ಪೊಲೀಸರೆಂದು ಹೇಳಿ 20 ಮಂದಿ ತಂಡದಿಂದ ಮದುಮಗಳ ಅಪಹರಣ ಕೇಸ್ ಗೆ ರೋಚಕ ಟ್ವಿಸ್ಟ್ ನೀಡಿದ ಸ್ವತಃ ಮದುವೆಯಾದ ಹುಡುಗಿ!!!

ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ವಧುವಿನ ಕಿಡ್ನ್ಯಾಪ್ ಕೇಸೊಂದು ಎರಡು ದಿನದ ಹಿಂದೆ ದಾಖಲಾಗಿತ್ತು. ವಧುವಿನ ತಂದೆ ಹಾಗೂ ಇಪ್ಪತ್ತು ಜನ ಸಹಚರರಿಂದ ಕಿಡ್ನ್ಯಾಪ್ ಆಗಿದ್ದ ಈ ಪ್ರಕರಣದಲ್ಲಿ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ.


Ad Widget

Ad Widget

Ad Widget

Ad Widget
Ad Widget

Ad Widget

ಪೋಷಕರನ್ನು ಬಿಟ್ಟು ಲವರ್ ಜೊತೆ ಓಡಿ ಹೋಗಿ ಮದುವೆಯಾಗಿದ್ದ ವಧು ಉಲ್ಟಾ ಹೊಡೆದು ಹುಡುಗನ ಮೇಲೆ ದೂರು ನೀಡಲು ಮುಂದಾಗಿದ್ದಾಳೆ. ವಧು ಜಲಜಾ ಆಕೆ ಮದುವೆಯಾಗಿದ್ದ ಗಂಗಾಧರ್ ಮೇಲೆಯೇ ದೂರು ನೀಡಿದ್ದಾಳೆ.


Ad Widget

ಗಂಗಾಧರ್ ನನಗೆ ಮೋಸ ಮಾಡಿದ್ದಾನೆ ಎಂದು ಇಂದು ಡಾಬಸ್‌ಪೇಟೆ ಠಾಣೆಯಲ್ಲಿ ದೂರು ದಾಖಲಿಸಲು ತನ್ನ ಪೋಷಕರ ಜೊತೆ ಬಂದಾಗ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾಳೆ.

ಗಂಗಾಧರ್ ನನ್ನನ್ನು ಬೆದರಿಸಿ ಕರೆದುಕೊಂಡು ಹೋಗಿದ್ದು, ನನ್ನ ತಂದೆಯನ್ನ ಕೊಲ್ಲುವುದಾಗಿ ಹೇಳಿ ನನ್ನನ್ನ ಬಲವಂತದಿಂದ ಮದುವೆಯಾಗಿದ್ದಾನೆ. ಆದರೆ ಆತ ಬೇರೆ ಇನ್ಯಾರದ್ದೋ ಜೊತೆ ಅಫೇರ್ ಇಟ್ಕೊಂಡಿದ್ದಾನೆ. ಅದಕ್ಕೆ ನಾನು ನಮ್ಮಪ್ಪನ ಸ್ನೇಹಿತರಿಗೆ ವಿಷಯ ಮುಟ್ಟಿಸಿದ್ದೆ, ಅಪ್ಪ ಮನೆ ಹತ್ತಿರ ಬಂದಾಗ, ನಾನು ಅಪ್ಪನ ಜೊತೆ ಬಂದೆ. ನನ್ನ ಯಾರು ಕಿಡ್ನ್ಯಾಪ್ ಮಾಡಿಲ್ಲ ಎಂದು ಹೇಳಿದ್ದಾಳೆ.

ಆದರೆ ಹುಡುಗಿ ನೋಡಿದರೆ ನಮ್ಮಪ್ಪ ಬಂದು ಕರೆದುಕೊಂಡು ಹೋದರು ಅಂತಾಳೆ. ಆದರೆ ಇಲ್ಲಿ ನಿನ್ನೆ ಈಕೆ ತಂದೆ ದೇವರಾಜು ಹೇಳಿದ್ದು ನಾನು ಆಸ್ಪತ್ರೆ ಬೆಡ್ ಬಿಟ್ಟು ಆಚೇನೆ ಹೋಗಿಲ್ಲ ಅಂತಾ.

