ಮಂಗಳೂರು : ಪಣಂಬೂರು ಬೀಚಿನಲ್ಲಿ ಈಜಾಡುತ್ತಿದ್ದ ಇಬ್ಬರು ಸಮುದ್ರಪಾಲು !

ಮಂಗಳೂರು : ಪಣಂಬೂರು ಬೀಚ್ ನಲ್ಲಿ ಸಮುದ್ರದಲ್ಲಿ ಈಜಾಡುತ್ತಿದ್ದ ವೇಳೆ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿರುವುದು ವರದಿಯಾಗಿದೆ.

ಮೃತರನ್ನು ಮೈಸೂರು ಜಯನಗರ ನಿವಾಸಿಗಳಾದ ದಿವಾಕರ ಆರಾಧ್ಯ (45) ಮತ್ತು ನಿಂಗಪ್ಪ(60) ಎಂದು ಗುರುತಿಸಲಾಗಿದೆ.

ಮಂಗಳೂರು ನಗರದಲ್ಲಿ ನಡೆಯುತ್ತಿದ್ದ ಹಲಸಿನ ಮೇಳದಲ್ಲಿ ಭಾಗವಹಿಸಲೆಂದು ಮೈಸೂರಿನಿಂದ ದಿವಾಕರ ಆರಾಧ್ಯ, ನಿಂಗಪ್ಪ, ಅವಿನಾಶ್ ಸೇರಿದಂತೆ ನಾಲ್ವರು ಮಂಗಳೂರಿಗೆ ಆಗಮಿಸಿದ್ದರು. ಇಂದು ಬೆಳಗ್ಗೆ ಈ ನಾಲ್ವರು ಪಣಂಬೂರು ಬೀಚ್ ಗೆ ತೆರಳಿದ್ದು, ಅಲ್ಲಿ ಸಮುದ್ರದಲ್ಲಿ ಈಜಾಡುತ್ತಿದ್ದರು. ಈ ವೇಳೆ ಅಲೆಗಳ ಸೆಳೆತಕ್ಕೆ ಸಿಲುಕಿದ ದಿವಾಕರ ಆರಾಧ್ಯ ಮತ್ತು ನಿಂಗಪ್ಪ ನೀರಿನಲ್ಲಿ ಮುಳುಗಿ ಮೃತಪಟ್ಟರೆನ್ನಲಾಗಿದೆ. ಇನ್ನಿಬ್ಬರು ಅಪಾಯದಿಂದ ಪಾರಾಗಿದ್ದಾರೆ.

Leave A Reply

Your email address will not be published.