ವಿಚ್ಛೇದನಕ್ಕೆ ಕಾರಣವಾದ ಮ್ಯಾಗಿ ! ನ್ಯಾಯಾಧೀಶರು ಹೇಳಿದ್ದೇನು ?

0 9

ಪತಿಯೊಬ್ಬ ತನ್ನ ಪತ್ನಿ ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ರಾತ್ರಿ ಊಟ ಎಲ್ಲೆಲ್ಲೂ ಮ್ಯಾಗಿ ಮಾಡಿ ಹಾಕುತ್ತಿದ್ದಾಳೆಂದು ಬೇಸತ್ತು ಪತ್ನಿಗೆ ವಿಚ್ಛೇದನ ನೀಡಿದ್ದಾನೆ.

ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್​ ಕೋರ್ಟ್​ನ ನ್ಯಾಯಾಧೀಶರಾದ  ನ್ಯಾ. ಎಂ ರಘುನಾಥ್,  ಎಲ್ಲದಕ್ಕೂ ಮ್ಯಾಗಿ ಮಾಡಿ ಕೊಡುತ್ತಿದ್ದರಿಂದ ಬೇಸತ್ತ ಪತಿಯೊಬ್ಬ ಪತ್ನಿಗೆ ವಿಚ್ಛೇದನ ನೀಡಿದ್ದ ಹಳೇ ಘಟನೆಯನ್ನ ವಿವರಿಸಿದರು

ನಾನು ಬಳ್ಳಾರಿಯಲ್ಲಿ ಜಿಲ್ಲಾ ನ್ಯಾಯಾಧೀಶರಾಗಿದ್ದ ವೇಳೆ ಮ್ಯಾಗಿ, ನೂಡಲ್​ ಹೊರತುಪಡಿಸಿ ಬೇರೆ ಯಾವುದೇ ಅಡುಗೆಯನ್ನು ಮಾಡಲು ನನ್ನ ಹೆಂಡತಿಗೆ ಗೊತ್ತಿಲ್ಲ. ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಊಟಕ್ಕೆ ಪ್ರತಿದಿನ ಮ್ಯಾಗಿ, ನೂಡಲ್ಸ್ ಮಾಡುತ್ತಿದ್ದಳು. ಪ್ರಾವಿಷನ್ ಸ್ಟೋರ್​ಗೆ ಹೋದರೆ ರೇಷನ್​ ತರುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದ. ಈ ಪ್ರಕರಣಕ್ಕೆ ಮ್ಯಾಗಿ ಕೇಸ್ ಎಂದು ಹೆಸರಿಡಲಾಗಿತ್ತು. ವಾದ-ಪ್ರತಿವಾದ ಅಲಿಸಿದ ಬಳಿಕ ಅಂತಿಮವಾಗಿ ದಂಪತಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡಿದ್ದರು ಎಂದು ಮೈಸೂರಿನಲ್ಲಿ ನಡೆದ ಲೋಕ್ ಅದಾಲತ್ ಸಂದರ್ಭದಲ್ಲಿ ಹೇಳಿದರು.

ಮೈಸೂರು ಜಿಲ್ಲೆಯು ಐದು ಕೌಟುಂಬಿಕ ನ್ಯಾಯಾಲಯಗಳನ್ನು ಹೊಂದಿದ್ದು, ಪ್ರತಿಯೊಂದೂ ಸುಮಾರು 500 ವೈವಾಹಿಕ ಪ್ರಕರಣಗಳನ್ನು ಹೊಂದಿದೆ ಮತ್ತು ಅವುಗಳಲ್ಲಿ ಸುಮಾರು 800 ಪ್ರಕರಣಗಳು ವಿಚ್ಛೇದನಕ್ಕಾಗಿ ಇವೆ. ವಿಚ್ಛೇದನ ಪ್ರಕರಣಗಳು ವರ್ಷಗಳಲ್ಲಿ ತೀವ್ರವಾಗಿ ಹೆಚ್ಚುತ್ತಿವೆ. ವಿಚ್ಛೇದನ ಪಡೆಯುವ ಮೊದಲು ದಂಪತಿಗಳು ಕನಿಷ್ಠ ಒಂದು ವರ್ಷ ಒಟ್ಟಿಗೆ ಇರಬೇಕಾಗುತ್ತದೆ. ಅಂತಹ ಕಾನೂನು ಇಲ್ಲದಿದ್ದರೆ, ಮದುವೆ ಮಂಟಪಗಳಿಂದಲೇ ನೇರವಾಗಿ ವಿಚ್ಛೇದನ ಅರ್ಜಿಗಳನ್ನು ಸಲ್ಲಿಸುತ್ತಿದ್ದರೇನೋ ಎಂದು ಅವರು ಹೇಳಿದರು.

Leave A Reply