. ಅರ್ಜಿಗೆ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸುವಂತೆ ಹೇಳಿ ನ್ಯಾಯಾಲಯ ಜೂನ್ 6 ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಬರುವ ಜುಲೈ 4 ರಿಂದ ಜುಲೈ 8 ರವರೆಗೆ ಮತ್ತು ಪ್ರತಿ ತಿಂಗಳು ಒಂದು ವಾರದವರೆಗೆ ವಿಚಾರಣೆ ನಡೆಯಲಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಇದೀಗಾಗಲೇ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ. ಪರಶುರಾಮ್ ವಾಘಮೋರೆ ಎಂಬಾತನೇ ಈಗ ಕಂಡುಬರುವ ಮುಖ್ಯ ಮತ್ತು ನಂ.1 ಆಪಾದಿತ.

ಪತ್ರಕರ್ತ ಲಂಕೇಶ್ ಪುತ್ರಿ, ಗೌರಿ ಲಂಕೇಶ್ ಲಂಕೇಶ್ ಅವರನ್ನು ಸೆಪ್ಟೆಂಬರ್ 5, 2017 ರಂದು ನಗರದ ರಾಜರಾಜೇಶ್ವರಿ ನಗರದಲ್ಲಿನ ಅವರ ನಿವಾಸದ ಹೊರಗೆ ಹತ್ಯೆ ಮಾಡಲಾಗಿತ್ತು. ಅವತ್ತು ಸಂಜೆ 8 ಗಂಟೆಗೆ ತನ್ನ ಮನೆಯ ಕಾಂಪೌಂಡ್ ನ ಗೇಟು ತೆರೆದು ಇನ್ನೇನು ಮನೆ ಬಾಗಿಲು ಓಪನ್ ಮಾಡಬೇಕು ಅನ್ನುವಷ್ಟರಲ್ಲಿ ಹಿಂದೆ ಯಾರೋ ಬಂದಿದ್ದಾರೆಂದು ಗೊತ್ತಾದ ಕೂಡಲೇ ಗೌರಿ ಹಿಂದಿರುಗಿ ಹಂತಕನನ್ನು ನೋಡಿದ್ದಾರೆ. ಕೂಡಲೇ ಯಾರು? ಯಾರು ನೀನು? ಅಂತ ಗಾಬರಿಯಿಂದ ಗೌರಿ ಪ್ರಶ್ನೆ ಮಾಡಿದ್ದಾರೆ. ಪ್ರಶ್ನೆಗೆ ತಬ್ಬಿಬ್ಬಾದ ಹಂತಕ ತಕ್ಷಣ ಕೈಯಲ್ಲಿದ್ದ ರಿವಾಲ್ವರ್ ಮೂಲಕ ತಲೆಗೆ ಗುಂಡು ಹೊಡೆಯಲು ಫೈರ್ ಮಾಡಿದ್ದ, ಆದ್ರೆ ಅದು ಗುರಿ ತಪ್ಪಿ ಗೋಡೆಗೆ ಸಿಡಿದಿತ್ತು. ಗೌರಿ ತಪ್ಪಿಸಿಕೊಳ್ತಾರೆ ಅಂತ ಗೊತ್ತಾದಾಗ ಹಂತಕ, ಕ್ಷಣಾರ್ಧದಲ್ಲಿ ಟಾರ್ಗೆಟ್ ಚೇಂಜ್ ಮಾಡಿ, ತಲೆಗೆ ಗುಂಡು ಹೊಡೆಯುವ ಬದಲು, ಹೊಟ್ಟೆ ಮತ್ತು ಎದೆಯ ಭಾಗಕ್ಕೆ ನಾಲ್ಕು ಗುಂಡು ಹೊಡೆದಿದ್ದಾನೆ. ಕೊನೆಯ ಗುಂಡು ಮತ್ತೆ ಗುರಿ ತಪ್ಪಿತ್ತು. ಅಷ್ಟರಲ್ಲಿ ಪತ್ರಕರ್ತೆ ಗೌರಿಯವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಹಂತಕ ಸಿಡಿಸಿದ ಮೂರನೇ ಗುಂಡು ನೇರವಾಗಿ ಎದೆಗೆ ನುಗ್ಗಿ ಹೃದಯವನ್ನೇ ಹೊಕ್ಕಿತ್ತು. 7 ಗುಂಡುಗಳು ಆಕೆಯ ತಲೆ, ಎದೆ, ಕುತ್ತಿಗೆಯ ಒಳಗೆ ನುಗ್ಗಿದ್ದವು. ಮೊದಲು ಒಬ್ಬಾತ ಗುಂಡು ಹಾಕಿದ್ದ. ನಂತರ, ಮತ್ತಿಬ್ಬರು ಫೈರ್ ಓಪನ್ ಮಾಡಿದ್ದರು ಎನ್ನಲಾಗಿದೆ. ಗೌರಿ ಲಂಕೇಶ್ ಸ್ಥಳದಲ್ಲೇ ರಕ್ತ ಕಾರಿ ಸತ್ತಿದ್ದರು. ದಾಬೋಲ್ಕರ್ ಮತ್ತು ಎಂ ಎಂ ಕಲಬುರ್ಗಿ ಅವರ ಮಾದರಿಯಲ್ಲೇ ಹತ್ಯೆ ನಡೆಸಲಾಗಿತ್ತು. ಅವತ್ತಿನ ಕರ್ನಾಟಕ ಕಾಂಗ್ರೆಸ್ ಸರಕಾರದ ಸಂದರ್ಭ ನಡೆದಿತ್ತು, ಅದಕ್ಕಾಗಿ ಕಾಗ್ರೇಸ್ ಸರ್ಕಾರವನ್ನು ಹೊಣೆಗಾರ ಮಾಡಿ ದೂಷಿಸಲಾಗಿತ್ತು. ಹಿಂದುಗಳನ್ನು ಮತ್ತು ಹಿಂದುತ್ವವನ್ನು ವಿನಾಕಾರಣ ದ್ವೇಷಿಸಿದ ಕಾರಣದಿಂದ ರೋಸತ್ತು ಹೋದ ವ್ಯತಿಯಿಂದ ಈ ಹತ್ಯೆ ನಡೆದಿತ್ತು ಎನ್ನಲಾಗಿದೆ.

Leave A Reply