ಹಾಡಹಗಲೇ ಶಾಲೆಗೆ ನುಗ್ಗಿ ಗುಂಡಿಟ್ಟು ಹಿಂದೂ ಶಿಕ್ಷಕಿಯ ಹತ್ಯೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಅಲ್ಪಸಂಖ್ಯಾತರ ಮೇಲೆ ಉದ್ದೇಶಿತ ದಾಳಿಯ ಮತ್ತೊಂದು ಘಟನೆಯಲ್ಲಿ, ಕಾಶ್ಮೀರ ಪ್ರದೇಶದ ಕುಲ್ಗಾಮ್ ಜಿಲ್ಲೆಯಲ್ಲಿ ಭಯೋತ್ಪಾದಕರು ಹಿಂದೂ ಶಾಲೆಯ ಶಿಕ್ಷಕಿಯ ಮೇಲೆ ಗುಂಡು ಹಾರಿಸಿದ್ದಾರೆ.

ಹಾಡಹಗಲೇ ಹೈಸ್ಕೂಲ್ ಗೆ ನುಗ್ಗಿ ಶಿಕ್ಷಕಿಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆಯೊಂದು ಜಮ್ಮು ಕಾಶ್ಮೀರದ ಗೋಪಾಲಪೋರಾದಲ್ಲಿ ನಡೆದಿದೆ.

ಜಮ್ಮು ಪ್ರದೇಶದ ಸಾಂಬಾದ 36 ವರ್ಷದ ರಜನಿ ಬಾಲಾ ಅವರು ಶಿಕ್ಷಕಿಯಾಗಿ ನೇಮಕಗೊಂಡಿದ್ದ ಕುಲ್ಗಾಮ್‌ನ ಗೋಪಾಲ್‌ಪೋರಾ ಪ್ರದೇಶದಲ್ಲಿ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದರೂ, ಆಕೆ ಸಾವನ್ನಪ್ಪಿದ್ದಾಳೆ. ಈ ಭೀಕರ ಅಪರಾಧದಲ್ಲಿ ಭಾಗಿಯಾದ ಉಗ್ರರನ್ನು ಶೀಘ್ರವೇ ಬಂಧಿಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Leave A Reply