ರಾಜಧಾನಿಯ ಫೈವ್ ಸ್ಟಾರ್ ಹೋಟೆಲ್ ನಲ್ಲಿ ನಾಯಿಯೇ ಹ್ಯಾಪಿನೆಸ್ ಆಫೀಸರ್ !! | ತನ್ನ ದುಡಿಮೆಗೆ ಸಂಬಳ ಕೂಡ ಪಡೆಯುವ ಈ ಶ್ವಾನದ ಸ್ಟೋರಿ ಹೇಗಿದೆ ನೋಡಿ

ಅದೆಷ್ಟೋ ಜನ ‘ನಾಯಿ’ಯನ್ನು ತಮ್ಮ ಕುಟುಂಬದ ಸದಸ್ಯರಂತೆ ಕಾಣುತ್ತಾರೆ. ಅಷ್ಟು ಪ್ರೀತಿ, ಮಮಕಾರ. ಆದ್ರೆ ಕೆಲವೊಂದಷ್ಟು ಜನ ನಾಯಿಯನ್ನು ಕೀಳಾಗಿ ಕಾಣುತ್ತಾರೆ. ಆದ್ರೆ ನಾನು ಯಾರಿಗೂ ಕಮ್ಮಿ ಇಲ್ಲ ಎಂಬುದನ್ನು ಸಾಧಿಸಿ ತೋರಿಸಿದೆ ಈ ನಾಯಿ.

ಹೌದು. ನಾಯಿಯೂ ನಮ್ಮ ನಿಮ್ಮಂತೆ ದುಡಿದು, ನಮಗಿಂತ ಹೆಚ್ಚಿನ ಸಂಬಳ ಪಡೆಯಬಹುದು ಎನ್ನುವುದನ್ನು ನೀವೂ ಊಹಿಸಬಹುದೇ!?. ಆದ್ರೆ ಬೆಂಗಳೂರಿನಲ್ಲಿ ನಾಯಿಯೊಂದು ಪ್ರೂವ್ ಮಾಡಿದ್ದು, ಫೈವ್ ಸ್ಟಾರ್ ಹೋಟೆಲ್‌ನಲ್ಲಿ ನಾಯಿಗೆ ಕೆಲಸ!

ರಾಜ್ಯ ರಾಜಧಾನಿ ಬೆಂಗಳೂರಿನ ಪಂಚತಾರಾ ಹೋಟೆಲ್‌ಗಳಲ್ಲಿ ಹೋಟೆಲ್‌ ಲಲಿತ್ ಅಶೋಕ್‌ಗೆ ಅಗ್ರಸ್ಥಾನ. ವಿದೇಶಿಗರ, ಗಣ್ಯ ವ್ಯಕ್ತಿಗಳ ನೆಚ್ಚಿನ ಹೋಟೆಲ್‌ ಆದ ಲಲಿತ್ ಅಶೋಕ್‌ನಲ್ಲಿ ಬರ್ನಿ ಎಂಬ ಹೆಸರಿನ ನಾಯಿಯೊಂದು ಹ್ಯಾಪಿನೆಸ್ ಆಫೀಸರ್ ಆಗಿ ಕೆಲಸ ಮಾಡುತ್ತಿದೆ.

ಹೋಟೆಲ್‌ನಲ್ಲಿ ಬರ್ನಿ ನಡವಳಿಕೆ ತುಂಬಾ ಮುದ್ದಾಗಿದ್ದು, ಅತಿಥಿಗಳು ಮತ್ತು ಉದ್ಯೋಗಿಗಳನ್ನು ಸಂತೋಷವಾಗಿ ಇರಿಸುವ ಹೊಣೆ ಬರ್ನಿಯದ್ದು. ಹೋಟೆಲ್‌ಗೆ ಬಂದವರನ್ನು ನಗಿಸುವುದು ಮಾತ್ರವಲ್ಲದೆ ಅವರೊಂದಿಗೆ ಆತ್ಮೀಯ ಸಂಪರ್ಕ ಬೆಳೆಸಿಕೊಂಡಿದೆ. ಹೋಟೆಲ್‌ಗೆ ಬರುವ ಗ್ರಾಹಕರು ಬರ್ನಿಯೊಂದಿಗೆ ಸಮಯ ಕಳೆಯಲು ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಅತಿಥಿಗಳಿಗೆ ತೊಂದರೆ ಕೊಡದೆ ಅವರೊಂದಿಗೆ ಪ್ರೀತಿಯಿಂದ ವರ್ತಿಸುತ್ತದೆ ಅಂತಾರೆ ಹೋಟೆಲ್ ಸಿಬ್ಬಂದಿ.