ಇವತ್ತು ನೋಡಿದರೆ ಆಸ್ಪತ್ರೆ ಹತ್ತಿರ ವಾಕ್ ಮಾಡೋ ಟೈಂ ನಲ್ಲಿ ನಿನ್ನ ಮಗಳು ಸಿಕ್ಕಿದ್ದಾಳೆ ಅಂತಾ ನನ್ನ ಸ್ನೇಹಿತರು ಕಾಲ್ ಮಾಡಿದರು. ಅದಕ್ಕೆ ನಾನು ಅಂದ್ರಹಳ್ಳಿ ಗೇಟ್‌ಗೆ ಹೋಗಿದ್ದೆ. ನಾನು ಮನೆ ಹತ್ರ ಹೋಗಿರ್ಲಿಲ್ಲ ಅಂತಾ ಡಬಲ್ ಸ್ಟೇಟ್ಮೆಂಟ್ ಕೊಡ್ತಿರೋದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ವರ ಗಂಗಾಧ‌ರ, ಜಲಜಾ ಮಾಡಿರೋ ಎಲ್ಲಾ ಆರೋಪಗಳು ಸುಳ್ಳು. ನನ್ನ ಮೇಲೆ ಸುಮ್ಮನೆ ಏನೇನೋ ಆರೋಪ ಮಾಡದ್ದಾಳೆ. ಅವಳ ಹೇಳಿಕೆಗಳಲ್ಲ, ಅವರ ಕುಟುಂಬಸ್ಥರು ಬಲವಂತದಿಂದ ಹೇಳಿಕೆ ನೀಡಿಸಿದ್ದಾರೆ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ.

ನೆಲಮಂಗಲ ತಾಲೂಕಿನ ವೀರಸಾಗರ ನಿವಾಸಿಗಳಾದ ಗಂಗಾಧರ್ ಹಾಗೂ ಜಲಜಾ ಪ್ರೀತಿಸಿ ಮದುವೆಯಾಗಿದ್ದರು. ಮದುವೆ ಬಳಿಕ ಗಂಗಾಧರ್ ಸೋದರಿ ಮನೆಯಲ್ಲಿ ಪತ್ನಿ ಜೊತೆ ವಾಸವಾಗಿದ್ದರು. ಮೇ 25 ರಂದು ತುಮಕೂರಿನ ರಂಗನಾಥಸವಾಮಿ ದೇವಸ್ಥಾನವೊಂದರಲ್ಲಿ ಮದುವೆಯಾಗಿ, 30ನೇ ತಾರೀಕು ವಿವಾಹ ನೋಂದಣಿ ಸಹ ಮಾಡಿಸಿಕೊಂಡಿದ್ದರು. ತದನಂತರ ಎಸ್ ಪಿ ಅವರ ಬಳಿ ತೆರಳಿ ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡಿದ್ದರು.

ಯುವಕ ಗಂಗಾಧರ್, ಸೋದರ ಸಾಕಮ್ಮ ಮತ್ತು ಸಾಕಮ್ಮಳ ಪತಿಯ ಮೇಲೆ ಹಲ್ಲೆ ನಡೆಸಿ ವಧು ಜಲಜಾಳನ್ನು ಬಲವಂತವಾಗಿ ಕರೆದುಕೊಂಡು ಹೋಗಲಾಗಿದೆ ಎಂದು ಮೊದಲು ಹೇಳಲಾಗಿತ್ತು.
ಅಂದು ಮಾಧ್ಯಮಗಳ ಜೊತೆ ಮಾತನಾಡಿದ್ದ ಗಂಗಾಧರ್, ಜಲಜಾ ನನಗೆ ಸೋದರಮಾವನ ಮಗಳು. ಎರಡು ವರ್ಷಗಳಿಂದ ಪ್ರೀತಿ ಮಾಡಿದ್ದೇವು. ಆದ್ರೆ ಆಕೆಗೆ ಮನೆಯಲ್ಲಿ ಬೇರೆ ಕಡೆ ವರ ನೋಡುತ್ತಿದ್ದಾಗ ನಾನೇ ದೂರವಾಗಿದ್ದೆ. ಆದರೆ ಜಲಜಾ ನಾನು ಮದುವೆ ಆಗದೇ ಇದ್ದರೆ ವಿಷ ಕುಡೀತಿನಿ ಎಂದು ಹೇಳಿದ್ದರಿಂದ ಮದುವೆಯಾದೆ ಎಂದು ಗಂಗಾಧರ್ ಹೇಳಿದ್ದರು.

error: Content is protected !!
Scroll to Top
%d bloggers like this: