ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಮೂತ್ರದ ಬಿಯರ್! ಟೇಸ್ಟ್ ಮಾಡಿದ ಗ್ರಾಹಕರು ಕಂಪ್ಲೀಟ್ ಫಿದಾ !!!

ಈ ಸುದ್ದಿ ನೋಡಿದರೆ ನೀವು ,ಛೀ ಅಂತ ಮೂಗು ಮುರಿಯೋದು ಗ್ಯಾರೆಂಟಿ! “ಹೀಗೆಲ್ಲಾ ಮಾಡುತ್ತಾರಾ ? ಅಂತ ಅಸಹ್ಯ ಪಟ್ಟುಕೊಳ್ಳೋದೂ ಗ್ಯಾರೆಂಟಿ. ಬಿಯರ್ ಈ ರೀತಿಯಾಗಿ ಕೂಡಾ ಮಾಡ್ತಾರೆ ಅಂದರೆ ಒಮ್ಮೆ ಎಲ್ಲರಿಗೂ ವಾಕರಿಕೆ ಬರುವುದು ಸಹಜ. ಯಾಕೆಂದ್ರೆ ಇದು ಮಾನವನ ಮೂತ್ರದಿಂದ ಬಿಯರ್ ಮಾಡುವ ಸುದ್ದಿ. ಇದನ್ನು ಕುಡಿದ ಗ್ರಾಹಕರು ಕಂಪ್ಲೀಟ್ ಫಿದಾ ಆಗಿದ್ದಾರಂತೆ. ಅದರ ರುಚಿ ಮಾಮೂಲಿ ಬೀರಿನ ರುಚಿಗಿಂತ ದುಪ್ಪಟ್ಟು ಉಂಟoತೆ. ಯಾವುದಕ್ಕೂ ಮೊದಲು ಒಂದು ” ಚಿಯರ್ಸ್ ” ಹೇಳಿ !!

ಹೌದು, ಸಿಂಗಾಪುರದಲ್ಲಿ ಮಾನವನ ಮೂತ್ರ ಬಳಸಿ ಉತ್ತಮ ಗುಣಮಟ್ಟದ, ಶುದ್ಧ ಹಾಗೂ ರುಚಿಕರ ಬಿಯರ್ ತಯಾರು ಮಾಡಲಾಗಿದೆ. “ನ್ಯೂಬ್ರೂ” ಹೆಸರಿನ ಈ ಬಿಯರ್ ಈಗಾಗಲೇ ಮಾರುಕಟ್ಟೆಯಲ್ಲಿ ಹಂಗಾಮಾ ಮಾಡುತ್ತಿದೆ. ಸಾಮಾನ್ಯ ಬಿಯರ್‌ನಂತೆ ಇರುವ ಇದು ಸಾಂಪ್ರಾಯಿಕ ರುಚಿಗಿಂತ ಬೇರೆನೇ ರುಚಿ ಕೊಡುತ್ತಿದೆಯಂತೆ. ಇದಕ್ಕೆ ಕಾರಣ ಮಾನವ ಮೂತ್ರ ಅಂತ ಕಂಪನಿ ಹೇಳಿದೆ. ಕಸದಿಂದ ನೊರೆ ಭರಿತ ರಸ ಹೀರಿ ತೋರಿಸಿದೆ ಅಲ್ಲಿನ ಕಂಪನಿ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಮಾನವನ ಮೂತ್ರ ಅಷ್ಟೇ ಅಲ್ಲ, ಒಳಚರಂಡಿಗಳಿಂದ ಬರುವ ಕೊಳಚೆ ನೀರಿನಿಂದಲೂ ಸಹ ಬಿಯರ್ ಬರಿಸಲಾಗುತ್ತಿದೆ. ಅಲ್ಲಿನ ಒಳ ಚರಂಡಿ ನೀರಿನಿಂದಲೂ  ಸಹ ಬಿಯರ್ ತಯಾರಿಸಲಾಗುತ್ತದೆ. ಅತ್ಯಾಧುನಿಕ ವಿಧಾನಗಳಿಂದ ಚರಂಡಿಯ ಕೊಳಚೆ ನೀರನ್ನು RO ಮತ್ತಿತರ ಮಲ್ಟಿಪಲ್ ಫಿಲ್ಟ್ರೇಶನ್ ಮೂಲಕ ಶುದ್ಧೀಕರಣ ಮಾಡಲಾಗುತ್ತದೆ. ಬಳಿಕ ಅದನ್ನು ಬಿಯರ್ ತಯಾರಿಕೆಗೆ ಬಳಸಲಾಗುತ್ತಿದೆ ಅಂತ ಸಿಂಗಾಪುರದ ಬಿಯರ್ ತಯಾರಿಕಾ ಕಂಪನಿ ಹೇಳಿದೆ.

ನ್ಯೂಬ್ರೂ ಎನ್ನುವುದು ಸಿಂಗಾಪುರ ನೀರು ಸರಬರಾಜು ಮಂಡಳಿಯು ಶುದ್ದೀಕರಿಸಿ, ಸೋಸಿ, ಪೂರೈಕೆ ಮಾಡಿರುವ ಶುದ್ಧ ನೀರಿನಲ್ಲಿ ಉತ್ಪಾದಿಸಿದ ಬಿಯರ್ ಆಗಿದೆ. ಈ ಬಿಯರ್ ಉತ್ಪಾದನೆಗಾಗಿ ಪೂರೈಕೆ ಆಗುವ ಹೊಸ ನೀರನ್ನು ಕಟ್ಟುನಿಟ್ಟಾದ ಪರೀಕ್ಷಿಸಿ, ಹಲವು ಹಂತಗಳಲ್ಲಿ ಶೋಧಿಸಿ, ಕುಡಿಯುವುದಕ್ಕೆ ಸುರಕ್ಷಿತವಾಗಿದೆಯೇ ಎಂಬುದನ್ನು ಮೊದಲು ಖಾತ್ರಿಪಡಿಸಿಕೊಳ್ಳಲಾಗುತ್ತದೆ.

ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯನೀರಿನ ಸಂಸ್ಕರಣೆಗೆ ವಿವಿಧ ಯೋಜನೆಗಳು ಈಗಾಗಲೇ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇದರೊಂದಿಗೆ, ಬಿಯರ್ ಅನ್ನು ಮಾಲಿನ್ಯಕಾರಕಗಳು ಮತ್ತು ಮೂತ್ರದಿಂದ ತಯಾರಿಸಲಾಗುತ್ತದೆ. ಸಿಂಗಾಪುರದಲ್ಲಿ ಪ್ರಸ್ತುತ ನ್ಯೂಬ್ರೂ ಅನ್ನು ಹಸಿರು ಬಿಯರ್ ಎಂದು ಪ್ರಚಾರ ಮಾಡಲಾಗಿದೆ. ನೀರಿನ ಅಭಾವದ ಬಗ್ಗೆ ಜಾಗೃತೆ ಮೂಡಿಸುವ ಕೆಲಸ ಸಿಂಗಾಪುರದ ನೀರಿನ ಅಭಾವದ ಬಗ್ಗೆ ಜಾಗೃತಿ ಮೂಡಿಸಲು ಈ ಪಾನೀಯವನ್ನು ಪ್ರಾರಂಭಿಸುವ ಮೂಲಕ ದೇಶದ ಜಲ ಸಂಸ್ಥೆ ಅನಿವಾರ್ಯ ನೀರಿನ ಬಿಕ್ಕಟ್ಟನ್ನು ನಿಭಾಯಿಸಲು ಈ ಮಾರ್ಗವನ್ನು ಕಂಡುಕೊಂಡಿದೆ. ನೊರೆಯಾಡುವ ಮೂತ್ರದಿಂದ ರುಚಿಕರ ನೊರೆ ಉಕ್ಕುವ ಬೀರ್ ತಯಾರಿಸಿ, ಅದನ್ನು ಮಾರ್ಕೆಟ್ ಕೂಡಾ ಮಾಡಿ, ಜನರಿಂದ ಸೈ ಎನಿಸಿಕೊಂಡ ಕಂಪನಿಯ ಕಾರ್ಯಕ್ಷಮತೆಗೆ ಜೈ ಅನ್ನಲೇ ಬೇಕಲ್ಲವೇ ?!

ಈ ಹಿಂದೆ ಕ್ರಾಫ್ಟ್ ಬಿಯರ್ ಕಂಪನಿ ‘ಸ್ಟೋನ್ ಬ್ರೂಯಿಂಗ್’ 2017 ರಲ್ಲಿ ‘ಸ್ಟೋನ್ ಫುಲ್ ಸರ್ಕಲ್ ಪೇಲ್ ಆಲೆ’ ಅನ್ನು ಬಿಡುಗಡೆ ಮಾಡಿತ್ತು. ‘ಕ್ರಸ್ಟ್ ಗ್ರೂಪ್’ ಮತ್ತು ‘ಸೂಪರ್ ಲೊಕೊ ಗ್ರೂಪ್’ ನಂತಹ ಇತರ ಬ್ರೂವರಿಗಳು ಶುದ್ಧ ಒಳಚರಂಡಿ ಮರುಬಳಕೆಯ ನೀರನ್ನು ಬಳಸಿಕೊಂಡು ಕ್ರಾಫ್ಟ್ ಬಿಯರ್‌ನ ತಮ್ಮದೇ ಆದ ಆವೃತ್ತಿಯನ್ನು ಬಿಡುಗಡೆ ಮಾಡಿದ್ದವು.

Leave a Reply

error: Content is protected !!
Scroll to Top
%d bloggers like this: