ರಣಬೇಟೆಗಾರ ಹದ್ದಿಗೆ ಪೈಪೋಟಿ ನೀಡಿದ ಸ್ನೇಕ್ !! | ತನ್ನ ಉಗುರಿನಿಂದ ಹಿಡಿದಿಟ್ಟು ಕೊಕ್ಕಿನಿಂದ ಕುಕ್ಕಿದರೂ ಕ್ಯಾರೇ ಅನ್ನದೆ ಬಾಯಿ ತೆರೆದು ದಾಳಿ ಮಾಡಿದ ಹಾವು

ಹದ್ದು ರಣಬೇಟೆಗಾರ ಪಕ್ಷಿ. ತೆಳುವಾದ ರೆಕ್ಕೆಗಳು ಅದು ಅತೀ ವೇಗದಲ್ಲಿ ಹಾರುವುದಕ್ಕೆ ಸಹಾಯ ಮಾಡುತ್ತವೆ. ಸಮೀಕ್ಷೆಯ ಪ್ರಕಾರ, ಹದ್ದು ವಿಶ್ವದ 10 ವೇಗದ ಪ್ರಾಣಿಗಳ ವರ್ಗಕ್ಕೆ ಸೇರಿದೆ. ಅದು ಗಂಟೆಗೆ 320 ಕಿ.ಮೀ ಗಿಂತ ಹೆಚ್ಚು ವೇಗದಲ್ಲಿ ಹಾರಬಲ್ಲದು. ಹದ್ದು ಆಕಾಶದಲ್ಲಿ ಮಾತ್ರವಲ್ಲ, ಭೂಮಿಯ ಮೇಲಿನ ಅತ್ಯಂತ ವೇಗದ ಪಕ್ಷಿಯಾಗಿದೆ.

ಆಕಾಶದಲ್ಲಿ ಹಾರುತ್ತಿರುವಾಗಲೇ ಹದ್ದು ತನ್ನ ಬೇಟೆಯನ್ನು ಗುರಿಯಾಗಿಸಿಕೊಳ್ಳುತ್ತದೆ. ಅತಿ ಸೂಕ್ಷ್ಮ ದೃಷ್ಟಿಯನ್ನು ಹೊಂದಿರುವ ಹದ್ದು, ಒಮ್ಮೆ ಗುರಿಯಿಟ್ಟಿತೆಂದರೆ ಬೇಟೆಯ ಕಥೆ ಮುಗಿಯಿತು ಎಂದೇ ಅರ್ಥ. ಸಾವಿರಾರು ಮೀಟರ್ ಎತ್ತರದಿಂದಲೇ ತನ್ನ ಬೇಟೆಯನ್ನು ಗುರುತಿಸುವ ಈ ಪಕ್ಷಿ, ಬೇಟೆಗೆ ತಪ್ಪಿಸಿಕೊಳ್ಳುವ ಕಿಂಚಿತ್ತೂ ಅವಕಾಶ ನೀಡುವುದಿಲ್ಲ. ಕ್ಷಣ ಮಾತ್ರದಲ್ಲಿ ಹಾರಿ ಬಂದು ಬೇಟೆ ಮೇಲೆ ಮಾರಣಾಂತಿಕ ದಾಳಿ ನಡೆಸಿ ಬಿಡುತ್ತದೆ.

ಇತ್ತೀಚಿನ ದಿನಗಳಲ್ಲಿ ಹದ್ದಿನ ಒಂದು ವೀಡಿಯೋ ವೈರಲ್ ಆಗುತ್ತಿದೆ. ಇದರಲ್ಲಿ ಅದು ಅಪಾಯಕಾರಿ ಹಾವನ್ನು ಬೇಟೆಯಾಡುತ್ತಿರುವುದನ್ನು ಕಾಣಬಹುದು. ಹದ್ದು ತನ್ನ ಮೊನಚಾದ ಉಗುರುಗಳಿಂದ ಹಾವನ್ನು ಒತ್ತಿ ಹಿಡಿದು ತನ್ನ ಕೊಕ್ಕಿನಿಂದ ಕುಕ್ಕುತ್ತಿರುವುದನ್ನು ಕಾಣಬಹುದು. ಅಪಾಯಕಾರಿ ಹಾವನ್ನು ಹದ್ದು ತನ್ನ ಉಗುರುಗಳಿಂದ ಹಿಡಿದಿತಟ್ಟಿರುವುದನ್ನು ಇಲ್ಲಿ ಕಾಣಬಹುದು. ಇಷ್ಟಿದ್ದರೂ ಹಾವು ಕೂಡಾ ತನ್ನ ಬಾಯಿ ತೆರೆದು ಹದ್ದಿನ ಮೇಲೆ ದಾಳಿ ಮಾಡಲು ಯತ್ನಿಸುತ್ತದೆ. ಈ ದೃಶ್ಯ ನಿಜಕ್ಕೂ ಭಯಾನಕವಾಗಿದೆ.

ನೇಚರ್_ಓಕೆ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಹದ್ದಿನ ಉಗುರಿಗೆ ಸಿಲುಕಿ ಹಾವು ನರಳುತ್ತಿದ್ದು, ಹದ್ದು ನಿರಂತರವಾಗಿ ದಾಳಿ ಮಾಡುವುದನ್ನು ವೀಡಿಯೋದಲ್ಲಿ ಕಾಣಬಹುದು. ಹಾವು ಕೊನೆಯುಸಿರಿನವರೆಗೂ ಹದ್ದಿನ ಜೊತೆ ಹೋರಾಡುತ್ತದೆ. ಈ ವೀಡಿಯೋ ಇದೀಗ ವೈರಲ್ ಆಗಿದ್ದು, ಇದುವರೆಗೆ ಸಾವಿರಾರು ಮಂದಿ ವೀಕ್ಷಿಸಿದ್ದಾರೆ.

https://www.instagram.com/reel/CeN0s3psroY/?igshid=YmMyMTA2M2Y=
Leave A Reply

Your email address will not be published.