ಸರ್ವೆ -ಕರಂಬಾರು ರಸ್ತೆಯ ಅಭಿವೃದ್ಧಿಗೆ ಶಾಸಕರಿಂದ ಶಿಲಾನ್ಯಾಸ

ಸವಣೂರು : ಸರ್ವೆ -ಕರಂಬಾರು ರಸ್ತೆಯ ಅಭಿವೃದ್ಧಿಗೆ ಶಿಲಾನ್ಯಾಸ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ನೆರವೇರಿಸಿದರು.

ಬಳಿಕ ಮಾತನಾಡಿದ ಅವರು,ಶಾಸಕನಾಗಿ ಇಲ್ಲಿನವರೆಗಿನ ಅವಧಿಯಲ್ಲಿ ರಸ್ತೆ, ಕುಡಿಯುವ ನೀರು, ಸೇತುವೆ ಅಭಿವೃದ್ಧಿ ಸೇರಿದಂತೆ ಎಲ್ಲ ರಂಗಗಳ ಅಭಿವೃದ್ಧಿಗೂ ಅನುದಾನ ತಂದಿದ್ದೇನೆ ಎಂದರು.

ಪುತ್ತೂರು ಕ್ಷೇತ್ರದಲ್ಲಿ 1500 ಕಿ. ಮೀ. ಉದ್ದದ ಗ್ರಾಮೀಣ ರಸ್ತೆಗಳಿದ್ದು, ಇದರಲ್ಲಿ 160 ಕಿ. ಮೀ. ರಸ್ತೆಗಳನ್ನು ಜಿಲ್ಲಾ ಮುಖ್ಯ ರಸ್ತೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಇವುಗಳ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆ ಮೂಲಕ 68 ಕೋಟಿ ರೂ. ಮಂಜೂರಾಗಿದೆ. ಪುತ್ತೂರು – ಉಪ್ಪಿನಂಗಡಿ ನಡುವಿನ 13 ಕಿ. ಮೀ. ಉದ್ದದ ರಸ್ತೆ ಹಂತ ಹಂತವಾಗಿ ಚತುಷ್ಪಥವಾಗುತ್ತಿದ್ದು, ಇದಕ್ಕಾಗಿ ಒಟ್ಟು 22 ಕೋಟಿ ರೂ. ವಿನಿಯೋಗ ಮಾಡಲಾಗಿದೆ ಎಂದರು

ಈ ಸಂದರ್ಭದಲ್ಲಿ ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪವತಿ ,ಉಪಾಧ್ಯಕ್ಷೆ ಪ್ರೇಮ ಎಸ್ ಸರ್ವೆ, ಬಿಜೆಪಿ ಸರ್ವೆ ಶಕ್ತಿಕೇಂದ್ರದ ಸಂಚಾಲಕ ಅಶೋಕ್ ರೈ ಸೊರಕೆ , ಪುತ್ತೂರು ತಾಲ್ಲೂಕು ಬಿಜೆಪಿ ಎಸ್ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಜನಾರ್ದನ ಸರ್ವೆ, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಗೌತಮ್ ರೈ ಸರ್ವೆ,ಕಾರ್ಯದರ್ಶಿ ಗಣೇಶ್ ಬಿ, ಗ್ರಾ.ಪಂ. ಸದಸ್ಯರಾದ ಕರುಣಕರ ಗೌಡ ಎಲಿಯ, ಚಂದ್ರಶೇಖರ ಎನ್.ಎಸ್.ಡಿ, ಪ್ರವೀಣ್ ನಾಯ್ಕ ನೆಕ್ಕಿದಡ್ಕ ಹಿಂದೂ ಜಾಗರಣ ವೇದಿಕೆ ಸರ್ವೆ ಇದರ ಅಧ್ಯಕ್ಷರಾದ ಜಯಂತ್ ಭಕ್ತ ಕೋಡಿ, ಸ್ವಸ್ತಿಕ್ ಮೇಗಿನ ಗುತ್ತು,ನವೀನ್ ರೈ ಸರ್ವೆ,ಪದ್ಮನಾಭ ಸರ್ವೆ, ಲಿಂಗಪ್ಪ ಗೌಡ ಕರಂಬರು,ವಿರಪ್ಪ ಗೌಡ ಕರಂಬರು,ರಾಧಾಕೃಷ್ಣ ರೈ ರೇಂಜಲಾಡಿ, ಚೆನ್ನಪ್ಪ ಗೌಡ ಕಡ್ಯ ಜಿತೇಶ್ ಸರ್ವೆ, ಕೀತೀಶ್ ಗೌಡ, ಯೋಗೀಶ್ ಟಿ, ಲೋಕೇಶ್ ಗೌಡ ಸರ್ವೆ, ಮಹೇಶ್,ತಿಲಕ್ ರಾಜ್ ಕರಂಬರು, ಸುಂದರ ಬಲ್ಯಯ,ಸದಾಶಿವ ಭಂಡಾರಿ ಬೊಟ್ಯಾಡಿ, ರಾಮಕೃಷ್ಣ ಎಸ್.ಡಿ.,ರಿತೇಶ್ ,ಸುಂದರ ಸರ್ವೆ ಪಕ್ಷದ ಕಾರ್ಯಕರ್ತರು ಮತ್ತು ರಸ್ತೆಯ ಫಲಾನುಭವಿಗಳು ಉಪಸ್ಥಿತರಿದ್ದರು

ಅಶೋಕ್ ರೈ ಸೊರಕೆ ಸ್ವಾಗತಿಸಿದರು, ಚಂದ್ರಶೇಖರ್ ಎನ್.ಎಸ್.ಡಿ. ವಂದಿಸಿದರು. ಕರುಣಾಕರ ಎಲಿಯ ನಿರೂಪಿಸಿದರು

Leave A Reply