ಕೊಳದಲ್ಲಿ ಅಪಾಯಕಾರಿ ಮೊಸಳೆಯೊಂದಿಗೆ ವ್ಯಕ್ತಿಯ ರೊಮ್ಯಾಂಟಿಕ್ ಡ್ಯಾನ್ಸ್ !!- ವೀಡಿಯೋ ವೈರಲ್

ಮೊಸಳೆ ಅತ್ಯಂತ ಅಪಾಯಕಾರಿ ಪ್ರಾಣಿ. ಅದು ಹೇಗೆ, ಎಲ್ಲಿಂದ, ಯಾವ ರೀತಿಯಲ್ಲಿ ಕ್ಷಣಮಾತ್ರದಲ್ಲಿ ಅಟ್ಯಾಕ್ ಮಾಡುತ್ತದೆ ಎಂಬುದು ಗೊತ್ತೇ ಆಗುವುದಿಲ್ಲ. ಈಗ ಇಂತಹ ಅಪಾಯಕಾರಿ ಪ್ರಾಣಿಯ ವೀಡಿಯೋ ವೈರಲ್ ಆಗಿದೆ. ಮನುಷ್ಯ ಹಾಗೂ ಮೊಸಳೆಯ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಕೊಳದ ಮಧ್ಯೆ ನಿಂತಿರುವ ವ್ಯಕ್ತಿ ಬಳಿಗೆ ಒಮ್ಮೆಲೆ ಅಪಾಯಕಾರಿ ಮೊಸಳೆ ಬಂದಾಗ ಏನಾಗಬಹುದು? ಬೃಹತ್ ಮೊಸಳೆ ಆತನ ಸಮೀಪಕ್ಕೆ ಬಂದಾಗ ವ್ಯಕ್ತಿಯ ಮೇಲೆ ದಾಳಿ ಮಾಡಿರಬಹುದು ಎಂದು ನೀವು ಯೋಚಿಸುತ್ತಿದ್ದರೆ… ಸ್ವಲ್ಪ ತಡೆಯಿರಿ… ವಾಸ್ತವವಾಗಿ, ಮೊಸಳೆಯು ವ್ಯಕ್ತಿಯ ಮೇಲೆ ದಾಳಿ ಮಾಡಲಿಲ್ಲ, ಬದಲಿಗೆ ಆ ವ್ಯಕ್ತಿಯೊಂದಿಗೆ ನೃತ್ಯ ಮಾಡಿದೆ. ಹೌದು. ಕೆಲವೇ ಸೆಕೆಂಡುಗಳ ಈ ವೈರಲ್ ವೀಡಿಯೋದಲ್ಲಿ ಕೊಳದ ಮಧ್ಯೆ ನಿಂತಿರುವ ವ್ಯಕ್ತಿಯೋರ್ವ ಅಪಾಯಕಾರಿ ಮೊಸಳೆ ಜೊತೆ ಡಾನ್ಸ್ ಮಾಡುತ್ತಿರುವುದನ್ನು ಕಾಣಬಹುದು.

ಆಘಾತಕಾರಿ ವೀಡಿಯೋದಲ್ಲಿ, ವ್ಯಕ್ತಿ ತನ್ನ ಗೆಳತಿಯೊಂದಿಗೆ ಡಾನ್ಸ್ ಮಾಡುವ ರೀತಿಯಲ್ಲಿ ನೀರಿನಲ್ಲಿ ಮೊಸಳೆಯೊಂದಿಗೆ ನೃತ್ಯ ಮಾಡುವುದನ್ನು ಕಾಣಬಹುದು. ಮೊಸಳೆ ಕೂಡ ಅವನಿಗೆ ಹಾನಿ ಮಾಡುವುದಿಲ್ಲ, ಆದರೆ ಅವನ ತಮಾಷೆಯ ವರ್ತನೆಗಳನ್ನು ಆನಂದಿಸುತ್ತದೆ ಎಂಬುದು ವಿಶಿಷ್ಟವಾಗಿದೆ. ವೀಡಿಯೊದಲ್ಲಿನ ಈ ದೃಶ್ಯವು ಎಂತಹವರಿಗೂ ಅಚ್ಚರಿ ಮೂಡಿಸದೇ ಇರದು.

ಮೊಸಳೆ ಹಾಗೂ ಮನುಷ್ಯನ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ವಂಡರ್ಡಿಕ್ಸ್ ಹೆಸರಿನ ಪುಟದಲ್ಲಿ ಅಪ್‌ಲೋಡ್ ಮಾಡಲಾಗಿದೆ. ನೆಟಿಜನ್‌ಗಳು ಕೂಡ ವೀಡಿಯೋಗೆ ತೀವ್ರ ಕಮೆಂಟ್ ಮಾಡುತ್ತಿದ್ದಾರೆ.

https://www.instagram.com/reel/CbgmYO5qpBU/?igshid=YmMyMTA2M2Y=

Leave A Reply

Your email address will not be published.