Weight Loss: ಜಸ್ಟ್ 90 ದಿನದಲ್ಲೇ 32 ಕೆಜಿ ತೂಕ ಇಳಿಸಿದ ವ್ಯಕ್ತಿ! ಅದೂ ಪ್ರತಿದಿನ ಬರೀ ಇದನ್ನೇ ತಿಂದು!
Weight Loss: ಈಗಿನ ಆಧುನಿಕ ಕಾಲದಲ್ಲಿ ತೂಕ ಹೆಚ್ಚಳ ಸಹಜವಾಗಿ ಆಗುತ್ತೆ. ಆದ್ರೆ ತೂಕ ಕಡಿಮೆ ಮಾಡೋದು ಮಾತ್ರ ದೊಡ್ಡ ಸವಾಲು. ಹೌದು, ಯಾಕಂದ್ರೆ ಕೆಲವರು ಎಷ್ಟೇ ವಿಧಾನಗಳಲ್ಲಿ ಪ್ರಯತ್ನ ಮಾಡಿದರು ಕೇವಲ 5ಕೆ ಜಿ ತೂಕ ಇಳಿಸಬಹುದು. ಅದಕ್ಕಿಂತ ಹೆಚ್ಚು ತೂಕ ಇಳಿಸಲು ಸಾಧ್ಯ ಆಗುವುದಿಲ್ಲ. ಆದ್ರೆ ಅಂಕುರ್ ಛಾಬ್ರಾ ಎಂಬ ವ್ಯಕ್ತಿಯ ವೈಟ್ ಲಾಸ್ ಡಯಟ್ ಕಥೆ ಕೇಳಿದ್ರೆ ನೀವು ಆಶ್ಚರ್ಯ ಪಡುತ್ತೀರಾ ಖಂಡಿತಾ!
ಹೌದು, ಅಂಕುರ್ ಛಾಬ್ರಾ ಅವರು ಅತ್ಯಂತ ಸರಳವಾದ ಮತ್ತು ಸಮರ್ಪಿತವಾದ ಡಯಟ್ ಮತ್ತು ವ್ಯಾಯಾಮವನ್ನು ಅನುಸರಿಸುವ ಮೂಲಕ ಸುಮಾರು 90 ದಿನಗಳಲ್ಲಿ 32 ಕೆಜಿ ತೂಕವನ್ನು ಕಳೆದುಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಅವರು ತಮ್ಮ ಜೀವನದ ಪ್ರತಿ ಕ್ಷಣವನ್ನು ಆನಂದಿಸುತ್ತಿದ್ದಾರೆ.
ಇದಕ್ಕೆಲ್ಲಾ ಕಾರಣ ಏನೆಂದರೆ ಅಂಕುರ್ ಅವರು ತಮ್ಮ ಡಯಟ್‌ನಲ್ಲಿ ಹಣ್ಣುಗಳು, ತರಕಾರಿಗಳು, ನೇರ ಪ್ರೋಟೀನ್, ಧಾನ್ಯಗಳು ಮತ್ತು ಆರೋಗ್ಯಕರ ಕೊಬ್ಬುಗಳನ್ನು ಸೇರಿಸಿಕೊಂಡರು. ಕೇವಲ ಪ್ರೋಟೀನ್ ಭರಿತ ಆಹಾರ ಮತ್ತು ಅವರು ದಿನಕ್ಕೆ ಕನಿಷ್ಠ 3 ರಿಂದ 4 ಗಂಟೆಗಳ ಕಾಲ ತಾಲೀಮನ್ನು ಸಹ ಪ್ರಾರಂಭಿಸಿದರು, ಮತ್ತು ಕೆಲವು ಕಠಿಣ ವ್ಯಾಯಾಮ ಮಾಡುತ್ತಿದ್ದರು.
