ಪುನೀತ್ ರಾಜ್ ಕುಮಾರ್ ಅಗಲಿ ಇಂದಿಗೆ 7 ತಿಂಗಳು; ವಿಶೇಷ ವಿಡಿಯೋ ಹಂಚಿಕೊಳ್ಳುವ ಮೂಲಕ ಭಾವನಾತ್ಮಕವಾಗಿ ನೆನಪಿಸಿಕೊಂಡ ರಾಘವೇಂದ್ರ ರಾಜ್‌ಕುಮಾರ್

ಅಕ್ಟೋಬರ್ 29 ರಂದು ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲ ಅಗಲಿದ ದಿನ. ಇಂದು ನ.29, ಅಪ್ಪು ನಮ್ಮನ್ನು ಅಗಲಿ ಇಂದಿಗೆ 7 ತಿಂಗಳು ಕಳೆಯಿತು. ಅವರ ನೆನಪಿನಲ್ಲಿ ರಾಘವೇಂದ್ರ ರಾಜ್‌ಕುಮಾರ್ ಇಂದು ಅಪ್ಪು ಜತೆಗಿನ ವಿಶೇಷ ವಿಡಿಯೋ ಹಂಚಿಕೊಂಡು ಅಪ್ಪು ಅವರನ್ನು ನೆನಪಿಸಿಕೊಂಡಿದ್ದಾರೆ.

ಇಂದು (ನವೆಂಬರ್ 29) ರಾಜ್ ಕುಟುಂಬ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದೆ. ಏಳು ತಿಂಗಳ ಹಿಂದೆ ಈ ದಿನ ಕರ್ನಾಟಕದವರ ಪಾಲಿಗೆ ಕರಾಳ ದಿನ.

https://www.instagram.com/tv/CeHiL3AjpNO/?igshid=MDJmNzVkMjY=

ಅಕ್ಟೋಬರ್ 29ರಂದು ಪುನೀತ್ ರಾಜ್‌ಕುಮಾರ್‌
ಇನ್ನಿಲ್ಲ ಎಂಬ ಸುದ್ದಿ ಬರಸಿಡಿಲಿನಂತೆ ಬಂದು ಎರಗಿತ್ತು. ಕರ್ನಾಟಕದ ಜನತೆಗೆ ಇದೊಂದು ನೋವಿನ ಸಂಗತಿಯೇ ಆಗಿತ್ತು. ಈ ಘಟನೆ ನಡೆದು ಏಳು ತಿಂಗಳು ಕಳೆದಿದೆ. ಆದರೂ, ಪವರ್ ಸ್ಟಾರ್ ನಮ್ಮ ಜತೆಗಿಲ್ಲ ಎಂಬ ನೋವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಈ ಕಹಿ ದಿನವನ್ನು ಎಲ್ಲರೂ ನೆನಪು ಮಾಡಿಕೊಳ್ಳುತ್ತಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ ಅವರು ಅಪ್ಪು ಜತೆಗಿನ ವಿಶೇಷ ವಿಡಿಯೋ ಹಂಚಿಕೊಂಡು ಅಪ್ಪು ಅವರನ್ನು ನೆನಪಿಸಿಕೊಂಡಿದ್ದಾರೆ. ಇಂದು ಅಂಬರೀಷ್ ಜನ್ಮದಿನ ಕೂಡ ಹೌದು. ಹೀಗಾಗಿ, ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಅಭಿಮಾನಿಗಳು, ಅಂಬರೀಷ್ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

Leave A Reply