ಅಂದಹಾಗೆ ಈ ಬರ್ನಿ ಪುಕ್ಕಟ್ಟೆ ಏನೂ ಹೋಟೆಲ್‌ನಲ್ಲಿ ಹ್ಯಾಪಿನೆಲ್ ಆಫೀಸರ್ ಆಗಿ ಕೆಲಸ ಮಾಡುವುದಿಲ್ಲ. ಬದಲಾಗಿ ಅದರ ಕೆಲಸಕ್ಕೆ ಸಮನಾದ ಅತ್ಯುತ್ತಮ ವೇತನವನ್ನು ಹೋಟೆಲ್ ಆಡಳಿತ ಮಂಡಳಿ ನೀಡುತ್ತಿದೆ. ಇನ್ನೊಂದು ವಿಚಾರ ಅಂದ್ರೆ ಈ ನಾಯಿ ಪ್ರತಿ ದಿನ ಮೀಟಿಂಗ್ ಕೂಡ ಅಡೆಂಟ್ ಆಗುತ್ತದೆ. ಅಲ್ಲಿ ಏನೇನು ಮಾಡಬೇಕು ಅಂತ ಹೇಳಿ ಕೊಡುವ ಸೂಚನೆಗಳನ್ನು ಚಾಚೂ ತಪ್ಪದೇ ಪಾಲಿಸುತ್ತಿದೆಯಂತೆ.

ಇಷ್ಟೆಲ್ಲಾ ಕೆಲಸ ಮಾಡುವ ಬರ್ನಿ ನೀವೂ ಅಂದುಕೊಂಡ ರೀತಿ ಬ್ರೀಡ್ ನಾಯಿಯಲ್ಲ. ಇದು ಮೊದಲು ಬೀದಿ ನಾಯಿಯಾಗಿತ್ತಂದೆ. ಅಷ್ಟಕ್ಕೂ ಈ ಬರ್ನಿಯನ್ನು ಹೊಟೇಲ್‌ನವರು ಸಾಕಿದ್ದಲ್ಲ, ಬದಲಿಗೆ ರಸ್ತೆಯಲ್ಲಿ ಓಡಾಡಿಕೊಂಡಿದ್ದ ಬರ್ನಿ ದಿಕ್ಕು ತೋಚದೆ ಹೋಟೆಲ್ ಲಲಿತ್ ಅಶೋಕ್ ಮುಂದೆ ಬರುತ್ತಿತ್ತಂತೆ. ಆದರೆ ಈ ಹೋಟೆಲ್‌ ಸಿಬ್ಬಂದಿಗೆ ಈ ನಾಯಿ ನೋಡಿ ಏನನ್ನಿಸಿತೋ ಏನೋ, ಒಳಗೆ ಕರೆದು ಪ್ರೀತಿಯಿಂದ ಆರೈಕೆ ಮಾಡಿದ್ದಾರೆ. ಮೊದಲು ಬಂದಾಗ ಮೈತುಂಬಾ ಗಾಯಗೊಂಡಿದ್ದ ನಾಯಿ, ಅಪರಿಚಿತರನ್ನು ಕಂಡು ಹೆದರುತ್ತಾ ಇತ್ತಂತೆ. ಇದೀಗ ಹೋಟೆಲ್ ಸಿಬ್ಬಂದಿಯೇ ಆರೈಕೆ ಮಾಡಿ, ಅದನ್ನು ಸಾಕಿ ಕೆಲಸದ ಜೊತೆಗೆ ಸಂಬಳ ಕೂಡ ನೀಡುತ್ತಿದ್ದಾರೆ.

ಒಟ್ಟಾರೆ ಹ್ಯಾಪಿನೆಸ್ ಆಫೀಸರ್ ಬರ್ನಿ ಅಂದ್ರೆ ಫುಲ್ ಫೇಮಸ್. ಸಾಮಾಜಿಕ ಜಾಲತಾಣಗಳಲ್ಲಿ ಬರ್ನಿ ವಿಡಿಯೋ ಶೇರ್ ಆಗುತ್ತಿದ್ದು, ಇದನ್ನು ನೋಡಿದ ನೆಟ್ಟಿಗರು ಖುಷಿಯಿಂದಲೇ ಕಾಮೆಂಟ್ ಮಾಡುತ್ತಿದ್ದಾರೆ.

Leave A Reply

Your email address will not be published.