ಪೆರ್ಲ : ದಂಪತಿಗಳಿಬ್ಬರ ಮೃತದೇಹ ನೇಣುಬಿಗಿದ ರೀತಿಯಲ್ಲಿ ಪತ್ತೆ | ಸಾವಿನ ಸುತ್ತ ಅನುಮಾನದ ಹುತ್ತ

ಪೆರ್ಲ: ದಂಪತಿಗಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಮನೆಯೊಳಗಡೆ ಪತ್ತೆಯಾದ ಘಟನೆಯೊಂದು ಕಾಸರಗೋಡು ಜಿಲ್ಲೆಯ ಪೆರ್ಲ ಎಂಬಲ್ಲಿ ಶುಕ್ರವಾರ ಸಂಜೆ ಬೆಳಕಿಗೆ ಬಂದಿದೆ.

ಪೆರ್ಲ ಸಮೀಪದ ಎಣ್ಮಕಜೆ ಗ್ರಾಮ ಪಂಚಾಯತಿನ ಸರ್ಪಮಲೆ ಸಮೀಪದ ಶೆಟ್ಟಿಬೈಲಿನಲ್ಲಿ ವಾಸಿಸುತ್ತಿದ್ದ ಬಾಬು ಎಂಬವರ ಪುತ್ರ ವಸಂತ (28) ಹಾಗೂ ಈತನ ಪತ್ನಿ ಶರಣ್ಯ (25) ಮೃತಪಟ್ಟವರು . ಇವರಿಬ್ಬರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕುಟುಂಬದ ಮೂಲಗಳು ತಿಳಿಸಿದ್ದರು. ಸಾವಿನ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಂಶಯ ವ್ಯಕ್ತವಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಎರಡು ವರ್ಷಗಳ ಹಿಂದೆ ಇವರಿಬ್ಬರು ವಿವಾಹವಾಗಿದ್ದು ಮಕ್ಕಳಾಗಿರಲಿಲ್ಲ. ವಸಂತ ಕೂಲಿ ಕಾರ್ಮಿಕನಾಗಿದ್ದು ಮನೆಯಲ್ಲಿ ದಂಪತಿಗಳಿಬ್ಬರು ಮಾತ್ರ ವಾಸಿಸುತ್ತಿದ್ದರು. ಸಮೀಪದ ಮನೆಯವರ ಪ್ರಕಾರ ನಿನ್ನೆ (ಶುಕ್ರವಾರ) ಹಗಲು ಹೊತ್ತಿನಲ್ಲಿ ಇವರ ಮನೆಯ ಬಾಗಿಲು ಮುಚ್ಚಿದ ಸ್ಥಿತಿಯಲ್ಲಿತ್ತು. ಸಂಜೆಯಾದರೂ ತೆರೆಯದಿದ್ದುದರಿಂದ ಹಾಗೂ ದಂಪತಿಗಳು ಕಾಣಿಸದಿದ್ದಾಗ ಅಸುಪಾಸಿನವರಿಗೆ ಸಂಶಯ ಉಂಟಾಗಿದೆ. ಹೀಗಾಗಿ ಅವರು ಮನೆಯೊಳಗೆ ನೋಡಿದಾಗ ಇಬ್ಬರು ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

error: Content is protected !!
Scroll to Top
%d bloggers like this: