ವಿಮಾನ ದಿಢೀರ್ ಕಣ್ಮರೆ | ನಾಲ್ವರು ಭಾರತೀಯರ ಸಹಿತ 22 ಮಂದಿ ನಾಪತ್ತೆ

Share the Article

22 ಮಂದಿ ಪ್ರಯಾಣಿಕರಿದ್ದ ವಿಮಾನವೊಂದು ಸಂಪರ್ಕ ಕಳೆದುಕೊಂಡಿರುವ ಘಟನೆಯೊಂದು ನೇಪಾಳದಲ್ಲಿ ನಡೆದಿದೆ. ಪೋಖರಾದಿಂದ ನೇಪಾಳದ ಜೋಮ್ಸೋಮ್ ಗೆ ಹಾರುತ್ತಿದ್ದ ವಿಮಾನವು ಭಾನುವಾರ ಬೆಳಗ್ಗೆ ಸಂಪರ್ಕ ಕಳೆದುಕೊಂಡಿದೆ ಎಂದು ಅಧಿಕಾರಿಗಳು
ತಿಳಿಸಿದ್ದಾರೆ.

ತಾರಾ ಏರ್‌ನ 9 NAET ಅವಳಿ-ಎಂಜಿನ್ ವಿಮಾನವು ಬೆಳಿಗ್ಗೆ 9.55 ಕ್ಕೆ ಹಾರಿದ್ದು ಸ್ವಲ್ಪ ಸಮಯದ ನಂತರ ರಾಡಾರ್ ನಿಂದ ಸಂಪರ್ಕ ಕಳೆದುಕೊಂಡಿದೆ. ವಿಮಾನದ ಪತ್ತೆಗೆ ಫೀಸ್ಟೆಲ್ ಹೆಲಿಕಾಪ್ಟರ್ ಕಳುಹಿಸಲಾಗಿದೆ.

ವಿಮಾನದ ಪೈಲಟ್ ಅವರನ್ನು ಪ್ರಭಾಕರ ಪ್ರಸಾದ್ ಘಿಮಿರೆ ಎಂದು ಗುರುತಿಸಲಾಗಿದ್ದು, ವಿಮಾನದಲ್ಲಿ ನಾಲ್ವರು ಭಾರತೀಯರು ಹಾಗೂ ಇಬ್ಬರು ವಿದೇಶಿ ಪ್ರಜೆಗಳಿದ್ದಾರೆ. ಉಳಿದ ಪ್ರಯಾಣಿಕರು ನೇಪಾಳಿ ಪ್ರಜೆಗಳಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

Leave A Reply

Your email address will not be published.