ಸ್ನಾನ ಮಾಡಲು ನೀರಿಗೆ ಇಳಿಯುವಾಗ ಜೊತೆಯಲ್ಲೇ ಮೂತ್ರಮಾಡುವ ಅಭ್ಯಾಸವಿದೆಯೇ???
ಸಾಮಾನ್ಯವಾಗಿ ಕೆಲಯೊಬ್ಬರಿಗೆ ಸ್ನಾನ ಮಾಡುವಾಗ, ಅಥವಾ ಈಜಾಡಲು ನೀರಿಗೆ ಇಳಿದಿರುವಾಗ ಜೊತೆಗೆ ಮೂತ್ರ ಮಾಡುವ ಅಭ್ಯಾಸ ಇದ್ದೇ ಇರುತ್ತದೆ. ಸ್ನಾನಕ್ಕೂ ಮೊದಲೇ ಕರ್ಮಗಳನ್ನು ಮುಗಿಸಿಕೊಂಡು ಬರುವವರೇ ಹೆಚ್ಚಿದ್ದು, ಕೆಲವರು ಮಾತ್ರ ಈ ಅಭ್ಯಾಸಗಳನ್ನು ಹಚ್ಚಿಕೊಂಡಿರುತ್ತಾರೆ.
ಇಂತಹ ಅಭ್ಯಾಸಗಳು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬಿರುವುದಲ್ಲದೇ, ಹೊಸತೊಂದು ಆರೋಗ್ಯ ಸಮಸ್ಯೆಗೆ ದಾರಿ ಮಾಡಿಕೊಡುತ್ತದೆ ಮತ್ತು ಅಪಾಯವಿದೆ ಎಂದು ಮೂತ್ರಶಾಸ್ತ್ರಜ್ಞ ತೆರೇಸಾ ಇರ್ವಿನ್ ಅಭಿಪ್ರಾಯಪಟ್ಟಿದ್ದಾರೆ.
ತಜ್ಞರು ಹೇಳುವ ಪ್ರಕಾರ ನೀರಿನ ಶಬ್ದ ಮತ್ತು ಮೂತ್ರವಿಸರ್ಜನೆ ಕ್ರಿಯೆಯು ಸುಲಭವಾಗಿ ಮೂತ್ರಕೋಶವನ್ನು ಖಾಲಿ ಮಾಡಲು ಸಹಾಯಮಾಡುತ್ತಾದಾದರೂ ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳೇ ಹೆಚ್ಚಿದೆ.
ಹರಿಯುವ ನೀರಿನ ಶಬ್ದ ಮತ್ತು ಮೂತ್ರ ವಿಸರ್ಜನೆ ನಡುವೆ ಮೆದುಳಿನಲ್ಲಿ ಒಂದು ಸಂಬಂಧ ರಚನೆಗೊಂಡರೆ ಅದೇ ಅಭ್ಯಾಸವಾಗಿಬಿಡುತ್ತದೆ. ಮುಂದೆ ನೀರಿಗೆ ಇಳಿಯುವಾಗ ತನ್ನಿಂತಾನೆ ಅರಿವಿಲ್ಲದಂತೆ ಮೂತ್ರ ವಿಸರ್ಜನೆಯಾಗಬಹುದು, ಇದರಿಂದಾಗಿ ದೇಹದ ಚರ್ಮ ಅಲರ್ಜಿ ಮುಂತಾದ ಆರೋಗ್ಯ ಅಪಾಯಗಳು ಕಟ್ಟಿಟ್ಟ ಬುತ್ತಿ.ಆದ್ದರಿಂದ ಅಂತಹ ಅಭ್ಯಾಸಗಳನ್ನು ಇಂದಿಗೇ ನಿಲ್ಲಿಸಿ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.