ಕಾರು ಡಿಕ್ಕಿ: ಬಾಲಕಿ ಸಾವು, ಏಳು ಜನರಿಗೆ ಗಾಯ

ಹೊಸಪೇಟೆ ಮೇ೨೮: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಬೈಲುವದ್ದಿಗೇರಿ ಗ್ರಾಮದ ಹೊರವಲಯದಲ್ಲಿ ಶುಕ್ರವಾರ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಬಾಲಕಿ ಮೃತಪಟ್ಟು ಏಳು ಜನರು ಗಾಯಗೊಂಡಿದ್ದಾರೆ.

ನಗರದ ನಿವಾಸಿ ಬಾಲಕಿ ರೋಷಿಣಿ(೧೪) ಮೃತಪಟ್ಟ ಬಾಲಕಿ. ಹೊಸಪೇಟೆಯ ಸಿರಿಸಿನಕಲ್ಲು ಪ್ರದೇಶದಿಂದ ಬಳ್ಳಾರಿಗೆ ಹೊರಟಿದ್ದರು.

ಗಾಯಾಳುಗಳನ್ನು ಉಪಚರಿಸಿದ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದರು. ಸ್ಥಳಕ್ಕೆ ತಕ್ಷಣ ಆಗಮಿಸಿದ ಸಮಾಜ ಸೇವಕ ಪ್ರಕಾಶ್ ಮೆಹರವಾಡೆ ತನ್ನ ಕಾರಿನಲ್ಲೇ ನಗರದ ಉಪವಿಭಾಗ ಮಟ್ಟದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply