ಚರ್ಚ್ ಚಾರಿಟಿ ಕಾರ್ಯಕ್ರಮದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಗರ್ಭಿಣಿಯರು, ಮಕ್ಕಳು ಸೇರಿದಂತೆ 31 ಜನ ದುರ್ಮರಣ !!

ಭಾರಿ ಜನಜಂಗುಳಿಯಿಂದ ಉಂಟಾದ ಕಾಲ್ತುಳಿತದಲ್ಲಿ 31 ಜನರು ದಾರುಣವಾಗಿ ‌ಸಾವನ್ನಪ್ಪಿರುವ ಘಟನೆ ದಕ್ಷಿಣ ನೈಜೀರಿಯಾದ ಚರ್ಚ್ ಚಾರಿಟಿ ಕಾರ್ಯಕ್ರಮವೊಂದರಲ್ಲಿ ನಡೆದಿದೆ.

ರಿವರ್ಸ್ ಸ್ಟೇಟ್‍ನಲ್ಲಿರುವ ಕಿಂಗ್ಸ್ ಅಸೆಂಬ್ಲಿ ಪೆಂಟೆಕೋಸ್ಟಲ್ ಚರ್ಚ್ ಆಯೋಜಿಸಿದ್ದ ವಾರ್ಷಿಕ ಶಾಪ್ ಫಾರ್ ಫ್ರೀ ಚಾರಿಟಿ ಕಾರ್ಯಕ್ರಮಕ್ಕೆ ಸಾವಿರಾರು ಜನರು ನೆರೆದಿದ್ದರು. ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾಗಿತ್ತು. ಇದರಿಂದಾಗಿ ಗರ್ಭಿಣಿ ಹಾಗೂ ಹಲವು ಮಕ್ಕಳು ಸೇರಿದಂತೆ 31 ಜನರು ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲದೇ ಅನೇಕರಿಗೆ ಗಂಭೀರ ಗಾಯಗಳಾಗಿವೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ದತ್ತಿ ಕಾರ್ಯಕ್ರಮವು ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗಬೇಕಿತ್ತು. ಆದರೆ ಸರತಿ ಸಾಲಿನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಜನರು ಬೆಳಗ್ಗೆ 5 ಗಂಟೆಗೆ ಜನರು ಆಗಮಿಸಿದ್ದರು. ಇದಾದ ಬಳಿಕ ಗೇಟ್‍ಗೆ ಬೀಗ ಹಾಕಿದ್ದನ್ನು ಒಡೆದು ನೂಕುನುಗ್ಗಲು ಉಂಟಾಗಿದ್ದು, ಇದರಿಂದಾಗಿ ಕಾಲ್ತುಳಿತವಾಗಿದೆ. ಕಾಲ್ತುಳಿತದ ನಂತರ ಸಂತ್ರಸ್ತರ ಸಂಬಂಧಿಕರು ಕೆಲವು ಚರ್ಚ್ ಸದಸ್ಯರ ಮೇಲೆ ದಾಳಿ ಮಾಡಿದ್ದಾರೆ. ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಲು ಚರ್ಚ್ ನಿರಾಕರಿಸಿದೆ. ಘಟನೆ ಸಂಬಂಧಿಸಿ ಅಲ್ಲಿನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸರ್ಕಾರದ ಅಂಕಿಅಂಶಗಳ ಪ್ರಕಾರ 80 ಮಿಲಿಯನ್‍ಗಿಂತಲೂ ಹೆಚ್ಚು ಜನರು ಬಡತನದಲ್ಲಿ ವಾಸಿಸುವ ಆಫ್ರಿಕಾದ ಅತಿದೊಡ್ಡ ಆರ್ಥಿಕತೆಯಾದ ನೈಜೀರಿಯಾದಲ್ಲಿ ಇಂತಹ ಘಟನೆಗಳು ಸಾಮಾನ್ಯವಂತೆ.

Leave a Reply

error: Content is protected !!
Scroll to Top
%d bloggers like this: