ಸರ್ಕಾರಿ ಶಾಲೆಯ ಮೇಲ್ಚಾವಣಿ ಬೀಳುವ ಭಯ, ಆತಂಕದಲ್ಲಿ ಮಕ್ಕಳು ಶಿಕ್ಷಕರು

ಕೊಟ್ಟೂರು: ಮಕ್ಕಳಿಗೆ ಶಿಕ್ಷಣದ ಜೊತೆಯಲ್ಲಿ ಸುತ್ತಮುತ್ತಲಿನ ವಾತಾವರಣವು ಅಮೂಲ್ಯವಾದುದ್ದು, ಇಂತಹ ಸಂದರ್ಭದಲ್ಲಿ ಕೊಠಡಿಗಳು ಶಿಥಲೀಕರಣಗೊಂಡು ಬೀಳುವ ಹಂತದಲ್ಲಿದೆ! ಇಂತಹ ವಾತಾವರಣದಲ್ಲಿ ಮಕ್ಕಳು ಕಲಿಯುವಂತಹ ಪರಿಸ್ಥಿತಿ ಉಂಟಾಗಿದೆ!


Ad Widget
   ಕೊಟ್ಟೂರು ತಾಲೂಕಿನ ನಾಗರಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಣನಹಳ್ಳಿಯಲ್ಲಿ ಗ್ರಾಮದ ಸರ್ಕಾರಿ ಶಾಲೆಯು ೧ರಿಂದ ೫ನೇ ತರಗತಿಯವರೆಗೆ ಇದ್ದು, ಸುಮಾರು ೨೦ರಿಂದ ೨೫ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.ಈ ಶಾಲೆಯಲ್ಲಿ ೨ ಕೊಠಡಿಗಳು ಇದ್ದು. ಒಂದು ಕೊಠಡಿಯ ಕಟ್ಟಡದ ಮೇಲ್ಚಾವಣಿಯ ತೇಪೆ ಉದುರಿ, ಬೀಳುವ ಹಂತದಲ್ಲಿದೆ.ಮಳೆ ಬಂದರAತೂ ಈ ಕಟ್ಟಡದ ಕಥೆ ಹೇಳತೀರದು, ಮಳೆ ಪ್ರಾರಂಭವಾದರೆ ಸಾಕು ಮಕ್ಕಳಿಗೂ ಮತ್ತು ಶಿಕ್ಷಕರಿಗೂ ಆತಂಕ ಎದುರಾಗುತ್ತಿದೆ. ಗ್ರಾಮದ ಚರಂಡಿ ನೀರು ಶಾಲೆಯ ಕಟ್ಟಡದ ಒಳಭಾಗದಲ್ಲಿ ಹರಿಯುತ್ತಿದ್ದು ಇದರಿಂದ ಶಾಲೆ ಗೋಡೆಗಳು ಬಿರುಕು ಉಂಟಾಗಿದೆ. ಚರಂಡಿಯ ನೀರು ಶಾಲೆಯ ಹಿಂಭಾಗದಲ್ಲಿ ಶೇಖರಣೆಯಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ದುರ್ವಾಸನೆಯನ್ನು  ಎದುರಿಸುವಂತಹ ಸಮಯ ಬಂದAತಾಗಿದೆ. ಹಾಗೂ ಶೌಚಾಲಯದ ಕೊರತೆಯನ್ನು ಸಹ ನೀಗಿಸುವಂತಹ ಪರಿಸ್ಥಿತಿ ಈ ಮಕ್ಕಳಿಗೆ ಬಂದು ಒದಗಿಸಿದಂತಾಗಿದೆ.


   ಅಡುಗೆ ಕೋಣೆಯು ಶಾಲೆಯ ಕಾಂಪೌAಡಿನಿAದ ಹೊರಗಿದ್ದು ದಾರಿಯಲ್ಲಿ ಹೋಗುವ ವಾಹನಗಳಿಂದ ದೂಳು ಹೆಚ್ಚಾಗಿ ಬರುತ್ತಿದೆ. ಇದಕ್ಕೆ ಸಂಬAಧಿಸಿದ ಅಧಿಕಾರಿಗಳು ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಹೊಸ ಕಟ್ಟಡಗಳು ನಿರ್ಮಿಸಿಕೊಡುವಂತೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ, ಗ್ರಾಮಸ್ಥರ ಅಳಲಾಗಿದೆ
error: Content is protected !!
Scroll to Top
%d bloggers like this: