ಪಾರ್ಕಿನಲ್ಲಿ ಯುವತಿಯ ಉಡುಪನ್ನು ಎತ್ತಿ ಇಣುಕಿ ನೋಡಿದ ರಸಿಕ ಕಪಿರಾಯ!!

ಮಂಗನಿಂದ ಮಾನವ ಅನ್ನೋ ಮಾತು ನಿಜ. ಎಷ್ಟೋ ಮಂದಿ ಕೀಟಲೆ, ತರಲೆ ಮಾಡಿದಾಗ ಏನೋ ಮಂಗನಾಗೆ ಆಡ್ತೀಯಾ ಅಂತ ಕೇಳ್ತಾರೆ…ಬಹುಶಃ ಮಂಗ ಇದೇ ತರಹ ಉಪದ್ರ ಮಾಡುವುದಕ್ಕೆ ಈ ರೀತಿ ಹೇಳುತ್ತಾರೆ ಅಂತ ಕಾಣುತ್ತೆ. ಆದರೆ ಇಲ್ಲಿ ಕೋತಿಯೊಂದು ಒಂದು ಹುಡುಗಿ ಜೊತೆ ಕೀಟಲೆ ಮಾಡಿದೆ, ಅಷ್ಟೇ ಅಲ್ಲ ಆ ಯುವತಿ ಮೇಲೆ ಆಕರ್ಷಣೆಗೊಂಡಿದೆ ಎನ್ನಬಹುದು. ಅಷ್ಟೇ ಅಲ್ಲ ಆ ಯುವತಿ ಧರಿಸಿದ ಹಾರ, ಬಟ್ಟೆ ಸಖತ್ ಇಷ್ಟ ಪಟ್ಟಿದೆ ಈ ಕಪಿರಾಯ. ಇಷ್ಟು ಮಾತ್ರ ಆದರೆ ಒಕೆ, ಆದರೆ ಆಕೆ ಧರಿಸಿದ ಸ್ಕರ್ಟ್ ನ್ನು ಮೇಲಕ್ಕೆತ್ತಿ ಏನಿದೆ ಅಂತ ಚೆಕ್ ಕೂಡಾ ಮಾಡಿದೆ … ಇದಕ್ಕೆ ಕಪಿಚೇಷ್ಠೆ ಅನ್ನೋದಾ ? ಈ ವೈರಲ್ ವೀಡಿಯೋ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಜೆನ್ ಎಂಬ ಯುವತಿ ಪಾರ್ಕ್‌ನಲ್ಲಿ ಕುಳಿತು ಸೆಲ್ಫಿ
ವೀಡಿಯೋ ರೆಕಾರ್ಡ್ ಮಾಡುತ್ತಾ ಕೋತಿಗಳ ಈ ತುಂಟಾಟದ ವೀಡಿಯೋವನ್ನು ಸೆರೆ ಹಿಡಿದಿದ್ದಾಳೆ. ಈ ವೀಡಿಯೋದಲ್ಲಿ ಎರಡು ಕೋತಿಗಳಲ್ಲಿ ಒಂದು ಮಂಗವು ಅವಳ ಕಡೆಗೆ ಓಡುತ್ತಾ ಬಂದು, ಮೆಲ್ಲನೆ ಆಕೆಯನ್ನು ನೋಡುತ್ತೆ, ಆಮೇಲೆ ಏನಾಗುತ್ತೋ ಕೋತಿಗೆ, ಆಕೆ ಧರಿಸಿದ್ದ ಹಾರವನ್ನು ಮುಟ್ಟುತ್ತೆ. ಆ ಸಂದರ್ಭದಲ್ಲಿ ಕೋತಿಗೆ ಆಕೆ ಹಾಯ್ ಕೂಡಾ ಹೇಳುತ್ತಾಳೆ.

https://www.instagram.com/reel/Cdp8DAulKM-/?utm_source=ig_web_copy_link

ಸ್ವಲ್ಪ ಸಮಯದ ನಂತರ, ಮತ್ತೊಂದು ಕೋತಿ ಆಕೆಯ ಹತ್ತಿರ ಬಂದಿದೆ. ಈ ಕೋತಿ ಆ ಯುವತಿ ಧರಿಸಿದ್ದ ಉಡುಪನ್ನು ಗಮನವಿಟ್ಟು ನೋಡುತ್ತೆ. ಕೂಡಲೇ ಆಕೆ ಧರಿಸಿದ್ದ ನೀಲಿ ಬಣ್ಣದ ಉಡುಪನ್ನು ಹಿಂದಿನಿಂದ ಮೇಲಕ್ಕೆತ್ತುತ್ತದೆ. ಅದಕ್ಕೆ ಏನು ಕಾಣಿಸುತ್ತೋ? ಅಂತೂ‌ ಕೋತಿ ಅದೃಷ್ಟ ಮಾಡಿದೆ ಅಂತಾನೇ ಹೇಳಬಹುದು‌.

ಕೋತಿ ಉಡುಪಿನ ಒಳಗೆ ಇಣುಕಿ ನೋಡಲು ಪ್ರಯತ್ನಿಸುತ್ತದೆ, ಕೂಡಲೇ ಆಕೆ ನಗುತ್ತಾ ತನ್ನ ಉಡುಪನ್ನು ಮೇಲಕ್ಕೆತ್ತದಂತೆ ತಡೆಯುತ್ತಾಳೆ. ಅಲ್ಲಿಂದ ಮಂಗ ಓಡಿ ಹೋಗುತ್ತದೆ. ಯುವತಿಯು ಕೋತಿಯ ಈ ಚೇಷ್ಠೆಗೆ ನಗುತ್ತಾಳೆ. ಬಟ್ಟೆ ಮೇಲಕ್ಕೆತ್ತಿ ಕೂಡಾ ಪ್ರಯೋಜನ ಆಗಿಲ್ಲ ಎಂಬುದನ್ನು ತಿಳಿದು ಯುವತಿ ತಿಳಿದು ತಡೆಯಲಾಗದೆ ನಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರನ್ನು ಕೂಡ ನಗೆಗಡಲಲ್ಲಿ ತೇಲಿಸಿದೆ.

Leave A Reply