ಖ್ಯಾತ ಗಾಯಕ ಕೆಕೆ ಮರಣೋತ್ತರ ವರದಿ ಬಹಿರಂಗ !! | ಪೋಸ್ಟ್ಮಾರ್ಟಂ ರಿಪೋರ್ಟ್ ನಲ್ಲಿ ಏನಿದೆ ಗೊತ್ತಾ !??

ನಿನ್ನೆ ಸಂಗೀತ ಲೋಕದ ರತ್ನವೊಂದು ಕಣ್ಮರೆಯಾಗಿದೆ. ಖ್ಯಾತ ಗಾಯಕ ಕೃಷ್ಣ ಕುಮಾರ್ ಕುನ್ನತ್ ನಿಧನರಾಗಿದ್ದು, ಅವರ ಮರಣೋತ್ತರ ವರದಿ ಈಗ ಬಹಿರಂಗವಾಗಿದೆ.

ಪ್ರಾಥಮಿಕ ವರದಿಯ ಪ್ರಕಾರ ಕೆಕೆ ತೀವ್ರವಾದ ಹೃದಯಸ್ತಂಭನದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಪ್ರಾಥಮಿಕ ವರದಿಯಲ್ಲಿ ಸಾವಿಗೆ ಅಸಹಜ ಕಾರಣಗಳನ್ನು ನೀಡಲಾಗಿಲ್ಲ. ಈ ಹಿಂದೆ ಕೋಲ್ಕತ್ತಾ ಪೊಲೀಸರು ಗಾಯಕನ ಸಾವಿನ ಬಗ್ಗೆ ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಿದ್ದರು. ಪೊಲೀಸ್ ಮೂಲಗಳ ಪ್ರಕಾರ ಅವರ ಮುಖ ಮತ್ತು ತಲೆಗೆ ಗಾಯಗಳಾಗಿತ್ತು. ಆದರೆ ಪ್ರಾಥಮಿಕ ವರದಿಯಲ್ಲಿ ಹೃದಯಾಘಾತದಿಂದ ಕೆಕೆ ನಿಧನರಾಗಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.

ಕೋಲ್ಕತ್ತಾದ ಎಸ್ಎಸ್ ಕೆ ಸರ್ಕಾರಿ ಆಸ್ಪತ್ರೆಯಲ್ಲಿ ಕೆಕೆ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಈವರೆಗೂ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಕೆಕೆಗೆ ತೀವ್ರವಾದ ಲಿವರ್ ಹಾಗೂ ಶ್ವಾಸಕೋಶದ ಸಮಸ್ಯೆ ಇತ್ತು. ಕೆಕೆ ಮರಣೋತ್ತರ ಪರೀಕ್ಷೆ ಒಂದುವರೆ ಗಂಟೆಗೂ ಅಧಿಕ ಸಮಯ ನಡೆದಿದ್ದು, ವಿಡಿಯೋದಲ್ಲಿ ದಾಖಲಾಗಿದೆ.

ರವೀಂದ್ರ ಸದನದಲ್ಲಿ ಕೆಕೆ ಪಾರ್ಥಿವ ಶರೀರಕ್ಕೆ ಸರ್ಕಾರಿ ಗೌರವಗಳನ್ನು ಸಲ್ಲಿಸಲಾಯಿತು. ಸಿಎಂ ಮಮತಾ ಬ್ಯಾನರ್ಜಿ ಅಂತಿಮ ದರ್ಶನ ಪಡೆದರು. ಜೂ.02 ರಂದು ಮುಂಬೈ ನಲ್ಲಿ ಕೆಕೆ ಅಂತ್ಯಕ್ರಿಯೆ ನಡೆಯಲಿದೆ.

Leave A Reply

Your email address will not be published.