ಪ್ರತಿ ವರ್ಷ ನಾವೆಲ್ಲರೂ ಜೂನ್ ೫ ರಂದು ವಿಶ್ವದಾದ್ಯಂತ ಸರಿಸುಮಾರು ೧೪೩ ದೇಶಗಳು ಪರಿಸರ ದಿನವನ್ನು ಆಚರಿಸುತ್ತಿವೆ. ಜನರಿಗೆ ಪರಿಸರದ ಕಾಳಜಿ ಜೊತೆಗೆ ಪರಿಸರದ ಮಹತ್ವ ಸಾರುವ ಹಾಗೂ ಜನರಲ್ಲಿ ಜಾಗೃತಿಗೊಳಿಸುವ ಉದ್ದೇಶದಿಂದ ಇದನ್ನು ವಿಶ್ವಸಂಸ್ಥೆಯು ಸ್ಥಾಪಿಸಿದೆ.
ಇಂದಿನ ನಮ್ಮ ಪರಿಸರ ಹೇಗಿದೆ? ಇನ್ನು ರಕ್ಷಣೆ ಮಾಡದಿದ್ದರೆ ಮುಂದೇನು ಆಗುವುದು ಎಂಬ ಕಟು ವಾಸ್ತವತೆ ಎಲ್ಲರಿಗೂ ಗೊತ್ತಿಲ್ಲವೇ.
ಆದರೂ ಇಂದಿನ ಪರಿಸ್ಥಿತಿಯಲ್ಲಿ ಅಭಿವೃದ್ಧಿ ಕುರುಹಾಗಿ ವರ್ತಿಸುವುದರಿಂದ ಪರಿಸರ ಹಾನಿ ಹೆಚ್ಚಾಗಿದೆ. ಎಷ್ಟೋ ಗಿಡ ಮರಗಳನ್ನು ಕಡಿಯಲಾಗುತ್ತಿದೆ. ನದಿ ಸಾಗರ ನೀರು ಕಲುಷಿತವಾಗುತ್ತಿದೆ. ಇದರಿಂದ ಪರಿಸರ ನಾಶವಾಗುತ್ತಿದೆ. ಹೀಗಾಗಿ ವಿದ್ಯಾವಂತರೇ ಹೆಚ್ಚು ಹೆಚ್ಚು ಹಾಳು ಮಾಡುತ್ತಿರುವ ಇಂದಿನ ದಿನಗಳಲ್ಲಿ ಪರಿಸರ ರಕ್ಷಣೆ ಬಗ್ಗೆ ವಿಶೇಷ ಒಲವು ಮೂಡುವಂತೆ ಮಾಡಬೇಕಿದೆ. ಶಾಲಾ ಕಾಲೇಜುಗಳಿಂದಲೇ ಪರಿಸರದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕಾಗಿದೆ. ಪ್ರಕೃತಿಯ ಜೊತೆಗೆ ಮಕ್ಕಳು ಬೆರೆಯುವಂತಾದರೆ ಪರಿಸರವು ತಾನಾಗಿಯೇ ಉಳಿಯುತ್ತದೆ. ಸಕಲ ಜೀವರಾಶಿಯ ದೃಷ್ಟಿಯಿಂದ ಪರಿಸರ ರಕ್ಷಣೆ ಆದ್ಯ ಕರ್ತವ್ಯವಾಗಿದೆ. ಪರಿಸರಕ್ಕೆ ಮುಖ್ಯವಾಗಿ ಹಾನಿಯಾಗುತ್ತಿರುವುದೇ ಮನುಷ್ಯರಿಂದ. ಆ ತಪ್ಪನ್ನು ನಾವುಗಳು ಸರಿಪಡಿಸಬೇಕಾಗಿದೆ. ಪರಿಸರ ರಕ್ಷಣೆಗೆ ಮನುಷ್ಯ ತುಂಬಾ ಶ್ರಮಿಸಬೇಕಾಗಿಲ್ಲ. ಅನಗತ್ಯವಾಗಿ ಪರಿಸರವನ್ನು ಹಾಳು ಮಾಡದಿರುವುದು ಹಾಗೂ ಪ್ರತಿಯೊಬ್ಬರು ಒಂದೊಂದು ಗಿಡವನ್ನು ಬೆಳೆಸಿದರೆ ಸಾಕು. ಪರಿಸರ ಸಮೃದ್ಧಿಯಾಗುತ್ತದೆ. ಹಾಗಾಗಿ ನಮಗೆ ಇರುವುದೊಂದೇ ಪರಿಸರ . ಅದನ್ನು ರಕ್ಷಿಸೋಣ. ಪರಿಸರ ಉಳಿಸಲು ನಾಗರಿಕ ಸಮಾಜದ ಪ್ರತಿಯೊಬ್ಬರು ಕೈ ಜೋಡಿಸಬೇಕಾದ ಅವಶ್ಯಕತೆ ಇದೆ. ವಿಶೇಷವಾಗಿ ಯುವ ಜನಾಂಗ ಪ್ರಕೃತಿ ಉಳಿಸಲು ಮುಂದಾಗಬೇಕಿದೆ.
ಕಿಶನ್ ಎಂ. ಭಟ್
ಪವಿತ್ರ ನಿಲಯ ಪೆರುವಾಜೆ.