ಇನ್ನು ಬೆಳಗ್ಗೆ ಸುಮಾರು 5 ರಿಂದ 6 ರವರೆಗೆ, ಖಾಲಿ ಹೊಟ್ಟೆಯಲ್ಲಿ ಚಿಯಾ ಬೀಜಗಳ ನೀರು, ಜೀರಿಗೆ ನೀರು ಅಥವಾ ರಾತ್ರಿ ನೆನೆಸಿಕೊಂಡ ಅಜ್ವೈನ್ ನೀರನ್ನು 5 ನೆನೆಸಿದ ಬಾದಾಮಿಗಳೊಂದಿಗೆ ಸೇವಿಸುತ್ತೇನೆ. ಬೆಳಗಿನ ಉಪಾಹಾರಕ್ಕಾಗಿ, 7 ರಿಂದ 7:30 ನಡುವೆ ಅಂಕುರ್ ಸ್ವಲ್ಪ ಪೋಹಾ, ಮೂರು ಮೊಟ್ಟೆಯ ಬಿಳಿಭಾಗ ಮತ್ತು ಸಕ್ಕರೆ ಇಲ್ಲದ ಕಪ್ಪು ಕಾಫಿಯನ್ನು ಸೇವಿಸುತ್ತಾರಂತೆ. 11 ಗಂಟೆಯ ಸುಮಾರಿಗೆ ಕಾಲೋಚಿತ ಹಣ್ಣುಗಳೊಂದಿಗೆ ಒಂದು ಕಪ್ ಗ್ರೀನ್ ಟೀ ಕುಡಿಯುತ್ತಾರಂತೆ.
ಇನ್ನು ಮಧ್ಯಾಹ್ನ 1 ಗಂಟೆಗೆ ಋತುಮಾನದ ಹಣ್ಣುಗಳು ಮತ್ತು ಮೊಳಕೆ ಕಾಳುಗಳನ್ನು ಸೇವಿಸುತ್ತಾರಂತೆ. ಸಾಂಬಾರ್ ಮತ್ತು ಒಂದು ಲೋಟ ಮಜ್ಜಿಗೆಯೊಂದಿಗೆ ಒಂದು ರಾಗಿ ದೋಸೆ ಅಥವಾ ಯಾವುದೇ ತರಕಾರಿ ಸಲಾಡ್‌ನೊಂದಿಗೆ ಒಂದು ಚಪಾತಿಯನ್ನು ಸಹ ತಿನ್ನುತ್ತಾರಂತೆ.
ಮಧ್ಯಾಹ್ನ ಸುಮಾರು 3 ಗಂಟೆಗೆ, ತೆಂಗಿನ ನೀರು ಅಥವಾ ಹರ್ಬಲ್ ಟೀ ಅನ್ನು ಕುಡಿಯುತ್ತಾರಂತೆ, ಇದಕ್ಕೆ ಪೂರಕವಾಗಿ ಹುರಿದ ಚನಾ, ಅಥವಾ ಮಿಶ್ರ ಬೀಜಗಳನ್ನು ತಿನ್ನುತ್ತಾರಂತೆ. ಸಂಜೆ 5 ರಿಂದ 6 ರವರೆಗೆ, ಐದು ಬೇಯಿಸಿದ ಮೊಟ್ಟೆಯ ಬಿಳಿಭಾಗ ಅಥವಾ 100 ಗ್ರಾಂ ಮಿಶ್ರ ತರಕಾರಿಗಳನ್ನು (ಆಲೂಗಡ್ಡೆ ಹೊರತುಪಡಿಸಿ) ಒಂದು ಚಪಾತಿ ಅಥವಾ ಒಂದು ಮೂಂಗ್, ಓಟ್ಸ್ ಅಥವಾ ಸೂಜಿ ಚಿಲ್ಲಾವನ್ನು ಸೇವಿಸುತ್ತಾರಂತೆ ಅಂಕುರ್.
ಸಂಜೆ ಊಟದ ನಂತರ ಸರಿ ಸುಮಾರು ಒಂದೂವರೆ ಗಂಟೆಗಳ ನಂತರ, ಒಂದು ಕಪ್ ಗ್ರೀನ್ ಟೀ ಅಥವಾ ತುಳಸಿ ಬೀಜಗಳ ರೂಪದಲ್ಲಿ ರಾತ್ರಿ ಪಾನೀಯವನ್ನು ಸೇವಿಸುತ್ತಾರಂತೆ. ಅಷ್ಟೇ ಅಲ್ಲದೆ, ಸದಾ ಕಾಲ ಹೈಡ್ರೇಟೆಡ್ ಆಗಿರಲು, ಪ್ರತಿದಿನ ಕನಿಷ್ಠ 3 ಲೀಟರ್ ನೀರನ್ನು ಕುಡಿಯುತ್ತಾರಂತೆ ಮತ್ತು ದಿನಕ್ಕೆ ಎರಡು ಬಾರಿ ಸಪ್ಪೆ ಕಪ್ಪು ಕಾಫಿಯನ್ನು ಕುಡಿಯುತ್ತಾರೆ.