ವೇದಿಕೆ ಮೇಲೆ ಹಾಡುತ್ತಿರುವಾಗಲೇ ಕುಸಿದುಬಿದ್ದು ಖ್ಯಾತ ಗಾಯಕ ಸಾವು !!

ವೇದಿಕೆ ಮೇಲೆ ಹಾಡು ಹೇಳುತ್ತಿರುವಾಗಲೇ ಕುಸಿದು ಬಿದ್ದು ಮಲಯಾಳಂ ಗಾಯಕ ಎಡವ ಬಶೀರ್ ದುರಂತ ಸಾವನ್ನಪ್ಪಿದ್ದಾರೆ.


Ad Widget

ಕೇರಳದಲ್ಲಿ ನಡೆಯುವ ಆರ್ಕೆಸ್ಟ್ರಾಗಳಲ್ಲಿ ಹಾಡು ಹಾಡುವ ಮೂಲಕ ಎಡವ ಬಶೀರ್(47) ಹೆಚ್ಚು ಜನಪ್ರಿಯರಾಗಿದ್ದಾರೆ. ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಬ್ಲೂ ಡೈಮಂಡ್ಸ್ ಆರ್ಕೆಸ್ಟ್ರಾದ ಗೋಲ್ಡನ್ ಜುಬಿಲಿ ಸಮಾರಂಭ ಆಯೋಜಿಸಲಾಗಿತ್ತು. ಈ ವೇಳೆ 1978ರಲ್ಲಿ ಬಿಡುಗಡೆಯಾದ ಹಿಂದಿ ಚಲನಚಿತ್ರ ಟೂಟ್ ಟಾಯ್ಸ್‍ನ ಪ್ರಸಿದ್ಧ ಭಾರತೀಯ ಗಾಯಕ ಕೆಜೆ ಯೇಸುದಾಸ್ ಅವರ ಮಾನ ಹೋ ತುಮ್ ಬೇಹದ್ ಹಸೀನ್… ಹಾಡನ್ನು ಹಾಡುವಾಗ ಎಡವ ಬಶೀರ್ ಕುಸಿದುಬಿದ್ದಿದ್ದಾರೆ.

ಹಾಡು ಹಾಡುತ್ತಾ ವೇದಿಕೆ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸಿದ ಅವರು ಇದ್ದಕ್ಕಿದಂತೆ ಕೆಳಗೆ ಕುಸಿದು ಬಿದ್ದಿದ್ದಾರೆ. ಜೊತೆಗೆ ಅವರ ಕೈಯಲ್ಲಿದ್ದ ಮೈಕ್ ಕೂಡ ಕೆಳಗೆ ಬಿದ್ದಿದೆ. ನಂತರ ಕೂಡಲೇ ವೇದಿಕೆಯತ್ತ ಜನರು ಆಗಮಿಸಿ, ಬಶೀರ್ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.


Ad Widget
error: Content is protected !!
Scroll to Top
%d bloggers like this: