ಬೆಳ್ತಂಗಡಿ: ಮನೆಯ ಬಾವಿಯೊಳಗಿನ ಗುಹೆಯಲ್ಲಿ ಅವಿತುಕೂತ ಚಿರತೆ ಪತ್ತೆ
ಬೆಳ್ತಂಗಡಿ : ಇತ್ತೀಚೆಗೆ ಕಾಡು ಪ್ರಾಣಿಗಳು ನಾಡಿಗೆ ಬರುವುದು ಹೆಚ್ಚಾಗಿದ್ದು, ಜನರಿಗೆ ಭಯದ ವಾತಾವರಣ ಉಂಟಾಗಿದೆ. ಇದೀಗ ಚಿರತೆಯೊಂದು ತಾಲೂಕಿನ ನಾವರ ಗ್ರಾಮದ ಮನೆಯೊಂದರ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.
ನಾವರ ಗ್ರಾಮದ ಜಾಲಗುತ್ತು ಮನೆಯ ವಸಂತ ಪೂಜಾರಿಯವರ ಮನೆಯ ಬಾವಿಯಲ್ಲಿ ಚಿರತೆ ಪತ್ತೆಯಾಗಿದ್ದು, ಕಳೆದ ರಾತ್ರಿ ಅಂದಾಜು 12 ಗಂಟೆಯ ರಾತ್ರಿ ಬಾವಿಗೆ ಬಿದ್ದಿದೆ ಎಂದು ಮನೆಯವರು ಮಾಹಿತಿ ನೀಡಿದ್ದಾರೆ.
ಕಾಡಿನಿಂದ ನಾಡಿಗೆ ಬಂದ ಚಿರತೆ ಬಿದ್ದ ಬಾವಿ ದೊಡ್ಡದಾಗಿದ್ದು, ಬಾವಿಯೊಳಗಿರುವ ಗುಹೆಯೊಳಗೆ ಅವಿತು ಕೂತಿದೆ. ಮಾಹಿತಿ ತಿಳಿದ ವನ್ಯಜೀವಿ ಸಂರಕ್ಷಣಾ ವಿಭಾಗ, ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ.
ವೇಣೂರು ವಲಯ ಅರಣ್ಯ ಅಧಿಕಾರಿ ಮಹಿಮ್ ಜನ್ನು ಉಪ ಅರಣ್ಯಾಧಿಕಾರಿ ಸುರೇಶ್ ಗೌಡ, ಕಾರ್ಕಳ ವಲಯ ಅರಣ್ಯ ಅಧಿಕಾರಿ ಜಿ.ಡಿ ದಿನೇಶ್, ಅರಣ್ಯಾಧಿಕಾರಿ ರಾಘವೇಂದ್ರ ಶೆಟ್ಟಿ, ಆರಕ್ಷಕ ಮಾಂತೇಶ್ ಗೋಡಿ, ಅರಣ್ಯ ಇಲಾಖೆಯ ಬಾಬು, ಪ್ರಕಾಶ್ ಪೂಜಾರಿ, ಶಮೀಮ್, ವಿತೇಶ್,ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗ, ಸುಕ್ಕೇರಿ ಪಂಚಾಯತ್ ಸದಸ್ಯರಾದ ರವಿ ಪೂಜಾರಿ ಹಾರಡೈ ಶುಭಕರ ಪೂಜಾರಿ, ಊರವರಾದ ಯೋಗೀಶ್ ಅಲೆಕ್ಕಿ,ರಾಜು ಪೂಜಾರಿ ಪೆರಡಾಲು ರವಿ ಕೋಟ್ಯಾನ್ ಜಾಲ ಹಾಗೂ ಊರವರು ಸ್ಥಳಕ್ಕೆ ಆಗಮಿಸಿದ್ದಾರೆ.