ಕಳಪೆ ಕಾಮಗಾರಿಯ ಕಾರಣ, ಆಸ್ಪತ್ರೆ ಮೇಲ್ಛಾವಣಿ ಕುಸಿತ | ಸ್ವಲ್ಪದರಲ್ಲೇ ತಪ್ಪಿದ ಘೋರ ದುರಂತ!!!

ಬೆಂಗಳೂರು: ಸೆಂಟ್ ಜಾನ್ಸ್ ಆಸ್ಪತ್ರೆಯೊಂದರ ಕಟ್ಟಡವೊಂದರಲ್ಲಿ ಅತಿಯಾದ ಭಾರದಿಂದಾಗಿ ಮೇಲ್ಚಾವಣಿ ಕುಸಿತಗೊಂಡು ಸ್ವಲ್ಪದರಲ್ಲೇ ಘೋರ ದುರಂತ ತಪ್ಪಿದ್ದು, ಕುಸಿತದಿಂದ ನಾಲ್ವರು ಕಾರ್ಮಿಕರಿಗೆ ಗಾಯವಾಗಿರೋದಾಗಿ ತಿಳಿದು ಬಂದಿದೆ.

ಮೇಲ್ಚಾವಣಿ ಕುಸಿತದ ಸಂದರ್ಭದಲ್ಲಿ ಕಟ್ಟಡದ ಅಡಿಯಲ್ಲಿ ನಾಲ್ವರು ಕಾರ್ಮಿಕರು ಸಿಲುಕಿದ್ದು, ಬಳಿಕ ಅವರನ್ನು ರಕ್ಷಣಾ ಸಿಬ್ಬಂದಿಗಳು ರಕ್ಷಿಸಿದ್ದಾರೆ. ಮೋಹಿಯುದ್ದೀನ್, ಚಾಂದ್ ಪಾಷಾ, ರಫೀ ಸಾಬ್ ಹಾಗೂ ಬಸವರಾಜ್ ಎಂಬ ಕಾರ್ಮಿಕರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗಿದೆ.

ಮೇಲ್ಛಾವಣಿ ಕುಸಿತಕ್ಕೆ ಸಣ್ಣದೊಂದು ಪಿಲರ್ ಮೇಲೆ ಗ್ರಿಲ್ ಮಾಡಿ, ಅದರ ಮೇಲೆ ಛಾವಣಿ ನಿರ್ಮಾಣ ಮಾಡಿದ್ದೇ ಕಾರಣ ಎನ್ನಲಾಗಿದೆ. ಕಳಪೆ ಕಾಮಗಾರಿಯ ಕಾರಣದಿಂದಾಗಿ ಮೇಲ್ಛಾವಣಿ ಕುಸಿತಗೊಂಡಿದೆ ಎನ್ನಲಾಗಿದೆ.

Leave A Reply